ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಬಾಲತಪಸ್ವಿ ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೭೫ ನೇ ಯಾತ್ರಾ ಮಹೋತ್ಸವ, ತಪೋಭೂಷಣ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೨೩ ನೇ ಸಂಸ್ಮರಣೋತ್ಸವದಂಗವಾಗಿ ಸೋಮವಾರ ಸುಭಾಸಗೌಡ ಪಾಟೀಲ, ವಿಶ್ವನಾಥಗೌಡ ಪಾಟೀಲ ಅವರಿಂದ ವೀರಶೈವ ಧರ್ಮ ಧ್ವಜಾರೋಹಣ ನೆರವೇರಿತು. ನಂತರ ಸಾಮೂಹಿಕ ಶಿವದೀಕ್ಷಾ ಕಾರ್ಯಕ್ರಮ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಇಂಗಳೇಶ್ವರದ ಬೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ನೆರವೇರಿತು.
ನಂತರ ಕುಂಭಮೇಳ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಚನ್ನಗೌಡ ಸಂಗನಗೌಡ ಪಾಟೀಲ ಅವರ ಮನೆಯಿಂದ ಗುರು ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ನೂತನ ರಜತ ಮೂರ್ತಿ, ಲಿಂ.ಉಮೇಶ ಮಹಾಜನಶೆಟ್ಟಿ ಮಲಘಾಣ ಅವರ ಸೇವೆಯ ರಜತ ಕಳಸ, ಮಹಾಜನಶೆಟ್ಟಿ ಭಕ್ತರ ಸೇವೆಯೊಂದಿಗೆ ಕಳಸಾಗಮನ, ಲಿಂ. ಶಿವಯ್ಯ ಲಟಗಿ, ಸಿದ್ದಯ್ಯ ಮಠ, ಸಿದ್ದಯ್ಯ ಮಠ, ವಿವೇಕಾನಂದ ಮಠ, ಮಹಾಂತಯ್ಯ ತಂಬೂರಿಯವರ ಪೌರೋಹಿತ್ಯದಲ್ಲಿ ಗುರು ಮಹಾಂತೇಶ್ವರರ, ಗುರು ಸಂಗನಬಸವ ಶಿವಾಚಾರ್ಯರ ಕರ್ತೃ ಗದ್ದುಗೆಗಳಿಗೆ ಯರನಾಳದ ಸಂಗನಬಸಪ್ಪ ತಳೇವಾಡ ಅವರ ಕುಟುಂಬದಿಂದ,ಅನೇಕ ಭಕ್ತರ ಸೇವೆಯಿಂದ ರುದ್ರಾಭಿಷೇಕ, ಬಿಲ್ವಾರ್ಚನೆ,ಪುಪ್ಪಾರ್ಚನೆ ನೆರವೇರಿದ ನಂತರ ಕಳಸಾರೋಹಣ ನೆರವೇರಿದ ನಂತರ ಮಹಾಮಂಗಳಾರತಿ ಜರುಗಿತು. ನಂತರ ಅಸಂಖ್ಯ ಮಾತೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆದ ನಂತರ ಮಹಾಪ್ರಸಾದ ನಡೆಯಿತು.
ಮೇ. ೭ ರಂದು ಸಂಜೆ ೭ ಗಂಟೆಗೆ ಪುರಾಣ ಮಂಗಲ, ಎಸ್ಎಸ್ಎಲ್ಸಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗುರುರಕ್ಷೆ ಹಾಗೂ ಧರ್ಮ ಚಿಂತನಾ ಸಮಾರಂಭ ನಡೆಯಲಿದೆ. ಸಾನಿಧ್ಯವನ್ನು ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಶಿವಗಂಗಾದ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸುವರು.ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು.
ಮೇ. ೮ ರಂದು ಬೆಳಗ್ಗೆ ೮ ಗಂಟೆಗೆ ಗುರು ಮಹಾಂತೇಶ್ವರರ ಹಾಗೂ ಗುರು ಸಂಗನಬಸವ ಶಿವಾಚಾರ್ಯರ ರಜತ ಮೂರ್ತಿಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯವೈಭವದೊಂದಿಗೆ ನೆರವೇರಲಿದೆ. ನಂತರ ರಥೋತ್ಸವ, ಶ್ರೀಮಠದ ಪೂಜ್ಯರ ಸಿಂಹಾಸನಾರೋಹಣ ನೆರವೇರಲಿದೆ.
ಬೆಳಗ್ಗೆ ೧೧ ಗಂಟೆಗೆ ಗುರು ಮಹಾಂತೇಶ್ವರ ಶ್ರೀ ಪ್ರಶಸ್ತಿ ಪ್ರದಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಧರ್ಮಜಾಗೃತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಾನಿಧ್ಯವನ್ನು ಕೊಟ್ಟೂರಿನ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆಯನ್ನು ಕೊಣ್ಣೂರಿನ ಡಾ.ಶಿವಕುಮಾರ ಶಿವಾಚಾರ್ಯರು ವಹಿಸುವರು. ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸುವರು. ಮಸೂತಿಯ ಪ್ರಭುಕುಮಾರ ಶಿವಾಚಾರ್ಯರಿಂದ , ಗುಳೇದಗುಡ್ಡದ ಡಾ.ನೀಲಕಂಠ ಶಿವಾಚಾರ್ಯರಿಂದ ಉಪದೇಶ ಮಾಋತ ನಡೆಯಲಿದೆ. ನೇತೃತ್ವವನ್ನು ಮನಗೂಳಿಯ ಪಟ್ಟೀಕಂಥಿ ಹಿರೇಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಡವಡಗಿಯ ಬೃಂಗೀಶ್ವರಲಿಂಗ ಶಿವಾಚಾರ್ಯರು ವಹಿಸುವರು. ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಎಸ್.ಆಲೂರ ಅವರಿಗೆ ಗುರು ಮಹಾಂತೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಮುಖಂಡರಾದ ಅಪ್ಪುಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ, ಎಸ್.ಜಿ.ಹಾವಣ್ಣವರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಐ. ರೇವೂರಕರ ಆಗಮಿಸುವರು ಎಂದು ಶ್ರೀಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

