ದೇವರಹಿಪ್ಪರಗಿ: ಪಶುಆಸ್ಪತ್ರೆಯ ವೈದ್ಯರು ನಿಗದಿತ ಸಮಯಕ್ಕೆ ಬಂದು ಚಿಕಿತ್ಸೆ ನೀಡದ ಪರಿಣಾಮ ಎಮ್ಮೆ ಸಾವಿಗೀಡಾಗಿದೆ ಎಂದು ಆರೋಪಿಸಿ ರೈತರು ಎಮ್ಮೆಯ ಕಳೇಬರದೊಂದಿಗೆ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ಕೈಗೊಂಡರು.
ಪಟ್ಟಣದಲ್ಲಿ ಸೋಮವಾರ ಈ ಘಟನೆ ಜರುಗಿದ್ದು, ಈ ಕುರಿತು ರೈತ ಹಾಗೂ ಎಮ್ಮೆಯ ಮಾಲೀಕ ಅಜೀಜ್ ಯಲಗಾರ ಮಾತನಾಡಿ, ಎಮ್ಮೆ ಕಳೆದ ೫ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಕಾರಣ ದಿ;೨ ರಂದು ಆಸ್ಪತ್ರೆಗೆ ತೆರಳಿ ಎಮ್ಮೆಗೆ ಚಿಕಿತ್ಸೆ ನೀಡುವಂತೆ ಕೇಳಿಕೊಂಡಿದ್ದೇ ಆದರೆ ವೈದ್ಯರು ಅನಗತ್ಯ ಕಾರಣ ನೀಡಿ ಚಿಕಿತ್ಸೆ ನೀಡದೇ ಇದ್ದ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಎಮ್ಮೆ ಹೆಚ್ಚು ಜ್ವರದಿಂದ ಬಳಲಿ ಸಾವಿಗೀಡಾಯಿತು. ವೈದ್ಯರು ಸ್ವಲ್ಪವೇ ಮಾನವೀಯತೆ ಮೆರೆದಿದ್ದರೇ ನನ್ನ ಲಕ್ಷ ರೂ. ಬೆಲೆ ಬಾಳುವ ಎಮ್ಮೆ ಬದುಕುತ್ತಿತ್ತು. ಆದರೆ ಅವರ ಬೇಜವಾಬ್ದಾರಿ ವರ್ತನೆ ಹಾಗೂ ನಡುವಳಿಕೆ ಇಂದು ಮೂಕ ಪ್ರಾಣಿಯ ಸಾವಿಗೆ ಕಾರಣವಾಗಿದೆ. ವೈದ್ಯರ ಈ ತೆರನಾದ ವರ್ತನೆ ಇದೇ ಮೊದಲಲ್ಲ. ಇಲ್ಲಿನ ಅನೀಲ ಕಕ್ಕಳಮೇಲಿ ಹಾಗೂ ಚಿಕ್ಕರೂಗಿ ಪಶುಆಸ್ಪತ್ರೆಯ ನಾಗೇಂದ್ರ ಹರಸೂರ ಎಂಬ ಪರೀಕ್ಷಕರು ಸಹ ಪಶುಗಳ ಚಿಕಿತ್ಸೆಗಾಗಿ ರೈತರಿಂದ ಹಣ ಪಡೆಯುತ್ತಿರುವ ದೂರುಗಳು ಬಂದಿವೆ. ಇಂತಹ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಎಮ್ಮೆಯ ಸಾವಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತರ ಪ್ರತಿಭಟನೆಯ ವಿಷಯ ತಿಳಿದ ವಿಜಯಪುರ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಅಶೋಕ ಗೊಣಸಗಿ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮಾತನಾಡಿ, ಘಟನೆಗೆ ಕಾರಣರಾದ ವೈದ್ಯರ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಹಾಗೂ ಪರಿಹಾರ ದೊರಕಿಸುವ ಭರವಸೆ ನೀಡಿದರು.
ರೈತರಾದ ರಾಮು ದೇಸಾಯಿ, ಕಾಸು ಜಿರ್ಲಿ, ಬಸನಗೌಡ ಭೈರೋಡಗಿ, ಕಾಸು ದೇವಣಗಾಂವ, ಶಾಂತಪ್ಪ ಜಲಕತ್ತಿ, ರಾಚೋಟಯ್ಯ ಹಿರೇಮಠ, ಉಮೇಶ ಕೋಟಿನ್,ಮಡು ದಿಂಡವಾರ, ಶರಣಪ್ಪ ಸಣ್ಣಕ್ಕಿ, ಬಸವರಾಜ ಇಂಡಿ, ಭೀಮನಗೌಡ ಬಿರಾದಾರ, ಸಂಪತ್ ಜಮಾದಾರ, ಸುನೀಲ ದೇಸಾಯಿ, ಗುರು ಜಡಗೊಂಡ, ಸಂಗು ಜಲಕತ್ತಿ, ಸಂಗು ದೇಸಾಯಿ ಕಾಸು ಮಡಗೊಂಡ ಇದ್ದರು.
Subscribe to Updates
Get the latest creative news from FooBar about art, design and business.
ಪಶುವೈದ್ಯಾಧಿಕಾರಿ ನಿರ್ಲಕ್ಷ್ಯಕ್ಕೆ ಎಮ್ಮೆ ಸಾವು :ಪ್ರತಿಭಟನೆ
Related Posts
Add A Comment

