Author: editor.udayarashmi@gmail.com

ನೀತಿಸಂಹಿತೆ ಉಲ್ಲಂಘನೆ ಆರೋಪ | ಕರ್ನಾಟಕ ರಾಷ್ಟ ಸಮಿತಿ ಪಕ್ಷ ಆಗ್ರಹ ವಿಜಯಪುರ: ಕಾಂಗ್ರೆಸ್ ಮತ್ತು ಬಿಜೆಪಿ ಉಮೇದುದಾರರ ಉಮೆದುದಾರಿಕೆ ರದ್ದುಪಡಿಸುವಂತೆ ಕರ್ನಾಟಕ ರಾಷ್ಟ ಸಮಿತಿ ಪಕ್ಷದ ವಿಜಯಪುರ ಜಿಲ್ಲಾ ಲೋಕಸಭಾ ಅಭ್ಯರ್ಥಿಯಾದ ಗಣಪತಿ ಲಾಲಾಸಿಂಗ್ ರಾಠೋಡ ಆಗ್ರಹಪಡಿಸಿದ್ದಾರೆ.ದಿನಾಂಕ :೦೭-೦೫-೨೦೨೪ ರಂದು ವಿಜಯಪುರ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದ ದಿನದಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ತಮ್ಮ ಪಕ್ಷದ ಚಿಹ್ನೆ ಮತ್ತು ಅವರ ಭಾವಚಿತ್ರ ಇರುವ ಕರಪತ್ರಗಳನ್ನು ಲಕ್ಷಗಟ್ಟಲೆ ಮುದ್ರಿಸಿ ಪ್ರತಿ ಮತದಾರರ ಕೈಯಲ್ಲಿ ಕೊಟ್ಟು ಒತ್ತಾಯ ಪೂರ್ವಕವಾಗಿ ಮತದಾರರು ಮತಗಟ್ಟೆಗೆ ತರುವಂತೆ ಮಾಡಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಬಲವಂತ ಪಡಿಸಲಾಗಿದೆ. ಮತಗಟ್ಟೆಯಿಂದ ನೂರು ಮೀಟರ್ ಒಳಗಡೆ ಯಾವುದೇ ರೀತಿಯ ಪಕ್ಷದ ಪ್ರಚಾರ ಮಾಡುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಇದು ಕೇವಲ ನಾಲ್ಕು ಐದು ಹಳ್ಳಿಗಳಲ್ಲಿ ಆಗಿಲ್ಲ. ಇಡಿ ಜಿಲ್ಲೆಯಲ್ಲಿರುವ ೨೬೦೦ಕ್ಕೂ ಹೆಚ್ಚು ಮತಗಟ್ಟೆಗಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಮತದಾರರ ಮೇಲೆ ಒತ್ತಡ…

Read More

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಪಟ್ಟಿಕಂಥಿ ಹಿರೇಮಠದ ಬಾಲತಪಸ್ವಿ ಮಹಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ೭೫ನೇ ಯಾತ್ರಾ ಮಹೋತ್ಸವ, ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ ೨೩ನೇ ಸಂಸ್ಮರಣೋತ್ಸವ ಹಾಗೂ ಗುರು ಮಹಾಂತೇಶ್ವರ ಮಹಾಂತೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರು ಆದ ಸಮಾಜ ಸೇವಕ ಎಸ್.ಎಸ್.ಆಲೂರ ದಂಪತಿಗಳಿಗೆ ಮಹಾಂತೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.ಏ.೮ರ ಬುಧವಾರದಂದು ಮನಗೂಳಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಇವರ ಸೇವೆಯನ್ನು ಪರಿಗಣಿಸಿ ಮಹಾಂತೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.ಡೋಣೂರು-ಕೊಟ್ಟುರು ಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕೆರೂರ-ಕೊಣ್ಣೂರ ಮಠದ ಡಾ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಅಮರೇಶ್ವರಮಠ ಗುಳೇದಗುಡ್ಡದ, ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಷ.ಬ್ರ.ಡಾ.ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು, ಮನಗೂಳಿಯ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಇಂಗಳೇಶ್ವರ-ವಡವಡಗಿಯ ಬೃಂಗೀಶ್ವರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸೋಮನಗೌಡ(ಅಪ್ಪುಗೌಡ) ಪಾಟೀಲ, ಚಂದ್ರಶೇಖರ ಎಸ್.ಪಾಟೀಲ, ಎಸ್.ಜಿ.ಹಾವಣ್ಣವರ, ಎಸ್.ಆಯ್.ರೇವೂರಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More

ತಾಳಿಕೋಟಿ : ಅಸ್ಕಿ, ಬೂದಿಹಾಳ ಪಿ.ಟಿ, ಬೆಕಿನಾಳ ಹಾಗೂ ಹುಣಶ್ಯಾಳ ಗ್ರಾಮದ ಕೆರೆಯ ವ್ಯಾಪ್ತಿಯ ಜಮೀನನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಅದನ್ನು ಅಭಿವೃದ್ಧಿಪಡಿಸಿ ಕೆರೆ ನೀರು ತುಂಬಿಸಬೇಕು ಮತ್ತು ರೈತರ ಉತಾರೆಯಲ್ಲಿ ಜಮೀನನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಾಳಿಕೋಟಿ ತಾಲೂಕಾ ತಹಶಿಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ, ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಆಸ್ಕಿ, ಬೂದಿಹಾಳ.ಪಿ.ಟಿ, ಹುಣಶ್ಯಾಳ ಹಾಗೂ ಬೆಕಿನಾಳ ಗ್ರಾಮದಲ್ಲಿಯ ಕೆರೆಗಳು ಇಂದು ಅಕ್ಕಪಕ್ಕದ ರೈತರು ಅತಿಕ್ರಮಣ ಮಾಡಿಕೊಂಡು ಸಾರ್ವಜನಿಕರಿಗೆ ಹಾಗೂ ಜನಜಾನುವಾರುಗಳಿಗೆ ಅಲ್ಲಿ ನೀರು ಕುಡಿಯಲು ಹಾಗೂ ಬಳಸಲು ಬಿಡುತ್ತಿಲ್ಲ, ಕೇಳಿದರೆ ಇದು ನಮ್ಮ ಜಾಗ ನಮ್ಮ ಹೆಸರಲ್ಲಿ ಉತಾರೆಗಳಿವೆ ಎಂದು ದೊಡ್ಡ ಧ್ವನಿಯಲ್ಲಿ ಅಂಜಿಸುತ್ತಿದ್ದಾರೆ.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳ ವಿಕ್ಷಣೆ ಮಾಡಿ ಕೆರೆಯ ಒಟ್ಟು ಅಳತೆ ಮಾಡಿ ಅಕ್ರಮವಾಗಿ ಅತಿಕ್ರಮಣ ಮಾಡಿ ಸಾಗುವಳಿ ಮಾಡುತ್ತಿರುವವರನ್ನು ಅಲ್ಲಿಂದ ಖಾಲಿ ಮಾಡಿಸಿ, ಅಂತವರ…

Read More

ಇಂಡಿ: ಮೇ.೭ ರಂದು ಇಂಡಿ ಮತಕ್ಷೇತ್ರದಲ್ಲಿ ನಡೆದ ಲೋಕಸಭಾ ಚುನಾವಣೆಯ ಮತ ಯಂತ್ರಗಳನ್ನು ರಾತ್ರಿ ೩ ಗಂಟೆಗೆ ವಿಜಯಪುರಕ್ಕೆ ರವಾನಿಸಲಾಗಿದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಮತ್ತು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.೨೬೮ ಮತ ಯಂತ್ರಗಳನ್ನು ಪೋಲಿಸ ಬಂದೋಬಸ್ತಿನಲ್ಲಿ ಇಂಡಿಯ ಆದರ್ಶ ಪ್ರೌಢಶಾಲೆಯಿಂದ ವಿಜಯಪುರದ ಸೈನಿಕ ಶಾಲೆಗೆ ಕಳುಹಿಸಲಾಗಿದೆ.ಈ ವೇಳೆಯಲ್ಲಿ ತಹಸೀಲ್ದಾರ ಮಂಜುಳಾ ನಾಯಕ, ಡಿ.ಎಸ್.ಪಿ ಎಚ್.ಎಸ್.ಜಗದೀಶ, ಪಿಎಸ್‌ಐ ಮಂಜುನಾಥ ಹುಲಕುಂದ, ಪಿಡಿಒ ಬಸವರಾಜ ಬಬಲಾದ, ಬಸವರಾಜ ರಾಹೂರ,ಆರ್.ಬಿ.ಮೂಗಿ ಮತ್ತಿತರಿದ್ದರು.

Read More

ದೇವರಹಿಪ್ಪರಗಿ: ತಾಲ್ಲೂಕಿನ ಕೊಂಡಗೂಳಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಶ್ರೀಗುರು ವೀರಘಂಟಿ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.ದಿ:೧೦ ರಂದು ಶುಕ್ರವಾರ ಬೆಳಿಗ್ಗೆ ಬಸವ ಜಯಂತಿ ಅಂಗವಾಗಿ ವೀರಘಂಟಿ ಮಡಿವಾಳೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ೧೦ ಗಂಟೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಹಾಗೂ ಬಸವೇಶ್ವರ ವೃತ್ತದ ಪ್ರತಿಮೆಗೆ ಪೂಜೆ, ರಾತ್ರಿ ೭ ಗಂಟೆಗೆ ಬಸವೇಶ್ವರರ ತೊಟ್ಟಿಲು ಕಾರ್ಯಕ್ರಮ ಹಾಗೂ ಧಾರ್ಮಿಕ ಪ್ರವಚನ ಮುಕ್ತಾಯ ಸಮಾರಂಭ ಜರುಗಲಿದೆ.ದಿ:೧೧ ರಂದು ಶನಿವಾರ ಬೆಳಿಗ್ಗೆ ವೀರಘಂಟಿ ಮಡಿವಾಳೇಶ್ವರರ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿ ಉತ್ಸವ, ನಂದಿಕೋಲ ಮೆರವಣಿಗೆ, ಸುಮಂಗಲೆಯರ ಕುಂಭ, ಕಳಸಕನ್ನಡಿಯೊಂದಿಗೆ ಸಕಲ ವಾಧ್ಯವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಮಹಾಪ್ರಸಾದ ವಿತರಣೆಯಾಗಲಿದೆ. ಸಾಯಂಕಾಲ ೫ ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳು ಹಾಗೂ ರಾತ್ರಿ ೧೦.೩೦ ಗಂಟೆಗೆ ಸಿದ್ದು ಮೇಲಿನಮನಿ ಅವರ ದೀಪಕ ಮೆಲೋಡಿಸ್‌ದಿಂದ ಸಂಗೀತ ಸಂಜೆ ಜರುಗಲಿದೆ.ಮಹೋತ್ಸವದಲ್ಲಿ ಬೀದರ ಚಳಕಾಪೂರ ಮಠದ ಶಂಕರಾನಂದ ಸ್ವಾಮೀಜಿ, ಜಾಲವಾದ ಗ್ರಾಮದ ಮಹಾಂತಲಿಂಗ ಶ್ರೀ, ನಂದವಾಡಗಿಯ ಚನ್ನಬಸವ…

Read More

ದೇವರಹಿಪ್ಪರಗಿ: ಯಾಳವಾರ ಗ್ರಾಮದ ಗುರು ಮಹಾಂತ ಶಿವಾಚಾರ‍್ಯರ ಜಾತ್ರಾ ಹಾಗೂ ನಮ್ಮೂರ ಹೆಮ್ಮೆ ನಮ್ಮೂರ ಮಹೋತ್ಸವ ಗುರುಮಠದಲ್ಲಿ ಜರುಗಲಿದೆ.ದಿ:೧೧ ಶನಿವಾರದಂದು ಸಾಯಂಕಾಲ ೬ ಗಂಟೆಗೆ ಮಹಾಂತೇಶ್ವರ ಗದ್ದುಗೆಗೆ ಕಳಸಾರೋಹಣ ಹಾಗೂ ಆಧ್ಯಾತ್ಮ ಪ್ರವಚನ ಮಂಗಲ ನೆರವೇರಲಿದೆ. ಸಂಜೆ ೭ ಗಂಟೆಗೆ ಅನುದಿನ ಅನುಸರಿಸು ಸಂಸ್ಥೆ ವತಿಯಿಂದ ನಮ್ಮೂರ ಉತ್ಸವ ನಮ್ಮ ಹೆಮ್ಮೆ ರೈತೋತ್ಸವ ಮತ್ತು ೨೦೧ ಎತ್ತಿನ ಬಂಡಿ ಮೆರವಣಿಗೆ ಮಹಾಲಿಂಗೇಶ್ವರ ಕ್ರೀಡಾಂಗಣದಲ್ಲಿ ಜರುಗಲಿದೆ.ದಿ:೧೨ ಭಾನುವಾರರದಂದು ಬೆಳಿಗ್ಗೆ ಬ್ರಾಹ್ಮಿ ಮುಹರ‍್ತದಲ್ಲಿ ಗುರುಗಳ ಗದ್ದುಗೆ ಮಹಾರುದ್ರಾಭಿಷೇಕ ಮಹಾಮಂಗಳಾರತಿ, ೯ ಗಂಟೆಗೆ ಜಗದ್ಗುರು ದಾರುಕಾಚರ‍್ಯರ ಅಡ್ಡಪಲ್ಲಕ್ಕಿ ಉತ್ಸವ ಮಧ್ಯಾನ್ಹ ಮಹಾಪ್ರಸಾದ ಸಾಯಂಕಾಲ ಹೆಡಗಾಪೂರ ಶಿವಲಿಂಗೇಶ್ವರ ಸಂಸ್ಥಾನಮಠ ಹಾಗೂ ಗುರುಮಾಂತೇಶ್ವರ ಗುರುಮಠದ ಷ.ಬ್ರ ದಾರುಕಲಿಂಗ ಶಿವಾಚರ‍್ಯರ ಸಾನಿಧ್ಯದಲ್ಲಿ ಶ್ರೀಗುರುಮಹಾಂತೇಶ್ವರ ಮಹಾರಥೋತ್ಸವ ಜರುಗಲಿದೆ. ಈ ಎಲ್ಲ ಕಾರ‍್ಯಕ್ರಮಗಳಲ್ಲಿ ಯಾಳವಾರ, ನಾಗರಾಳ, ಕಡಕೋಳ, ಭೈರವಾಡಗಿ, ಕಾಮನಕೇರಿ ಗ್ರಾಮಗಳ ಸದ್ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ನಗರದ ಐತಿಹಾಸಿಕ ಭೂತನಾಳ ಕೆರೆಗೆ ಆಲಮಟ್ಟಿ ಜಲಾಶಯದಿಂದ ನೀರು ತುಂಬಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದು, ಇದರಿಂದ ನಗರದ ಜನತೆಗೆ ಎಳ್ಳಷ್ಟು ನೀರಿನ ಅಭಾವ ಉಂಟಾಗುವುದಿಲ್ಲ.ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ, ಆಲಮಟ್ಟಿ ಜಲಾಶಯದಿಂದ ಮೇ.9 ರಿಂದ 28 ರವೆರಗೆ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ನಗರದ ಭೂತನಾಳ ಕೆರೆಯ ಮೇಲೆ ಅವಲಂಬನೆ ಇರುವ ಮಹಾನಗರ ಪಾಲಿಕೆ ವ್ಯಾಪ್ತಿಯ 4,5,6,10,12 ವಾರ್ಡಗಳಿಗೆ, ಬೇಸಿಗೆ ಮುಗಿಯುವರೆಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ನಗರದ ಜನತೆಯ ನೀರಿನ ಭವಣೆ ತಪ್ಪಿಸಿದಂತಾಗುತ್ತದೆ ಎಂದು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ಎಲ್ಲ ಮಕ್ಕಳು ಇಂತಹ ಬೇಸಿಗೆ ಕಾಲದಲ್ಲಿ ತಂದೆ ತಾಯಿ, ಮನೆಗಳನ್ನು ಬಿಟ್ಟು ಇಷ್ಟೆಲ್ಲಾ ಮಂತ್ರಗಳನ್ನು ಒಂದು ತಿಂಗಳು ಕಲಿಯುತ್ತಿರುವುದು ಸಂತಸ ತಂದಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾಂದಗಳ ಹೇಳಿದರು.ಪಟ್ಟಣದ ಸಾರಂಗಮಠದಲ್ಲಿ ಒಂದು ತಿಂಗಳ ಕಾಲ ಜರುಗಿದ ಸಂಸ್ಕಾರ ಶಿಬಿರದಲ್ಲಿ ಭಾಗವಹಿಸಿ ಮಕ್ಕಳಿಗೆ ಶ್ರೀಶೈಲ ಪೀಠದ ಜಗದ್ಗುರುಗಳು ಆಶೀರ್ವದಿಸಿ ಮಾತನಾಡಿದ ಅವರು, ಶೋಡಶೋಪಚಾರ ಮಂತ್ರ ಮತ್ತು ರುಧ್ರ ನಾಮಕ ಅಧ್ಯಾಯಗಳನ್ನು ಶುದ್ಧವಾಗಿ ಸ್ಪಷ್ಟವಾಗಿ ಹೇಳುವುದನ್ನು ಕೇಳಿ ಸಂತೋಷ ಪಟ್ಟರು. ಇನ್ನೂ ೧೫ದಿನಗಳ ಸಮಯದಲ್ಲಿ ಚಮಕ್ ಅಧ್ಯಾಯ, ಪುರುಷಸೂಕ್ತ, ಅಂತ್ಯ ಸಂಸ್ಕಾರದ ವಿಧಿ ವಿಧಾನಕ್ಕೆ ಬೇಕಾಗುವ ಮಂತ್ರ, ವರದಾಶಂಕರ ವೃತದ ಪೂಜಾ ಕ್ರಮ ಹಾಗೂ ಊಟದ ಮಂತ್ರ ಸೇರಿದಂತೆ ಅನೇಕ ವಿಚಾರಗಳನ್ನು ಮಕ್ಕಳಿಗೆ ಕಲಿಸಿ ಎಂದು ಸಲಹೆ ನೀಡಿದರು.ಈ ವೇಳೆ ಜಗದ್ಗುರುಗಳಿಗೆ ಮಕ್ಕಳು ಗುರು ಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡದುಕೊಂಡರು. ಬಳಿಕ ಶಿಬಿರದ ಮಕ್ಕಳಿಗೆ ಮೃತ್ಯುಂಜಯ ಕತ್ತಿ ಅವರ ಮಗಳು ಪೂರ್ವಿ ಕತ್ತಿ ಸ್ವಯಂ ರಕ್ಷಣೆಗಾಗಿ ಕರಾಟೆ…

Read More

ಸಿಂದಗಿ: ಶಿಕ್ಷಣದಿಂದ ಮಾತ್ರ ಈ ದೇಶ ಬಲಿಷ್ಠವಾಗಲಿದೆ. ಯೋಗ್ಯ ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಬದುಕನ್ನೇ ಉತ್ತಮವಾಗಿ ರೂಪಿಸಬಲ್ಲದು ಎಂದು ಶ್ರೀಶೈಲ ಪೀಠದ ಪರಮ ಪೂಜ್ಯ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.ತಾಲೂಕಿನ ಕನ್ನೋಳ್ಳಿ ಹಿರೇಮಠದ ಶ್ರೀಜಗದುರು ದಾರುಕಾಚಾರ್ಯರ ಜಾತ್ರಾ ಮಹೋತ್ಸವ ಮತ್ತು ಲಿಂ.ಶ್ರೀ ಮರುಳಾರಾಧ್ಯ ಶಿವಾಚಾರ್ಯರ ೧೧೦ ನೇ ಜಯಂತ್ಯುತ್ಸವದ ನಿಮಿತ್ಯ ಶ್ರೀ ಸಿದ್ದಲಿಂಗೇಶ್ವರ ಜ್ಞಾನಜ್ಯೋತಿ ವಿದ್ಯಾಪ್ರಸಾರ ಸಂಘದ ಅಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾತೋಶ್ರೀ ಬಸಲಿಂಗಮ್ಮ ಭಾಳಪ್ಪ ಭೂಸನೂರ ಕಲಾ, ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವನನ್ನು ಮಹಾದೇವನನ್ನಾಗಿ ಪರಿವರ್ತಿಸುವ ಮಹಾಶಕ್ತಿ ಶಿಕ್ಷಣಕ್ಕೆ ಇದೆ. ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದ್ದಲ್ಲಿ ಭಾರತ ಜಗತ್ತಿಗೆ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದ ಅವರು ಲಿಂ.ಮರುಳಾರಾಧ್ಯ ಶಿವಾಚಾರ್ಯರು ಸದಾ ಭಕ್ತರ ಕಲ್ಯಾಣವನ್ನು ಬಯಸಿ ಅವರ ಮುಖದಲ್ಲಿಯೇ ಪರಮಾತ್ಮನನ್ನು ಕಂಡಂತವರು. ಧಾರ್ಮಿಕ ಸಂಸ್ಕಾರ, ಸಾಮಾಜಿಕ ಪ್ರಜ್ಞೆಯನ್ನು ಭಕ್ತರಲ್ಲಿ ಮೂಡಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾದವರು ಎಂದರು.ಈ ವೇಳೆ…

Read More

“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಲೇಖನ)ಜಯಶ್ರೀ.ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ‘ತಿರುಕನ ಕನಸು’ ಕವಿತೆ ಕೇಳದವರು ತುಂಬ ಕಡಿಮೆ. ನನಸಾಗದ ಕನಸಿನ ಕುರಿತು ಮಾತನಾಡುವಾಗೊಮ್ಮೆ ನಿನ್ನದು ತಿರುಕನ ಕನಸಾಯಿತೆಂದು ಉದ್ಗರಿಸುವುದುಂಟು.ಆ ಕವಿತೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವಂತಿದೆ ಅನ್ನುವವರೂ ಉಂಟು. ಆ ಕವಿತೆಯಲ್ಲಿ ಏನಾಗುತ್ತದೆ ಅಂತ ನೋಡೋಣ ಬನ್ನಿ. ಮುಪ್ಪಿನ ಷಡಕ್ಷರಿ ಕವಿಯ ’ತಿರುಕನ ಕನಸು’ ಕವಿತೆಯಲ್ಲಿ ಭಿಕ್ಷುಕನೊಬ್ಬನು ಮುರುಕು ಛತ್ರದಲ್ಲಿ ಮಲಗಿರುವಾಗ ಕನಸೊಂದನ್ನು ಕಾಣುತ್ತಾನೆ. ಕನಸಿನಲ್ಲಿ ಆಕಸ್ಮಿಕವಾಗಿ ಅರಸನಾಗುತ್ತಾನೆ. ಸಕಲ ಭೋಗ ಭಾಗ್ಯಗಳೊಂದಿಗೆ ರಾಜ್ಯವನ್ನಾಳುತ್ತಾನೆ. ಒಮ್ಮೆ ಸೇವಕರು ಅವಿಧೇಯರಾಗಿ ನಡೆದುಕೊಂಡರೆಂದು ಕಾಲಿನಿಂದ ಜಾಡಿಸಿ ಒದೆಯುತ್ತಾನೆ. ಆಗ ಅವನ ಕಾಲ ಬಳಿ ಇದ್ದ ಮಡಿಕೆ ಉರುಳಿ ಒಡೆದು ಹೋಗುತ್ತದೆ. ತಿರುಪೆ ಎತ್ತಿ ತಂದಿದ್ದ ಹಿಟ್ಟೂ ಸಹ ಚೆಲ್ಲಿ ಹೋಗುತ್ತದೆ. ಕೊನೆಯಲ್ಲಿ ಅರಮನೆಗೆ ವೈರಿಗಳು ಮುತ್ತಿದಂತಾಗಿ ಎಚ್ಚರವಾಗುತ್ತದೆ. ತಾನು ಅದುವರೆಗೂ ಕಂಡದ್ದು ಕನಸು ಎಂದು ಅವನಿಗೆ ಅರ್ಥವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಿರುಕನ ಕನಸು ಅಲ್ಲಿದ್ದ ವೈಭೋಗಗಳೆಲ್ಲವೂ ಸುಳ್ಳೇ ಆಗಿದ್ದರೂ ಕನಸಿನ…

Read More