ದೇವರಹಿಪ್ಪರಗಿ: ತಾಲ್ಲೂಕಿನ ಕೊಂಡಗೂಳಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಶ್ರೀಗುರು ವೀರಘಂಟಿ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.
ದಿ:೧೦ ರಂದು ಶುಕ್ರವಾರ ಬೆಳಿಗ್ಗೆ ಬಸವ ಜಯಂತಿ ಅಂಗವಾಗಿ ವೀರಘಂಟಿ ಮಡಿವಾಳೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ೧೦ ಗಂಟೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಹಾಗೂ ಬಸವೇಶ್ವರ ವೃತ್ತದ ಪ್ರತಿಮೆಗೆ ಪೂಜೆ, ರಾತ್ರಿ ೭ ಗಂಟೆಗೆ ಬಸವೇಶ್ವರರ ತೊಟ್ಟಿಲು ಕಾರ್ಯಕ್ರಮ ಹಾಗೂ ಧಾರ್ಮಿಕ ಪ್ರವಚನ ಮುಕ್ತಾಯ ಸಮಾರಂಭ ಜರುಗಲಿದೆ.
ದಿ:೧೧ ರಂದು ಶನಿವಾರ ಬೆಳಿಗ್ಗೆ ವೀರಘಂಟಿ ಮಡಿವಾಳೇಶ್ವರರ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿ ಉತ್ಸವ, ನಂದಿಕೋಲ ಮೆರವಣಿಗೆ, ಸುಮಂಗಲೆಯರ ಕುಂಭ, ಕಳಸಕನ್ನಡಿಯೊಂದಿಗೆ ಸಕಲ ವಾಧ್ಯವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಮಹಾಪ್ರಸಾದ ವಿತರಣೆಯಾಗಲಿದೆ. ಸಾಯಂಕಾಲ ೫ ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳು ಹಾಗೂ ರಾತ್ರಿ ೧೦.೩೦ ಗಂಟೆಗೆ ಸಿದ್ದು ಮೇಲಿನಮನಿ ಅವರ ದೀಪಕ ಮೆಲೋಡಿಸ್‌ದಿಂದ ಸಂಗೀತ ಸಂಜೆ ಜರುಗಲಿದೆ.
ಮಹೋತ್ಸವದಲ್ಲಿ ಬೀದರ ಚಳಕಾಪೂರ ಮಠದ ಶಂಕರಾನಂದ ಸ್ವಾಮೀಜಿ, ಜಾಲವಾದ ಗ್ರಾಮದ ಮಹಾಂತಲಿಂಗ ಶ್ರೀ, ನಂದವಾಡಗಿಯ ಚನ್ನಬಸವ ಶ್ರೀ, ಯಂಕಂಚಿ ಹಿರೇಮಠದ ರುದ್ರಮುನಿಶ್ರೀ, ಬೋರಗಿ-ಪುರದಾಳದ ಮಹಾಲಿಂಗೇಶ್ವರ ಸ್ವಾಮೀಜಿ, ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು, ಕೋರವಾರ ಚೌಕಿಮಠದ ಮುರುಘೇಂದ್ರ ಸ್ವಾಮೀಜಿ, ಜಮ್ಮಲದಿನ್ನಿಯ ಸಿದ್ಧರಾಮ ಸ್ವಾಮೀಜಿ, ಕಡಕೋಳದ ಮಹಾಲಿಂಗ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ಜಾತ್ರಾಕಮೀಟಿ ಪ್ರಕಟಣೆ ಮೂಲಕ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
