ತಾಳಿಕೋಟಿ : ಅಸ್ಕಿ, ಬೂದಿಹಾಳ ಪಿ.ಟಿ, ಬೆಕಿನಾಳ ಹಾಗೂ ಹುಣಶ್ಯಾಳ ಗ್ರಾಮದ ಕೆರೆಯ ವ್ಯಾಪ್ತಿಯ ಜಮೀನನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಅದನ್ನು ಅಭಿವೃದ್ಧಿಪಡಿಸಿ ಕೆರೆ ನೀರು ತುಂಬಿಸಬೇಕು ಮತ್ತು ರೈತರ ಉತಾರೆಯಲ್ಲಿ ಜಮೀನನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಾಳಿಕೋಟಿ ತಾಲೂಕಾ ತಹಶಿಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ, ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಆಸ್ಕಿ, ಬೂದಿಹಾಳ.ಪಿ.ಟಿ, ಹುಣಶ್ಯಾಳ ಹಾಗೂ ಬೆಕಿನಾಳ ಗ್ರಾಮದಲ್ಲಿಯ ಕೆರೆಗಳು ಇಂದು ಅಕ್ಕಪಕ್ಕದ ರೈತರು ಅತಿಕ್ರಮಣ ಮಾಡಿಕೊಂಡು ಸಾರ್ವಜನಿಕರಿಗೆ ಹಾಗೂ ಜನಜಾನುವಾರುಗಳಿಗೆ ಅಲ್ಲಿ ನೀರು ಕುಡಿಯಲು ಹಾಗೂ ಬಳಸಲು ಬಿಡುತ್ತಿಲ್ಲ, ಕೇಳಿದರೆ ಇದು ನಮ್ಮ ಜಾಗ ನಮ್ಮ ಹೆಸರಲ್ಲಿ ಉತಾರೆಗಳಿವೆ ಎಂದು ದೊಡ್ಡ ಧ್ವನಿಯಲ್ಲಿ ಅಂಜಿಸುತ್ತಿದ್ದಾರೆ.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳ ವಿಕ್ಷಣೆ ಮಾಡಿ ಕೆರೆಯ ಒಟ್ಟು ಅಳತೆ ಮಾಡಿ ಅಕ್ರಮವಾಗಿ ಅತಿಕ್ರಮಣ ಮಾಡಿ ಸಾಗುವಳಿ ಮಾಡುತ್ತಿರುವವರನ್ನು ಅಲ್ಲಿಂದ ಖಾಲಿ ಮಾಡಿಸಿ, ಅಂತವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು, ಸಂಪೂರ್ಣ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು, ಇಗಾಗಲೇ ಬರಗಾಲದಿಂದ ತತ್ತರಿಸಿರುವ ರೈತರಿಗೆ ಕೆರೆಯಿಂದ ಸಾಕಷ್ಟು ಅನುಕೂಲವಾಗಲಿದೆ, ಅಕ್ಕಪಕ್ಕದ ಬಾವಿ, ಕೊಳವೆ ಭಾವಿಯಲ್ಲಿ ನೀರು ಹೆಚ್ಚಾಗಿ ಕೃಷಿ ಮಾಡಲು ಮತ್ತು ಕುಡಿಯಲು ನೀರಿನ ಬಹು ದೊಡ್ಡ ಸಹಾಯವಾಗುವುದು. ಆದ್ದರಿಂದ ಈ ಎಲ್ಲಾ ಕೆರೆಯನ್ನು ತುಂಬಿಸಬೇಕು. ಎಂದರು.
ರೈತ ಸಂಘದ ತಾಲೂಕಾ ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ ಮಾತನಾಡುತ್ತಾ ಬೆಕಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಇರುವುದರಿಂದ ಈಗಾಗಲೇ ಬೆಕಿನಾಳ ಗ್ರಾಮದ ಸರಕಾರಿ ಜಮೀನಿನಲ್ಲಿ ಶರಣಪ್ಪ ಕಟ್ಟಿಮನಿ ಇವರ ಬಾವಿಯಲ್ಲಿ ಸಾಕಷ್ಟು ನೀರು ಇದ್ದು, ಅಲ್ಲಿಂದ ಪೈಪಲೈನ ಮೂಲಕ ನೀರನ್ನು ಮನೆ ಮನೆಗೆ ಸರಬರಾಜು ಮಾಡಿದರೆ ನೀರಿನ ಸಮಸ್ಯೆ ಬಗೆಹರೆಯಲಿದೆ ಎಂದರು.
ಬೆಸಿಗೆಯ ತಾಪಮಾನದಿಂದ ಸಾಕಷ್ಟ ಸಮಸ್ಯೆ ಅನುಭವಿಸುವಂತಾಗಿದೆ, ಈ ವಿಷಯವನ್ನು ಅತೀ ಅವಶ್ಯಕ ಎಂದು ತಿಳಿದು ಶೀಘ್ರದಲ್ಲಿ ಸಂಪೂರ್ಣ ಕೆರೆ ಜಾಗವನ್ನು ಅಭಿವೃದ್ಧಿ ಪಡಿಸಿ ಕೆರೆ ತುಂಬುವ ಯೋಜನೆಯಡಿ ತುಂಬಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಗ್ರಹಿಸುತ್ತಾ ಇದ್ದೇವೆ, ಒಂದು ವೇಳೆ ವಿಳಂಭವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಈ ವೇಳೆ ಕಲಕೇರಿ ಹೊಬಳಿ ಅಧ್ಯಕ್ಷರಾದ ಮಹಿಬೂಬ ಬಾಷಾ ಮನಗೂಳಿ, ಬೆಕಿನಾಳ ಅಧ್ಯಕ್ಷ ದೇವಿಂದ್ರಪ್ಪಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಅಸ್ಕಿ, ಬೆಕಿನಾಳ, ಬೂದಿಹಾಳ ಪಿ.ಟಿ, ಹುಣಶ್ಯಾಳ ಕೆರೆ ತುಂಬಿಸಲು ಆಗ್ರಹ
Related Posts
Add A Comment

