Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಆಹಾ! ಈ ಬದುಕಿನ ಸವಿ ಸ್ವರ್ಗಕ್ಕೂ ಮಿಗಿಲು!
ವಿಶೇಷ ಲೇಖನ

ಆಹಾ! ಈ ಬದುಕಿನ ಸವಿ ಸ್ವರ್ಗಕ್ಕೂ ಮಿಗಿಲು!

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಲೇಖನ)ಜಯಶ್ರೀ.ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ

‘ತಿರುಕನ ಕನಸು’ ಕವಿತೆ ಕೇಳದವರು ತುಂಬ ಕಡಿಮೆ. ನನಸಾಗದ ಕನಸಿನ ಕುರಿತು ಮಾತನಾಡುವಾಗೊಮ್ಮೆ ನಿನ್ನದು ತಿರುಕನ ಕನಸಾಯಿತೆಂದು ಉದ್ಗರಿಸುವುದುಂಟು.ಆ ಕವಿತೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವಂತಿದೆ ಅನ್ನುವವರೂ ಉಂಟು. ಆ ಕವಿತೆಯಲ್ಲಿ ಏನಾಗುತ್ತದೆ ಅಂತ ನೋಡೋಣ ಬನ್ನಿ. ಮುಪ್ಪಿನ ಷಡಕ್ಷರಿ ಕವಿಯ ’ತಿರುಕನ ಕನಸು’ ಕವಿತೆಯಲ್ಲಿ ಭಿಕ್ಷುಕನೊಬ್ಬನು ಮುರುಕು ಛತ್ರದಲ್ಲಿ ಮಲಗಿರುವಾಗ ಕನಸೊಂದನ್ನು ಕಾಣುತ್ತಾನೆ. ಕನಸಿನಲ್ಲಿ ಆಕಸ್ಮಿಕವಾಗಿ ಅರಸನಾಗುತ್ತಾನೆ. ಸಕಲ ಭೋಗ ಭಾಗ್ಯಗಳೊಂದಿಗೆ ರಾಜ್ಯವನ್ನಾಳುತ್ತಾನೆ. ಒಮ್ಮೆ ಸೇವಕರು ಅವಿಧೇಯರಾಗಿ ನಡೆದುಕೊಂಡರೆಂದು ಕಾಲಿನಿಂದ ಜಾಡಿಸಿ ಒದೆಯುತ್ತಾನೆ. ಆಗ ಅವನ ಕಾಲ ಬಳಿ ಇದ್ದ ಮಡಿಕೆ ಉರುಳಿ ಒಡೆದು ಹೋಗುತ್ತದೆ. ತಿರುಪೆ ಎತ್ತಿ ತಂದಿದ್ದ ಹಿಟ್ಟೂ ಸಹ ಚೆಲ್ಲಿ ಹೋಗುತ್ತದೆ. ಕೊನೆಯಲ್ಲಿ ಅರಮನೆಗೆ ವೈರಿಗಳು ಮುತ್ತಿದಂತಾಗಿ ಎಚ್ಚರವಾಗುತ್ತದೆ. ತಾನು ಅದುವರೆಗೂ ಕಂಡದ್ದು ಕನಸು ಎಂದು ಅವನಿಗೆ ಅರ್ಥವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಿರುಕನ ಕನಸು ಅಲ್ಲಿದ್ದ ವೈಭೋಗಗಳೆಲ್ಲವೂ ಸುಳ್ಳೇ ಆಗಿದ್ದರೂ ಕನಸಿನ ಪರಿಣಾಮವಾಗಿ ಮಡಿಕೆ ಒಡೆದದ್ದು, ಹಿಟ್ಟು ಚೆಲ್ಲಿ ಹೋಗಿದ್ದು ಸುಳ್ಳಲ್ಲ. ಕಂಡದ್ದು ಕನಸಾದರೂ ಅದರ ಪರಿಣಾಮ ಅನುಭವಿಸಬೇಕಾಯಿತು. ಆತನ ಪಾಲಿಗೆ ಅಮೂಲ್ಯವಾಗಿದ್ದ ಮಡಿಕೆ ಒಡೆದು ಹೋಯಿತು. ಅವತ್ತಿನ ಆಹಾರವಾದ ಹಿಟ್ಟೂ ನಷ್ಟವಾಯಿತು.
ನಮ್ಮ ಬದುಕಿನಲ್ಲೂ ಹೀಗೆ ಕನಸಿನಂತೆ ಘಟಿಸುವ ಸಂದರ್ಭಗಳು ಸನ್ನಿವೇಶಗಳು ಜೀವವನ್ನು ಜಗತ್ತಿಗೆ ಅಂಟಿಸಿ ಬಿಡುತ್ತವೆ.ಸುಖ ದುಃಖಗಳು ಕನಸಿನಂತೆ ಬರುತ್ತಿರುತ್ತವೆ. ಮಗ್ಗಲು ಮುಳ್ಳಿನ ಹಾಸಿಗೆಯಂತೆ ಚುಚ್ಚುತ್ತಲೇ ಇರುತ್ತವೆ. ಭಾವ ಬುದ್ಧಿಗಳು ಸಮನ್ವಯ ಸ್ಥಿತಿಯಲ್ಲಿದ್ದಾಗ ಮಾತ್ರ ಸಾರ್ಥಕ ಜೀವನದ ಕನಸುಗಳನ್ನು ನನಸಾಗಿಸಲು ಸಾಧ್ಯ. ವಿವೇಕದ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಭಾವಾತಿರೇಕಕ್ಕೆ ಕಿವಿಗೊಟ್ಟರೆ ಮನಸ್ಸು ಹುಚ್ಚೆದ್ದ ಮಂಗನಂತಾಗಿಬಿಡುತ್ತದೆ. ಇಂದ್ರಿಯಗಳು ಭೋಗಲಾಲಸೆಯಲ್ಲಿ ಮುಳುಗುತ್ತವೆ ಇದರಿಂದಾಗಿ ಆತ್ಮದ ಶಕ್ತಿ ಕುಂದುತ್ತದೆ.ಇಂದ್ರಿಯಗಳನ್ನು ನಿಯಂತ್ರಿಸಲಾಗದೆ ಅವುಗಳ ಗುಲಾಮನಾಗಿ ಬಿರುಗಾಳಿಗೆ ಸಿಕ್ಕ ಹಡಗಿನಂತೆ ಪರದಾಡಬೇಕಾಗುತ್ತದೆ. ಜೀವನದಲ್ಲಿನ ನೋವಾಗಲಿ ನಲಿವಾಗಲಿ ಶಾಶ್ವತವಲ್ಲ. ಏಕೆಂದರೆ ಜೀವನವೇ ನಶ್ವರ. ಹಿಂದೆ ಹುಟ್ಟು ಇಂದು ಬದುಕು ಮುಂದೆ ಸಾವು. ಜೀವನ ನೆರಳು ಬೆಳಕಿನ ಆಟವೆಂದರೂ ಇಂದ್ರೀಯಗಳು ನೀಡಿದ ಅನುಭವಕ್ಕೆ ಅಂತರಂಗ ಸ್ಪಂದಿಸಿದ್ದು ಸೂರ್ಯ ಪ್ರಕಾಶದಷ್ಟೇ ಸತ್ಯ ನಾವು ಎದುರಿಸುವ ಒಳಿತು ಕೆಡುಕುಗಳ ಅನುಭವವು ಆಂತರ್ಯದ ಮೇಲೆ ಪ್ರಭಾವ ಬೀರುವದೂ ಸತ್ಯ
ಮನುಷ್ಯ ದೇವನಿತ್ತ ಅಮೂಲ್ಯ ಬುದ್ಧಿಯನ್ನು ಶ್ರಮರಹಿತ ಸುಖ ಜೀವನಕ್ಕಾಗಿ ಸಂಶೋಧನೆಗಳನ್ನು ಮಾಡಲು ಉಪಯೋಗಿಸಿದ. ಅದರ ಪರಿಣಾಮವಾಗಿಯೇ ಇಂದು ಜೀವನ ಕ್ರಮದಲ್ಲಿ ಆವಿಷ್ಕಾರಗಳಿಂದ ವ್ಯತ್ಯಾಸ ಕಂಡು ಬರುತ್ತಿದೆ.ಆವಿಷ್ಕಾರಗಳು ಬೇಡವೆಂದಲ್ಲ. ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಕ್ರಮ ತಿಳಿದು ಪಾಲಿಸಬೇಕು. ಪ್ರಕೃತಿಯ ಯೋಚನೆಯನ್ನು ಬಿಟ್ಟು ಆವಿಷ್ಕಾರಗಳನ್ನೇ ಹೊದ್ದುಕೊಳ್ಳುತ್ತಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ಬದುಕಿನ ಮೂಲ ಆಶಯವಾದ ಶಾಂತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಒತ್ತಡದ ಜೀವನದಲ್ಲಿ ಸಿಲುಕಿಹಾಕಿಕೊಂಡಿದ್ದೇವೆ. ಒತ್ತಡಮುಕ್ತ ಯೋಚನೆಗಳಿಂದ ಆರೋಗ್ಯಕರ ಜೀವನಶೈಲಿ ಪ್ರಕೃತಿಯೊಂದಿಗೆ ಮುದವಾಗಿ ಬೆರೆಯುತ್ತ ಬದುಕಿನ ಹರಿವಿನ ವೇಗಕ್ಕೆ ಒಗ್ಗಿಕೊಂಡರೆ ಬದುಕು ತಿರುಕ ಕಂಡ ಕನಸಿನಂತಾಗುವುದಿಲ್ಲ. ಆಹಾ! ಈ ಬದುಕಿನ ಸವಿ ಸ್ವರ್ಗಕ್ಕೂ ಮಿಗಿಲಾದದ್ದು ಎಂದೆನಿಸದೇ ಇರದು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.