ಸಿಂದಗಿ: ಎಲ್ಲ ಮಕ್ಕಳು ಇಂತಹ ಬೇಸಿಗೆ ಕಾಲದಲ್ಲಿ ತಂದೆ ತಾಯಿ, ಮನೆಗಳನ್ನು ಬಿಟ್ಟು ಇಷ್ಟೆಲ್ಲಾ ಮಂತ್ರಗಳನ್ನು ಒಂದು ತಿಂಗಳು ಕಲಿಯುತ್ತಿರುವುದು ಸಂತಸ ತಂದಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾಂದಗಳ ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ಒಂದು ತಿಂಗಳ ಕಾಲ ಜರುಗಿದ ಸಂಸ್ಕಾರ ಶಿಬಿರದಲ್ಲಿ ಭಾಗವಹಿಸಿ ಮಕ್ಕಳಿಗೆ ಶ್ರೀಶೈಲ ಪೀಠದ ಜಗದ್ಗುರುಗಳು ಆಶೀರ್ವದಿಸಿ ಮಾತನಾಡಿದ ಅವರು, ಶೋಡಶೋಪಚಾರ ಮಂತ್ರ ಮತ್ತು ರುಧ್ರ ನಾಮಕ ಅಧ್ಯಾಯಗಳನ್ನು ಶುದ್ಧವಾಗಿ ಸ್ಪಷ್ಟವಾಗಿ ಹೇಳುವುದನ್ನು ಕೇಳಿ ಸಂತೋಷ ಪಟ್ಟರು. ಇನ್ನೂ ೧೫ದಿನಗಳ ಸಮಯದಲ್ಲಿ ಚಮಕ್ ಅಧ್ಯಾಯ, ಪುರುಷಸೂಕ್ತ, ಅಂತ್ಯ ಸಂಸ್ಕಾರದ ವಿಧಿ ವಿಧಾನಕ್ಕೆ ಬೇಕಾಗುವ ಮಂತ್ರ, ವರದಾಶಂಕರ ವೃತದ ಪೂಜಾ ಕ್ರಮ ಹಾಗೂ ಊಟದ ಮಂತ್ರ ಸೇರಿದಂತೆ ಅನೇಕ ವಿಚಾರಗಳನ್ನು ಮಕ್ಕಳಿಗೆ ಕಲಿಸಿ ಎಂದು ಸಲಹೆ ನೀಡಿದರು.
ಈ ವೇಳೆ ಜಗದ್ಗುರುಗಳಿಗೆ ಮಕ್ಕಳು ಗುರು ಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡದುಕೊಂಡರು. ಬಳಿಕ ಶಿಬಿರದ ಮಕ್ಕಳಿಗೆ ಮೃತ್ಯುಂಜಯ ಕತ್ತಿ ಅವರ ಮಗಳು ಪೂರ್ವಿ ಕತ್ತಿ ಸ್ವಯಂ ರಕ್ಷಣೆಗಾಗಿ ಕರಾಟೆ ವಿದ್ಯೆ ಹೇಳಿಕೊಟ್ಟರು.
ಇದೇ ಸಂದರ್ಭದಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಜಮಖಂಡಿಯ ಕೊಣ್ಣೂರು ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಜೈನಾಪುರ ಶ್ರೀಗಳು, ಕರಭಂಟನಾಳದ ಶಿವಯ್ಯ ಸ್ವಾಮೀಜಿ, ಪ್ರಶಾಂತ ಹಿರೇಮಠ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

