ದೇವರಹಿಪ್ಪರಗಿ: ಯಾಳವಾರ ಗ್ರಾಮದ ಗುರು ಮಹಾಂತ ಶಿವಾಚಾರ‍್ಯರ ಜಾತ್ರಾ ಹಾಗೂ ನಮ್ಮೂರ ಹೆಮ್ಮೆ ನಮ್ಮೂರ ಮಹೋತ್ಸವ ಗುರುಮಠದಲ್ಲಿ ಜರುಗಲಿದೆ.
ದಿ:೧೧ ಶನಿವಾರದಂದು ಸಾಯಂಕಾಲ ೬ ಗಂಟೆಗೆ ಮಹಾಂತೇಶ್ವರ ಗದ್ದುಗೆಗೆ ಕಳಸಾರೋಹಣ ಹಾಗೂ ಆಧ್ಯಾತ್ಮ ಪ್ರವಚನ ಮಂಗಲ ನೆರವೇರಲಿದೆ. ಸಂಜೆ ೭ ಗಂಟೆಗೆ ಅನುದಿನ ಅನುಸರಿಸು ಸಂಸ್ಥೆ ವತಿಯಿಂದ ನಮ್ಮೂರ ಉತ್ಸವ ನಮ್ಮ ಹೆಮ್ಮೆ ರೈತೋತ್ಸವ ಮತ್ತು ೨೦೧ ಎತ್ತಿನ ಬಂಡಿ ಮೆರವಣಿಗೆ ಮಹಾಲಿಂಗೇಶ್ವರ ಕ್ರೀಡಾಂಗಣದಲ್ಲಿ ಜರುಗಲಿದೆ.
ದಿ:೧೨ ಭಾನುವಾರರದಂದು ಬೆಳಿಗ್ಗೆ ಬ್ರಾಹ್ಮಿ ಮುಹರ‍್ತದಲ್ಲಿ ಗುರುಗಳ ಗದ್ದುಗೆ ಮಹಾರುದ್ರಾಭಿಷೇಕ ಮಹಾಮಂಗಳಾರತಿ, ೯ ಗಂಟೆಗೆ ಜಗದ್ಗುರು ದಾರುಕಾಚರ‍್ಯರ ಅಡ್ಡಪಲ್ಲಕ್ಕಿ ಉತ್ಸವ ಮಧ್ಯಾನ್ಹ ಮಹಾಪ್ರಸಾದ ಸಾಯಂಕಾಲ ಹೆಡಗಾಪೂರ ಶಿವಲಿಂಗೇಶ್ವರ ಸಂಸ್ಥಾನಮಠ ಹಾಗೂ ಗುರುಮಾಂತೇಶ್ವರ ಗುರುಮಠದ ಷ.ಬ್ರ ದಾರುಕಲಿಂಗ ಶಿವಾಚರ‍್ಯರ ಸಾನಿಧ್ಯದಲ್ಲಿ ಶ್ರೀಗುರುಮಹಾಂತೇಶ್ವರ ಮಹಾರಥೋತ್ಸವ ಜರುಗಲಿದೆ. ಈ ಎಲ್ಲ ಕಾರ‍್ಯಕ್ರಮಗಳಲ್ಲಿ ಯಾಳವಾರ, ನಾಗರಾಳ, ಕಡಕೋಳ, ಭೈರವಾಡಗಿ, ಕಾಮನಕೇರಿ ಗ್ರಾಮಗಳ ಸದ್ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
