Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಕಾಣೆಯಾಗಿದ್ದ ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ವಿಜಯಪುರ ನಗರದ ಗಚ್ಚಿನಗಕಟ್ಟಿ ಕಾಲೋನಿಯಿಂದ ಮಕ್ಕಳು ನಾಪತ್ತೆಯಾಗಿದ್ದರು. ಭಾನುವಾರ ಕಾಲೋನಿಯಲ್ಲಿ ಒಂಟೆ ಬಂದಾಗ ಅದರ ಹಿಂದೆ ಹೋಗಿದ್ದರು.ಸೋಮವಾರ ಮೂರೂ ಮಕ್ಕಳ ಶವಗಳು ಇಂಡಿ ರಸ್ತೆಯ ಶಾಂತಿನಿಕೇತನ ನಗರದ ಚರಂಡಿಯಲ್ಲಿ ಪತ್ತೆಯಾಗಿವೆ.ಅನುಷ್ಕಾ ಅನಿಲ್ ದಹಿಂದೆ (09 ವರ್ಷ) ಗದಗ, ವಿಜಯ ಅನಿಲ್ ದಹಿಂದೆ +07ವರ್ಷ) ಗದಗ ಹಾಗೂ ಮಿಹೀರ್ ಜಂಗೌಲಿ (06ವರ್ಷ) ಬಿಜಾಪುರ ಶವವಾಗಿ ಪತ್ತೆಯಾಗಿದ್ದಾರೆ.ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪೊಷಕರು ಹಾಗೂ ಕಾಲೋನಿ ನಿವಾಸಿಗಳು ಕಾಣೆಯಾದ ಮಕ್ಕಳಿಗಾಗಿ ಎಲ್ಲೆಡೆ ಹುಡುಕಾಡಿದ್ದರು. ಸಿಸಿಟಿವಿಯಲ್ಲಿ ಮಕ್ಕಳು ಹೋಗುವುದು ಸೆರೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಾಣೆ ಕುರಿತು ಹಲವರು ಪೊಸ್ಟ್ ಮಾಡಿದ್ದರು.ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದೇವರಹಿಪ್ಪರಗಿ: ಅನ್ನ ಬ್ರಹ್ಮನ ಸ್ವರೂಪ. ಈ ಅನ್ನವನ್ನು ಬೆಳೆಯುವ ಪರಬ್ರಹ್ಮನೇ ರೈತ. ರೈತ ಎಂದರೆ ದೇವರು ಎಂದರೆ ತಪ್ಪಾಗಲಾರದು ಎಂದು ಜಾಲಹಳ್ಳಿ ಜಯಶಾಂತಲಿಂಗೇಶ್ವರ ಸಂಸ್ಥಾನಮಠದ ಜಯಶಾಂತಲಿಂಗಶ್ರೀಗಳು ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದ ಮಹಾಲಿಂಗೇಶ್ವರ ಕ್ರೀಡಾಂಗಣದಲ್ಲಿ ಶನಿವಾರ ಅನುದಿನ ಅನುಸರಿಸಿ ಸಂಸ್ಥೆಯ ಅಡಿಯಲ್ಲಿ ಜರುಗಿದ ನಮ್ಮೂರು ಉತ್ಸವ ನಮ್ಮ ಹೆಮ್ಮೆ, ರೈತೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ದೇಶಕ್ಕೆ ಯೋಧ ಮತ್ತು ರೈತ ಇವರಿಬ್ಬರೂ ಕಣ್ಣುಗಳಿದ್ದಂತೆ ಅಂತೆಯೇ ಭಾರತದ ಮಾಜಿಪ್ರಧಾನಿ ದಿ.ಲಾಲ್ ಬಹಾದ್ದೂರ ಶಾಸ್ತಿçಜೀ ಜೈಜವಾನ್ ಜೈಕಿಸಾನ್ ಎಂಬ ಅರ್ಥಗರ್ಭಿತ ಮಾತನ್ನು ಹೇಳಿದ್ದಾರೆ ಎಂದು ರೈತಪರ ಮಾತುಗಳನ್ನು ಹೇಳಿದರು.ಬೆಂಗಳೂರಿನ ಖ್ಯಾತ ಬಾಲವಾಗ್ಮಿ ಹಾರಿಕಾ ಮಂಜುನಾಥ ಮಾತನಾಡಿ, ದೇಶದಲ್ಲಿ ಇಂದು ಸಂಸ್ಕಾರ, ಮಠ, ಮಂದಿರಗಳ ಉಳಿವಿಗೆ ಕಾರಣರೇ ನಮ್ಮ ತಾಯಂದಿರು. ಭಾರತದಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಆದ್ದರಿಂದ ಗೋವುಗಳ ರಕ್ಷಣೆ, ಸೇವೆ ಇಂದು ಅತ್ಯಂತ ಅಗತ್ಯವಾಗಿದೆ ಎಂದು ರೈತಪರ, ಗೋವಿನ ರಕ್ಷಣೆ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.ನಂತರ ಅನುದಿನ ಅನುಸರಿಸಿ ಸಂಸ್ಥೆ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಲ್ಪಟ್ಟರು.
ಬಸವನಬಾಗೇವಾಡಿ: ಪಾಲಕರು ವಿದ್ಯಾವಂತರಾಗಿದ್ದರೆ ಮಾತ್ರ ಮಕ್ಕಳು ವಿದ್ಯಾವಂತರಾಗುತ್ತಾರೆ ಎನ್ನುವುದು ತಪ್ಪು ಗ್ರಹಿಕೆ. ಮಕ್ಕಳ ಕಲಿಕೆಗೆ ಪಾಲಕರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದರೆ ಮಕ್ಕಳು ವಿದ್ಯಾವಂತರಾಗುತ್ತಾರೆ ಯುವ ಮಿತ್ರ ಬಳಗ ಸದಸ್ಯ ರಮೇಶ ಕಳಸಗೊಂಡ ಹೇಳಿದರು.ಪಟ್ಟಣದ ಲಕ್ಷ್ಮೀ ನಗರದಲ್ಲಿ ಭಾನುವಾರ ಹುಣಶ್ಯಾಳ ಪಿಬಿ ಗ್ರಾಮದ ಆದರ್ಶ ವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಲಕ್ಷ್ಮೀ ಪರಶುರಾಮ ಅಡಗಿಮನಿ ಅವರಿಗೆ ಅವರ ನಿವಾಸದಲ್ಲಿ ಯುವ ಮಿತ್ರ ಬಳಗದಿಂದ ಸನ್ಮಾನಿಸಿ ಮಾತನಾಡಿದ ಅವರು , ಎಸ್,ಎಸ್,ಎಲ್,ಸಿಯಲ್ಲಿ ಶೇ, 96 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ. ಎಸ್ಎಸ್ಎಲ್ಸಿಯಲ್ಲಿ ಮೂರು ಸಲ ಅನುತ್ತೀರ್ಣರಾಗಿ ನಂತರ ಉತ್ತೀರ್ಣ ಆಗಿರುವದಾಗಿ ಅವಳ ತಂದೆ ಹೇಳುತ್ತಾರೆ. ಮಕ್ಕಳ ಕಲಿಕೆಗೆ ಪಾಲಕರ ಸಹಕಾರ ಮುಖ್ಯವಾಗಿರುತ್ತದೆ ಹೊರತು ಪಾಲಕರ ಪದವಿ ಅಲ್ಲ ಅನ್ನುವುದನ್ನು ಲಕ್ಷ್ಮೀ ಸತತ ಪ್ರಯತ್ನದಿಂದ ಸಾಧಿಸಿ ತೋರಿಸಿದ್ದಾಳೆ. ಪ್ರತಿಯೊಬ್ಬರು ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡುವಲ್ಲಿ ಗಮನ ಹರಿಸಬೇಕು ಅಂದಾಗ ಮಾತ್ರ ಮಕ್ಕಳು ಸಾಧನೆ ಮಾಡಲು ಸಾಧ್ಯ ಎಂದರು.ಸನ್ಮಾನ ಸ್ವೀಕರಿಸಿ…
ಬಸವನಬಾಗೇವಾಡಿ: ಮುಂದಿನ ಜನಾಂಗದ ಭವಿಷ್ಯ ಜೋಡೆತ್ತಿನ ಕೃಷಿಕರ ಮೇಲಿದೆ. ರೈತ ಬಾಂಧವರು ಜೋಡೆತ್ತುಗಳ ಮಹತ್ವ ಅರಿತು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಇಂದು ಎತ್ತುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಕೃಷಿ ಅವಲಿಂಬಿತ ಉದ್ಯೋಗಗಳು ನಶಿಸುತ್ತಿವೆ ಎಂದು ಅಬಿ ಪೌಂಢೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಹೇಳಿದರು.ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿನ ವಿರಕ್ತಮಠದ ಗವಿ ತೋಟದ ಆವರಣದ ಹತ್ತಿರದ ಬಸವ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಭಾನುವಾರ ಅಬಿ ಪೌಂಢೇಶನ್ ಹಾಗೂ ವಿರಕ್ತಮಠದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ತತ್ವ ಪುನಶ್ಚೇತನ ಸಂಕಲ್ಪ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಜೋಡೆತ್ತಿನ ಕೃಷಿ ಪುನಶ್ಚೇತನದ ಉದ್ದೇಶದಿಂದ ಸಿದ್ದೇಶ್ವರರ ಜನ್ಮಸ್ಥಳ ಬಿಜ್ಜರಗಿಯಿಂದ ನಂದಿಯಾತ್ರೆಯನ್ನು ಆರಂಭಿಸಲಾಗಿತ್ತು. ಈ ನಂದಿಯಾತ್ರೆಯಿಂದಾಗಿ ಅನೇಕ ಕಡೆಗಳಲ್ಲಿ ಜೋಡೆತ್ತು ಸಂರಕ್ಷಣೆಗೆ ಅನೇಕ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 30 ಜೋಡೆತ್ತು ಸಂಘಗಳನ್ನು ರಚಿಸಲಾಗಿದೆ. ಇಂದು ಜೋಡೆತ್ತುಗಳನ್ನು ಉಳಿಸಿದರೆ ಮಾತ್ರ ಮುಂದೆ ನಮಗೆ ಅನ್ನ ಸಂಪತ್ತು ಸಿಗುತ್ತದೆ ಎಂಬ ಜಾಗೃತಿ ಮೂಡಿಸುವುದು ಬಸವ ತತ್ವ…
ವಿಜಯಪುರ: ಬಸವ ಜಯಂತಿ ಅಂಗವಾಗಿ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಬಸವಜ್ಯೋತಿಯನ್ನು ತರಲಾಯಿತು. ಕಳೆದ 12 ವರ್ಷಗಳಿಂದ ಸ್ಥಳೀಯರ ನೆರವಿನೊಂದಿಗೆ ಜ್ಯೋತಿಯನ್ನು ತೆಗೆದುಕೊಂಡು ಮಸಬಿನಾಳ ಉಕ್ಕಲಿ, ಕತ್ನಳ್ಳಿ ಮಾರ್ಗವಾಗಿ 45ಕಿ.ಮೀ ದೂರವನ್ನು ರಾತ್ರಿಯಿಡಿ ಓಡುತ್ತ, ತರುತ್ತಿರುವ ಹಂದಿಗನೂರ ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಬಸು ಪಾಟೀಲ ಅವರಿಗೆ ಈ ಬಾರಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು ಜೊತೆಯಾದರು.ಬಸು ಪಾಟೀಲರೊಂದಿಗೆ ಬೆಂಗಳೂರಿನ ಜಗದೀಶ ದಮಾನಿಯಾ, ಪ್ರಸಾದ ಶ್ರೀಂಗೇರಿ, ಸಿಂಧು ನಾಯಕ, ಡಾ.ಚೈತ್ರಾನಂದ ಹುಮನಾಬಾದ, ಡಾ.ಅಭಿನಂದನ ಬೆಡಗೆ ಆಳಂದ, ಮಲ್ಲಿಕಾರ್ಜುನ ಆವಂತಿ ಕಲಬುರಗಿ, ವಿಜಯಪುರ ಸೈಕ್ಲಿಂಗ್ ಗ್ರುಪ್‍ನ ಸಂಕೇತ ಬಗಲಿ, ಪೊಲೀಸ್ ಅಧಿಕಾರಿ ಮಹಾಂತೇಶ ದಾಮಣ್ಣವರ, ರಘು ಸಾಲೋಟಗಿ, ರಾಜು ಯಲಗೊಂಡ, ಡಾ.ಭೀಮನಗೌಡ ಬಿರಾದಾರ, ಸೋಮು ಮಠ ಎಲ್‍ಐಸಿ, ಸರ್ವೇಶ ಬಿರಾದಾರ, ವಿಶ್ವೇಶ ಬಿರಾದಾರ, ಡಾ.ಮಹಾಂತೇಶ ಜಾಲಗೇರಿ, ಸುಮಿತ ಇಂಗಳೆ ವಿವಿಧ ದೂರಗಳವರೆಗೆ ಜೊತೆಯಾದರು.ವಿಜಯಪುರದ ಶಿವಗಿರಿಯಿಂದ ಈ ಜ್ಯೋತಿ ಯಾತ್ರೆಯನ್ನು ನಗರದ ಗಣ್ಯರು ಸ್ವಾಗತಿಸಿದರು. ಡಾ.ಬಿ.ಸಿ.ಉಪ್ಪಿನ, ಶ್ರೀಕಾಂತ ಶಿರಾಡೋಣ, ಡಾ.ಮಹಾಂತೇಶ ಬಿರಾದಾರ, ನಿವೃತ್ತ…
ವಿಜಯಪುರ: ರಾಸಾಯನಿಕವುಳ್ಳ ಅಡುಗೆ ಎಣ್ಣೆಯಿಂದ ಇತ್ತಿಚೀನ ದಿನಗಳಲ್ಲಿ ಹೆಚ್ಚುತ್ತಿರುವ ಕಾಯಿಲೆಗಳಿಂದ ಮುಕ್ತಿ ಪಡೆಯಲು ಈ ಮುಂಚಿನ ದೇಸಿ ಪದ್ಧತಿ ಗಾಣದ ಎಣ್ಣೆ ಉತ್ಪಾದಿಸುವ ಘಟಕಕ್ಕೆ ಕೋಲ್ಹಾಪುರ ಕನ್ಹೇರಿ ಮಠದ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ.ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ಶೇಂಗಾ, ಕುಸುಬಿ ಮತ್ತು ಕೊಬ್ಬರಿಗಳಿಂದ ಕಟ್ಟಿಗೆಯ ಗಾಣದ ಮೂಲಕ ಎಣ್ಣೆಯನ್ನು ತಯಾರಿಸುವ ಕೆಲಸಕ್ಕೆ ಸ್ಥಳೀಯರಾದ ಉಮೇಶ ಮಲ್ಲಣ್ಣನವರ ಮುಂದಾಗಿದ್ದು, ರಿಫೈನ್ಡ್ ಆಯಿಲ್‍ನಲ್ಲಿ ಜಿಡ್ಡಿನ ಅಂಶವಿದ್ದು ಮತ್ತು ರಾಸಾಯನಿಕಗಳನ್ನು ಬಳಸುತ್ತಾರೆ. ಈ ಎಣ್ಣೆ ಸೇವಿಸುವದರಿಂದ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಿ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಉಸಿರಾಟದ ತೊಂದರೆ, ಕ್ಯಾನ್ಸರ್, ದೇಹದಲ್ಲಿನ ಪ್ರತಿರೋಧಕ ಶಕ್ತಿ ಹೀನತೆ ಸೇರಿದಂತೆ ಹಲವು ಕಾಯಿಲೆಗಳು ಹೆಚ್ಚಾಗಿವೆ.ಅದಕ್ಕಾಗಿ ನಾವು ಮಧುರಾ ಆಯಿಲ್ ಇಂಡಸ್ಟ್ರೀಸ್ ಮೂಲಕ ಸಾಂಪ್ರದಾಯಿಕ ಮರದ ಗಾಣದಿಂದ ತಯಾರಿಸುವ ಶುದ್ಧ ಆರೋಗ್ಯಕರ ಕೊಬ್ಬರಿ, ಶೇಂಗಾ ಮತ್ತು ಕುಸುಬೆ ಅಡುಗೆ ಎಣ್ಣೆ ಉತ್ಪಾದಿಸುತ್ತಿದ್ದೇವೆ ಎಂದು ಉಮೇಶ ಮಲ್ಲಣ್ಣನವರ ಹೇಳಿದ್ದಾರೆ.ದಿ.15 ಗುರುವಾರ ಸಂ.4 ಗಂ. ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ನೈಸರ್ಗಿಕ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಅಮ್ಮ ಎಂದರೆ ಏನೋ ಹರುಷವು ನಮ್ಮ ಬಾಳಿಗೆ ಅವಳೇ ದೈವವು…. ಈ ಹಾಡು ಅದೆಷ್ಟು ನಿಜ ಅಲ್ಲವೇ?? ಏನೂ ಅರಿಯದ ಎಳೆ ಬೊಮ್ಮಟೆಯನ್ನು 9 ತಿಂಗಳ ಕಾಲ ಹೊತ್ತು, ಮೂಳೆ ಮುರಿಯುವ ನೋವನ್ನು ಸಹಿಸಿ, ವಿಪರೀತ ರಕ್ತಸ್ರಾವವನ್ನು ಅನುಭವಿಸಿ ಹೆರುವ ಮೂಲಕ ಈ ಭೂಮಿಗೆ ತರುವ ತಾಯಿ ಭೂಮಿಯಷ್ಟೇ ತೂಕವುಳ್ಳವಳು.ಮಗುವಿನ ಮಲ ಮೂತ್ರಗಳನ್ನು ಯಾವುದೇ ಹೇಸಿಗೆ ಇಲ್ಲದೆ ಸ್ವಚ್ಛಗೊಳಿಸಿ ತೊಳೆದು ಒರೆಸಿ ಪೌಡರ್ ಹಾಕಿ ಬಟ್ಟೆ ಬದಲಿಸಿ ಮಗುವಿಗೆ ಅಲಂಕಾರ ಮಾಡಿ ಮುದ್ದಾಡುವ ಅಮ್ಮ.ಏನು ಮಾಡಿದರೆ ಆಕೆಯ ಋಣ ತೀರೀತು??ತಾನು ನಿದ್ದೆಗೆಟ್ಟರೂ ತನ್ನ ಮಗು ನಿದ್ದೆಗೆಡಬಾರದೆಂದು ಕಾಲ ಕಾಲಕ್ಕೆ ಮಗುವಿನ ಹಾಸಿಗೆ ಪರೀಕ್ಷಿಸುವ, ಒದ್ದೆಯಾಗಿದ್ದರೆ ಬದಲಾಯಿಸುವ, ಅತ್ತರೆ ಎತ್ತಿ ರಮಿಸುವ ಹಸಿದರೆ ಹಾಲು ಕುಡಿಸುವ ಅಮ್ಮ ದೇವರ ನಂತರದ ಇನ್ನೊಂದು ದೈವ ಸೃಷ್ಟಿ ಎಂದರೆ ತಪ್ಪಲ್ಲ ಅಲ್ಲವೇ??ಬೆಳಗಾ ಮುಂಜಾನೆ ಬೇಗನೆ ಎದ್ದು ಮನೆ ಕೆಲಸಗಳ ಜೊತೆ ಜೊತೆಗೆ ತರಹಾವರಿ ತಿಂಡಿಗಳನ್ನು ಮಾಡಿ, ಎಲ್ಲದಕ್ಕೂ…
ತಾಳಿಕೋಟಿ: ತಾಲ್ಲೂಕಿನ ತುಂಬಗಿ ಗ್ರಾಮದ ಸಿದ್ದಪ್ಪ ಬೀರಪ್ಪ ಕಟ್ಟಿಮನಿ (62) ಅವರು ಶನಿವಾರ ಅನಾರೋಗ್ಯದ ಕಾರಣ ನಿಧನರಾದರು.ಅವರಿಗೆ ಪತ್ನಿ ಹಾಗೂ ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ.ಸ್ವಗ್ರಾಮದಲ್ಲಿ ಭಾನುವಾರ ಮೃತರ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.ಮೃತರು ವಿಜಯಪುರ ಜಿಲ್ಲಾ ವಾರ್ತಾಧಿಕಾರಿ ಅಮರೇಶ ದೊಡಮನಿ ಅವರ ಚಿಕ್ಕಪ್ಪನವರು.
ಚುನಾವಣಾ ಆಯೋಗದ ಆಯುಕ್ತರಿಗೆ ಪತ್ರ ಬರೆದ ಪತ್ರಿಕಾ ಸಂಸ್ಥೆಗಳು ನವದೆಹಲಿ: ಮೂರನೇ ಹಂತದ ಮತದಾನದ ನಂತರವೂ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸದ ಚುನಾವಣಾ ಆಯೋಗದ ಕ್ರಮವನ್ನು ಖಂಡಿಸಿ ಭಾರತದ ಐದು ಪತ್ರಿಕಾ ಸಂಸ್ಥೆಗಳು ಇಂದು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರವನ್ನು ಬರೆದಿವೆ.ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ ಪ್ರೆಸ್ ಕಾರ್ಪೊರೇಷನ್, ಪ್ರೆಸ್ ಅಸೋಸಿಯೇಷನ್, ವಿದೇಶಿ ವರದಿಗಾರರ ಕ್ಲಬ್ ಮತ್ತು ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ ಸಂಸ್ಥೆಗಳ ಅಧ್ಯಕ್ಷರು ಸಹಿ ಹಾಕಿರುವ ಪತ್ರದಲ್ಲಿ ಚುನಾವಣಾ ಆಯೋಗವು ಮೂರು ಹಂತಗಳ ಮತಗಳ ಸಂಪೂರ್ಣಅಂಕಿ-ಅಂಶಗಳನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳಿ ಆಘಾತ ಮತ್ತು ಆಶ್ಚರ್ಯವನ್ನು ವ್ಯಕ್ತಪಡಿಸಿದೆ.ಈ ಬೆಳವಣಿಗೆಗಳು ಚುನಾವಣೆಯ ನ್ಯಾಯಸಮ್ಮತತೆಯ ಬಗ್ಗೆ ಜನರ ಮನಸ್ಸಿನಲ್ಲಿ ಆತಂಕಕ್ಕೆ ಕಾರಣವಾಗಿವೆ ಎಂದು ಪತ್ರದಲ್ಲಿ ಹೇಳಲಾಗಿದೆ. 2019ರವರೆಗೆ ಅಂದರೆ ಕಳೆದ ಸಾರ್ವತ್ರಿಕ ಚುನಾವಣೆಯವರೆಗೆ, ಪ್ರತಿ ಹಂತದಲ್ಲಿ ಮತದಾನದ ನಂತರ ಪತ್ರಿಕಾಗೋಷ್ಠಿ ನಡೆಸುವುದು ಸಾಮಾನ್ಯವಾಗಿತ್ತು. ಮತದಾನದ ದಿನದಂದು ಏನಾಯಿತು ಎಂಬುದನ್ನು ಚುನಾವಣಾ ಆಯೋಗದಿಂದ ತಿಳಿದುಕೊಳ್ಳಲು ನಾಗರಿಕರಿಗೆ ಎಲ್ಲಾ ರೀತಿಯ ಹಕ್ಕಿದೆ…
