ಬಸವನಬಾಗೇವಾಡಿ: ಪಾಲಕರು ವಿದ್ಯಾವಂತರಾಗಿದ್ದರೆ ಮಾತ್ರ ಮಕ್ಕಳು ವಿದ್ಯಾವಂತರಾಗುತ್ತಾರೆ ಎನ್ನುವುದು ತಪ್ಪು ಗ್ರಹಿಕೆ. ಮಕ್ಕಳ ಕಲಿಕೆಗೆ ಪಾಲಕರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದರೆ ಮಕ್ಕಳು ವಿದ್ಯಾವಂತರಾಗುತ್ತಾರೆ ಯುವ ಮಿತ್ರ ಬಳಗ ಸದಸ್ಯ ರಮೇಶ ಕಳಸಗೊಂಡ ಹೇಳಿದರು.
ಪಟ್ಟಣದ ಲಕ್ಷ್ಮೀ ನಗರದಲ್ಲಿ ಭಾನುವಾರ ಹುಣಶ್ಯಾಳ ಪಿಬಿ ಗ್ರಾಮದ ಆದರ್ಶ ವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಲಕ್ಷ್ಮೀ ಪರಶುರಾಮ ಅಡಗಿಮನಿ ಅವರಿಗೆ ಅವರ ನಿವಾಸದಲ್ಲಿ ಯುವ ಮಿತ್ರ ಬಳಗದಿಂದ ಸನ್ಮಾನಿಸಿ ಮಾತನಾಡಿದ ಅವರು , ಎಸ್,ಎಸ್,ಎಲ್,ಸಿಯಲ್ಲಿ ಶೇ, 96 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ. ಎಸ್ಎಸ್ಎಲ್ಸಿಯಲ್ಲಿ ಮೂರು ಸಲ ಅನುತ್ತೀರ್ಣರಾಗಿ ನಂತರ ಉತ್ತೀರ್ಣ ಆಗಿರುವದಾಗಿ ಅವಳ ತಂದೆ ಹೇಳುತ್ತಾರೆ. ಮಕ್ಕಳ ಕಲಿಕೆಗೆ ಪಾಲಕರ ಸಹಕಾರ ಮುಖ್ಯವಾಗಿರುತ್ತದೆ ಹೊರತು ಪಾಲಕರ ಪದವಿ ಅಲ್ಲ ಅನ್ನುವುದನ್ನು ಲಕ್ಷ್ಮೀ ಸತತ ಪ್ರಯತ್ನದಿಂದ ಸಾಧಿಸಿ ತೋರಿಸಿದ್ದಾಳೆ. ಪ್ರತಿಯೊಬ್ಬರು ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡುವಲ್ಲಿ ಗಮನ ಹರಿಸಬೇಕು ಅಂದಾಗ ಮಾತ್ರ ಮಕ್ಕಳು ಸಾಧನೆ ಮಾಡಲು ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿನಿ ಲಕ್ಷ್ಮೀ ಪರಶುರಾಮ ಅಡಗಿಮನಿ ಮಾತನಾಡಿ, ನನ್ನ ವಿದ್ಯಾಭ್ಯಾಸಕ್ಕೆ ನನ್ನ ಮನೆಯಲ್ಲಿ ನನಗೆ ಸದಾ ಸಹಕಾರ ನೀಡುತ್ತಾ ಬಂದಿರುವದರಿಂದಲೇ ನಾನು ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ಶಾಲೆಯ ಶಿಕ್ಷಕರ ಮಾರ್ಗದರ್ಶನವು ಸದಾ ಸಿಕ್ಕಿದೆ. ನಾನು ಇನ್ನೂ ಹೆಚ್ಚಿನ ಅಂಕ ನಿರೀಕ್ಷೆ ಮಾಡಿದ್ದೆ. ಭವಿಷ್ಯದಲ್ಲಿ ಉತ್ತಮ ಅಂಕ ಪಡೆಯಲು ಪ್ರಯತ್ತಿಸುತ್ತೇನೆ. ನಾನು ಮುಂದೆ ಐಎಎಸ್ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಖಂಡಿತ ಪಟ್ಟಣಕ್ಕೆ ಐಎಎಸ್ ಅಧಿಕಾರಿಯಾಗಿ ಬರುವ ವಿಶ್ವಾಸವಿದೆ ಎಂದರು.
ಈ ಸಂಧರ್ಭದಲ್ಲಿ ಯುವ ಮಿತ್ರ ಬಳಗದ ವಿಜಯ ದುದಗಿ, ಮಂಜು ಕಲಾಲ, ಬಸವರಾಜ ನಂದಿಹಾಳ, ಲಕ್ಷ್ಮೀ ತಂದೆ ಪರಶುರಾಮ ಅಡಗಿಮನಿ ,ಕುಟುಂಬದ ಸದಸ್ಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

