ವಿಜಯಪುರ: ರಾಸಾಯನಿಕವುಳ್ಳ ಅಡುಗೆ ಎಣ್ಣೆಯಿಂದ ಇತ್ತಿಚೀನ ದಿನಗಳಲ್ಲಿ ಹೆಚ್ಚುತ್ತಿರುವ ಕಾಯಿಲೆಗಳಿಂದ ಮುಕ್ತಿ ಪಡೆಯಲು ಈ ಮುಂಚಿನ ದೇಸಿ ಪದ್ಧತಿ ಗಾಣದ ಎಣ್ಣೆ ಉತ್ಪಾದಿಸುವ ಘಟಕಕ್ಕೆ ಕೋಲ್ಹಾಪುರ ಕನ್ಹೇರಿ ಮಠದ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ.
ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ಶೇಂಗಾ, ಕುಸುಬಿ ಮತ್ತು ಕೊಬ್ಬರಿಗಳಿಂದ ಕಟ್ಟಿಗೆಯ ಗಾಣದ ಮೂಲಕ ಎಣ್ಣೆಯನ್ನು ತಯಾರಿಸುವ ಕೆಲಸಕ್ಕೆ ಸ್ಥಳೀಯರಾದ ಉಮೇಶ ಮಲ್ಲಣ್ಣನವರ ಮುಂದಾಗಿದ್ದು, ರಿಫೈನ್ಡ್ ಆಯಿಲ್‍ನಲ್ಲಿ ಜಿಡ್ಡಿನ ಅಂಶವಿದ್ದು ಮತ್ತು ರಾಸಾಯನಿಕಗಳನ್ನು ಬಳಸುತ್ತಾರೆ. ಈ ಎಣ್ಣೆ ಸೇವಿಸುವದರಿಂದ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಿ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಉಸಿರಾಟದ ತೊಂದರೆ, ಕ್ಯಾನ್ಸರ್, ದೇಹದಲ್ಲಿನ ಪ್ರತಿರೋಧಕ ಶಕ್ತಿ ಹೀನತೆ ಸೇರಿದಂತೆ ಹಲವು ಕಾಯಿಲೆಗಳು ಹೆಚ್ಚಾಗಿವೆ.
ಅದಕ್ಕಾಗಿ ನಾವು ಮಧುರಾ ಆಯಿಲ್ ಇಂಡಸ್ಟ್ರೀಸ್ ಮೂಲಕ ಸಾಂಪ್ರದಾಯಿಕ ಮರದ ಗಾಣದಿಂದ ತಯಾರಿಸುವ ಶುದ್ಧ ಆರೋಗ್ಯಕರ ಕೊಬ್ಬರಿ, ಶೇಂಗಾ ಮತ್ತು ಕುಸುಬೆ ಅಡುಗೆ ಎಣ್ಣೆ ಉತ್ಪಾದಿಸುತ್ತಿದ್ದೇವೆ ಎಂದು ಉಮೇಶ ಮಲ್ಲಣ್ಣನವರ ಹೇಳಿದ್ದಾರೆ.
ದಿ.15 ಗುರುವಾರ ಸಂ.4 ಗಂ. ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ನೈಸರ್ಗಿಕ ಕಟ್ಟಿಗೆ ಗಾಣದಿಂದ ತಯಾರಿಸುವ ಘಟಕ ಮತ್ತು ಮಳಿಗೆಯನ್ನು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಣೆ ಮಾಡಲಿದ್ದು, ಮರೇಗುದ್ದಿ ನಿರುಪಾಧೀಶ ಮಹಾಸ್ವಾಮಿಗಳು, ಶಿರೋಳ ಶಂಕರಾರೂಢ ಮಹಾಸ್ವಾಮಿಗಳು, ಮಮದಾಪುರ ಅಭನವ ಮುರುಘೇಂದ್ರ ಮಹಾಸ್ವಾಮಿಗಳು, ಗುಣದಾಳ ಡಾ.ವಿವೇಕಾನಂದ ದೇವರು, ನಾವದಗಿ ಶ್ರೀಶೈಲ ಸ್ವಾಮಿಗಳು, ಕಂಬಾಗಿ ಚನ್ನಬಸಯ್ಯ ಹಿರೇಮಠ ಸಾನಿಧ್ಯ ವಹಿಸಲಿದ್ದು, ಕೈಗಾರಿಕಾ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಸಚಿವ ಎಸ್.ಆರ್.ಪಾಟೀಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ನಂದಿ ಕಾರ್ಖಾನೆ ಅಧ್ಯಕ್ಷ, ಆನಂದಕುಮಾರ ದೇಸಾಯಿ, ಡಾ.ಮಹಾಂತೇಶ ಬಿರಾದಾರ ಈ ಸಂದರ್ಭದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಉಮೇಶ ಮಲ್ಲಣ್ಣವರ : 9449025212
Subscribe to Updates
Get the latest creative news from FooBar about art, design and business.
Related Posts
Add A Comment
