ವಿಜಯಪುರ: ಬಸವ ಜಯಂತಿ ಅಂಗವಾಗಿ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಬಸವಜ್ಯೋತಿಯನ್ನು ತರಲಾಯಿತು. ಕಳೆದ 12 ವರ್ಷಗಳಿಂದ ಸ್ಥಳೀಯರ ನೆರವಿನೊಂದಿಗೆ ಜ್ಯೋತಿಯನ್ನು ತೆಗೆದುಕೊಂಡು ಮಸಬಿನಾಳ ಉಕ್ಕಲಿ, ಕತ್ನಳ್ಳಿ ಮಾರ್ಗವಾಗಿ 45ಕಿ.ಮೀ ದೂರವನ್ನು ರಾತ್ರಿಯಿಡಿ ಓಡುತ್ತ, ತರುತ್ತಿರುವ ಹಂದಿಗನೂರ ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಬಸು ಪಾಟೀಲ ಅವರಿಗೆ ಈ ಬಾರಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು ಜೊತೆಯಾದರು.
ಬಸು ಪಾಟೀಲರೊಂದಿಗೆ ಬೆಂಗಳೂರಿನ ಜಗದೀಶ ದಮಾನಿಯಾ, ಪ್ರಸಾದ ಶ್ರೀಂಗೇರಿ, ಸಿಂಧು ನಾಯಕ, ಡಾ.ಚೈತ್ರಾನಂದ ಹುಮನಾಬಾದ, ಡಾ.ಅಭಿನಂದನ ಬೆಡಗೆ ಆಳಂದ, ಮಲ್ಲಿಕಾರ್ಜುನ ಆವಂತಿ ಕಲಬುರಗಿ, ವಿಜಯಪುರ ಸೈಕ್ಲಿಂಗ್ ಗ್ರುಪ್‍ನ ಸಂಕೇತ ಬಗಲಿ, ಪೊಲೀಸ್ ಅಧಿಕಾರಿ ಮಹಾಂತೇಶ ದಾಮಣ್ಣವರ, ರಘು ಸಾಲೋಟಗಿ, ರಾಜು ಯಲಗೊಂಡ, ಡಾ.ಭೀಮನಗೌಡ ಬಿರಾದಾರ, ಸೋಮು ಮಠ ಎಲ್‍ಐಸಿ, ಸರ್ವೇಶ ಬಿರಾದಾರ, ವಿಶ್ವೇಶ ಬಿರಾದಾರ, ಡಾ.ಮಹಾಂತೇಶ ಜಾಲಗೇರಿ, ಸುಮಿತ ಇಂಗಳೆ ವಿವಿಧ ದೂರಗಳವರೆಗೆ ಜೊತೆಯಾದರು.
ವಿಜಯಪುರದ ಶಿವಗಿರಿಯಿಂದ ಈ ಜ್ಯೋತಿ ಯಾತ್ರೆಯನ್ನು ನಗರದ ಗಣ್ಯರು ಸ್ವಾಗತಿಸಿದರು. ಡಾ.ಬಿ.ಸಿ.ಉಪ್ಪಿನ, ಶ್ರೀಕಾಂತ ಶಿರಾಡೋಣ, ಡಾ.ಮಹಾಂತೇಶ ಬಿರಾದಾರ, ನಿವೃತ್ತ ಪೊಲಸ್ ಅಧಿಕಾರಿ ಎನ್.ಎಸ್.ಪಾಟೀಲ, ಹಣಮಂತ ಚಿಂಚಲಿ, ಶರಣ ಶಂಕರ ಸಿದರೆಡ್ಡಿ, ಸೋಮಶೇಖರ ಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಸ್ವಾಗತಿಸಿ, ಬಸವೇಶ್ವರ ವೃತ್ತದವರೆಗೆ 5ಕಿ.ಮೀ ದೂರ ಓಡುತ್ತ ಬಂದರು.
ಶ್ರೀ ಸಿದ್ದೇಶ್ವರ ಸಂಸ್ಥೆ ಹಾಗೂ ಅಖಿಲಭಾರತ ವೀರಶೈವ ಮಹಾಸಭೆ ಪರವಾಗಿ ಎಲ್ಲ ಓಟಗಾರರನ್ನು ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

