ದೇವರಹಿಪ್ಪರಗಿ: ಅನ್ನ ಬ್ರಹ್ಮನ ಸ್ವರೂಪ. ಈ ಅನ್ನವನ್ನು ಬೆಳೆಯುವ ಪರಬ್ರಹ್ಮನೇ ರೈತ. ರೈತ ಎಂದರೆ ದೇವರು ಎಂದರೆ ತಪ್ಪಾಗಲಾರದು ಎಂದು ಜಾಲಹಳ್ಳಿ ಜಯಶಾಂತಲಿಂಗೇಶ್ವರ ಸಂಸ್ಥಾನಮಠದ ಜಯಶಾಂತಲಿಂಗಶ್ರೀಗಳು ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದ ಮಹಾಲಿಂಗೇಶ್ವರ ಕ್ರೀಡಾಂಗಣದಲ್ಲಿ ಶನಿವಾರ ಅನುದಿನ ಅನುಸರಿಸಿ ಸಂಸ್ಥೆಯ ಅಡಿಯಲ್ಲಿ ಜರುಗಿದ ನಮ್ಮೂರು ಉತ್ಸವ ನಮ್ಮ ಹೆಮ್ಮೆ, ರೈತೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ದೇಶಕ್ಕೆ ಯೋಧ ಮತ್ತು ರೈತ ಇವರಿಬ್ಬರೂ ಕಣ್ಣುಗಳಿದ್ದಂತೆ ಅಂತೆಯೇ ಭಾರತದ ಮಾಜಿಪ್ರಧಾನಿ ದಿ.ಲಾಲ್ ಬಹಾದ್ದೂರ ಶಾಸ್ತಿçಜೀ ಜೈಜವಾನ್ ಜೈಕಿಸಾನ್ ಎಂಬ ಅರ್ಥಗರ್ಭಿತ ಮಾತನ್ನು ಹೇಳಿದ್ದಾರೆ ಎಂದು ರೈತಪರ ಮಾತುಗಳನ್ನು ಹೇಳಿದರು.
ಬೆಂಗಳೂರಿನ ಖ್ಯಾತ ಬಾಲವಾಗ್ಮಿ ಹಾರಿಕಾ ಮಂಜುನಾಥ ಮಾತನಾಡಿ, ದೇಶದಲ್ಲಿ ಇಂದು ಸಂಸ್ಕಾರ, ಮಠ, ಮಂದಿರಗಳ ಉಳಿವಿಗೆ ಕಾರಣರೇ ನಮ್ಮ ತಾಯಂದಿರು. ಭಾರತದಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಆದ್ದರಿಂದ ಗೋವುಗಳ ರಕ್ಷಣೆ, ಸೇವೆ ಇಂದು ಅತ್ಯಂತ ಅಗತ್ಯವಾಗಿದೆ ಎಂದು ರೈತಪರ, ಗೋವಿನ ರಕ್ಷಣೆ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.
ನಂತರ ಅನುದಿನ ಅನುಸರಿಸಿ ಸಂಸ್ಥೆ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಲ್ಪಟ್ಟರು.
Subscribe to Updates
Get the latest creative news from FooBar about art, design and business.
ನಮ್ಮೂರು ಉತ್ಸವ ನಮ್ಮ ಹೆಮ್ಮೆ, ರೈತೋತ್ಸವ ಕಾರ್ಯಕ್ರಮಕ್ಕೆ ಚಾಲನೆ
Related Posts
Add A Comment

