Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಲ್ಕತ್ತಾ: ಲೋಕಸಭೆ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.ಭಾರತೀಯ ಜನತಾ ಪಕ್ಷವು (ಬಿಜೆಪಿ) ಸಂದೇಶ್‌ಖಾಲಿ ವಿಷಯದಲ್ಲಿ ‘ಸುಳ್ಳು’ ಹರಡುತ್ತಿದೆ ಎಂದು ಆರೋಪಿಸಿದ ಅವರು, “ಲೋಕಸಭಾ ಚುನಾವಣೆಯಲ್ಲಿ ಮೋದಿ ಅಧಿಕಾರಕ್ಕೆ ಮರಳುವುದಿಲ್ಲ ಎಂಬುದೆ ಒಂದು ಗ್ಯಾರಂಟಿ; ಇಂಡಿಯಾ ಬಣವು 295 ರಿಂದ 315 ಸ್ಥಾನಗಳನ್ನು ಪಡೆಯುತ್ತದೆ, ಬಿಜೆಪಿ 200ಕ್ಕೆ ಸೀಮಿತವಾಗಲಿದೆ” ಎಂದರು.“ಬಿಜೆಪಿ ಮತ್ತು ಪ್ರಧಾನಿ ಈ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ‘ಗ್ಯಾರೆಂಟಿ ಬಾಬು’ (ಮೋದಿಯವರ ಗ್ಯಾರಂಟಿಗೆ ಸ್ವೈಪ್) ಪಶ್ಚಿಮ ಬಂಗಾಳವನ್ನು ಕೆಣಕುತ್ತಿದೆ. ಈಗ, ಸತ್ಯವು ಹೊರಹೊಮ್ಮುತ್ತಿರುವಾಗ ಟಿವಿ ಚಾನೆಲ್‌ಗಳನ್ನು ತೋರಿಸಬೇಡಿ ಎಂದು ಅವರು ಕೇಳುತ್ತಿದ್ದಾರೆ. ಅವರು ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಮಹಿಳೆಯರ ಪ್ರತಿಷ್ಠೆಯನ್ನು ಹಾಳು ಮಾಡಲು ಬಿಜೆಪಿ ಸಂಚು ರೂಪಿಸಿದೆ” ಎಂದು ಪಶ್ಚಿಮ ಬಂಗಾಳದ ನಾಡಿಯಾದ ಕಲ್ಯಾಣಿಯಲ್ಲಿ ನಡೆದ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.ಭಾನುವಾರ ಬಂಗಾಳದ ಬ್ಯಾರಕ್‌ಪೋರ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಮೋದಿ,…
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯಿಂದ ಅಪಪ್ರಚಾರ | ಮಟುವಾ ಸಮುದಾಯಕ್ಕೆ ಪೌರತ್ವ ನವದೆಹಲಿ: ಪೌರತ್ವದ ಕುರಿತು ಮಟುವಾ ಸಮುದಾಯದ ಕಳವಳವನ್ನು ಪರಿಹರಿಸುವ ಪ್ರಯತ್ನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ. “ಸಮುದಾಯವು ಸಿಎಎ ಅಡಿಯಲ್ಲಿ ಪೌರತ್ವವನ್ನು ಪಡೆಯುತ್ತಾರೆ; ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅದರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.ಮಟುವಾ ಸಮುದಾಯದ ಭದ್ರಕೋಟೆ ಬೊಂಗಾವ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, “ಮಮತಾ ಬ್ಯಾನರ್ಜಿಯವರು ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ಅನುಷ್ಠಾನವನ್ನು ಎಂದಿಗೂ ತಡೆಯಲು ಸಾಧ್ಯವಿಲ್ಲ. ಏಕೆಂದರೆ, ಇದು ಕೇಂದ್ರ ಸರ್ಕಾರದ ಕಾನೂನಾಗಿದೆ. ನನ್ನ ನಿರಾಶ್ರಿತ ಸಹೋದರರು ಭಾರತದ ನಾಗರಿಕರಾಗುವುದನ್ನು ವಿಶ್ವದ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ; ಇದು ಮೋದಿಯವರ ಭರವಸೆ. ಪೌರತ್ವವು ಕೇಂದ್ರ ಸರ್ಕಾರದ ವಿಶೇಷ ಅಧಿಕಾರದ ಅಡಿಯಲ್ಲಿ ಬರುತ್ತದೆ, ರಾಜ್ಯ ಸರ್ಕಾರಗಳಲ್ಲ ಎಂಬುದನ್ನು ಮಮತಾ ಬ್ಯಾನರ್ಜಿ ನೆನಪಿಟ್ಟುಕೊಳ್ಳಬೇಕು” ಎಂದು ಅವರು ಹೇಳಿದರು.ಬ್ಯಾನರ್ಜಿ ಅವರು ಸುಳ್ಳು ಮತ್ತು ಸಿಎಎ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾ ಆರೋಪಿಸಿದರು.“ಸಿಎಎ…
ಬಸವನಬಾಗೇವಾಡಿ, ಮೇ. ೧೩ತಾಲೂಕಿನ ಡೋಣೂರ ಗ್ರಾಮದ ಕಟ್ಟೇಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ ಜಾತ್ರಾಮಹೋತ್ಸವ. ಹಜರತ್ ಸುಲೇಮಾನ ಉರುಸು ಮತು ಚೌಡಮ್ಮದೇವಿ ಜಾತ್ರಾಮಹೋತ್ಸವ ಜೂ. ೬ ಮತ್ತು ೭ ರಂದು ನಡೆಯಲಿದೆ. ಜಾತ್ರಾಮಹೋತ್ಸವದಂಗವಾಗಿ ಮೇ.೨೩ ರಿಂದ ಜೂ.೭ ರವರೆಗೆ ಹನುಮನಾಳದ ಶಿವಾನಂದೀಶ್ವರ ಶಾಸ್ತ್ರಿಗಳಿಂದ ಕಲಬುರಗಿ ಶರಣಬಸವೇಶ್ವರರ ಚರಿತ್ರೆ ಪ್ರತಿನಿತ್ಯ ಸಂಜೆ ೭ ಗಂಟೆಗೆ ಶ್ರೀಮಠದಲ್ಲಿ ಪುರಾಣ ಜರುಗಲಿದೆ. ಜಾತ್ರಾಮಹೋತ್ಸವದಂಗವಾಗಿ ಜೂ. ೭ ರಂದು ನಡೆಯುವ ಕಾರ್ಯಕ್ರಮದಲ್ಲಿ ಸರ್ವಧರ್ಮೀಯರ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲಿಚ್ಛಿಸುವವರು ವಧು-ವರ ಅವರ ಶಾಲೆಯ ದಾಖಲಾತಿ, ಆಧಾರ ಕಾರ್ಡ್, ವೋಟರ್ ಐಡಿ, ರಹವಾಸಿ ಪ್ರಮಾಣ ಪತ್ರ, ವಧು-ವರರ ನಾಲ್ಕು ಪೋಟೋಗಳೊಂದಿಗೆ ಜೂ.೨ ರೊಳಗೆ ಜಾತ್ರಾ ಕಮೀಟಿಯಲ್ಲಿ ತಮ್ಮ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಎಸ್.ಎಂ. ದುಂಬಾಳಿ- ೯೯೦೧೫೯೬೮೦೬, ಕೆ.ಜಿ.ಪಾಟೀಲ- ೯೫೩೫೪೯೭೨೯೯, ಎಸ್.ಎ.ಹಿರೇಮಠ- ೯೯೭೨೭೮೫೧೪೨, ಜಿ.ಡಿ.ಕೆರುಟಗಿ- ೯೪೮೨೬೨೯೬೦೮ ಅವರನ್ನು ಸಂಪರ್ಕಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಬಸವನಬಾಗೇವಾಡಿ: ಬಂಜಾರ ಸಮುದಾಯವು ತನ್ನದೇಯಾದ ವೇಷಭೂಷಣದಿಂದ ಭಾರತೀಯ ಶ್ರೀಮಂತ ಕಲಾ ಸಂಸ್ಕ್ರತಿಗೆ ಅಪಾರವಾದ ಕೊಡುಗೆ ನೀಡಿದೆ ಎಂದು ಕೇಸರಟ್ಟಿಯ ಸೋಮಲಿಂಗ ಮಹಾರಾಜರು ಹೇಳಿದರು.ಪಟ್ಟಣದ ಗಣೇಶ ನಗರದಲ್ಲಿರುವ ಯಲ್ಲಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಗೋರ್(ಬಂಜಾರ) ಮಾಳಾವ, ಅರಕೇರಿ-೨ದ ಎ.ಎಂ.ಆರ್.ಸಂಕಲ್ಪ ಸಂವೀಜಿನಿ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಂಜಾರ ಕಲಾಮೇಳ ಹಾಗೂ ರಾಜ್ಯಮಟ್ಟದ ಬಂಜಾರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಂಜಾರ ಸಂಸ್ಕ್ರತಿಯು ಸಾಂಸ್ಕ್ರತಿಕವಾಗಿ ಶ್ರೀಮಂತ ಪರಂಪರೆ ಹೊಂದಿದೆ. ಈ ಸಮುದಾಯದವರು ಆರ್ಥಿಕವಾಗಿ ಬಡವರಾದರೂ ಸಾಂಸ್ಕ್ರತಿಕವಾಗಿ ಶ್ರೀಮಂತವಾಗಿರುವ ಬಂಜಾರ ಸಮುದಾಯದ ಪ್ರದರ್ಶನ ಕಲೆ, ವೇಷಭೂಷಣ, ಮೌಖಿಕ ಸಾಹಿತ್ಯ ಆಧುನೀಕರಣದ ಪ್ರಭೆಯಲ್ಲಿ ಮಂಕಾಗಬಾರದು. ನಮ್ಮ ಸಮುದಾಯ ಬಾಂಧವರು ಯಾವುದೇ ಕಾರಣಕ್ಕೂ ಅನ್ಯ ಧರ್ಮಕ್ಕೆ ಮತಾಂತರವಾಗಬಾರದು. ವೈಶಿಷ್ಟಪೂರ್ಣ, ಶ್ರೇಷ್ಠ ಸಂಸ್ಕ್ರತಿಯಾದ ಬಂಜಾರ ಕಲೆ ಮತ್ತು ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಕಾರ್ಯವಾದರೆ ಮಾತ್ರ ಬಂಜಾರ ಸಮಾಜ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೋರ್ ಮಳಾವ್ ಸಂಘಟನೆಯ ಕಾರ್ಯಾಧ್ಯಕ್ಷ ಜಯಸಿಂಹ ಖಾಟ್ರೋತ, ರಾಜ್ಯ ಸಂಚಾಲಕ…
ಇಂಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಎಸಿ ಗದ್ಯಾಳ್ ಸೋಮವಾರ ಧಿಡೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡರು.ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ಈರಣ್ಣ ಧಾರವಾಡಕರ್ ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ಅಲ್ಲಿನ ವ್ಯವಸ್ಥೆ ಕುರಿತು ವಿವರಿಸಿದರು.ಕಳೆದ ೧೫ ವರ್ಷಗಳಿಂದ ಆಸ್ಪತ್ರೆಯಲ್ಲಿ ಸಿಜೇರಿಯನ್ ವ್ಯವಸ್ಥೆ ಇರಲಿಲ್ಲ. ಈಗ ವಾರದಲ್ಲಿ ಎರಡು ದಿನ ಮಂಗಳವಾರ ಮತ್ತು ಶುಕ್ರವಾರ ಸಿಜೇರಿಯನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಓಪಿಡಿ ವಿಭಾಗದಲ್ಲಿ ಮೊದಲಿನಂತೆ ಹಾಳೆಯ ಮೇಲೆ ಚೀಟಿ ಬರೆಯುತ್ತಿಲ್ಲ ಬದಲಾಗಿ ಡಿಜಟಲೀಕರಣ ಮಾಡಲಾಗಿದ್ದು ರೋಗಿಯ ಆಧಾರ ಕಾರ್ಡ ನಂಬರ್ ನೀಡಿದರೆ ಕೂಡಲೆ ಓಪಿಡಿ ಚೀಟಿಯ ಪ್ರಿಂಟ್ ಬರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿಯೂ ಸಹ ಉನ್ನತ ಮಟ್ಟದ ಮಶೀನಗಗಳನ್ನು ಸ್ಥಾಪಿಸಲಾಗಿದೆ. ರಕ್ತ ಶೇಖರಣಾ ಘಟಕ ಪ್ರಾರಂಭಿಸಲಾಗಿದ್ದು, ಖಾಸಗಿ ವೈದ್ಯರಿಗೂ ಸಹ ರಕ್ತ ನೀಡಲು ಮುಂದಾಗಲೂ ಸೂಚಿಸಿದರು.ಕೆಂದ್ರೀಯ ಪ್ರಯೋಗಾಲಯಕ್ಕೆ ಭೇಟಿ ನೀಡಿ ಅಲ್ಲಿನ ಉನ್ನತ ಮಟ್ಟದ ಟೆಸ್ಟ ಮಾಡುವುದನ್ನು ವೀಕ್ಷಿಸಿ ಅಲ್ಲಿನ ಸಿಬ್ಬಂದಿ ಹಾಗೂ ಮುಖ್ಯ ವೈದ್ಯಾಧಿಕಾರಿಗಳಿಗೆ ಪ್ರಶಂಸಿಸಿದರು.ಈ…
ಹೊನವಾಡ: ಗುರುವಿಲ್ಲದೆ, ಜೀವನದ ಅರ್ಥವಾಗಲಿ ಅಥವಾ ಜ್ಞಾನದ ಸಾಧನೆಯಾಗಲಿ ಸಾಧ್ಯವಿಲ್ಲ ಎಂದು ಚಿಕ್ಕರೂಗಿಯ ಈರಣ್ಣ ಶಾಸ್ತ್ರಿಗಳು ಹೇಳಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಬಸಣ್ಣ ಮಹಾರಾಜರು ಹಂಜಿಯವರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ಮೊದಲ ಗುರು ತಾಯಿ ನಮಗೆ ಜೀವ ನೀಡಿ ಲೌಕಿಕ ಮೌಲ್ಯಗಳನ್ನು ಪರಿಚಯಿಸಿದಂತೆ ಒಬ್ಬ ಗುರು ಮಾತ್ರ ಜ್ಞಾನ ಮತ್ತು ಭಗವಂತನ ಸಾಧನೆಯ ಮಾರ್ಗವನ್ನು ತೋರಿಸಬಲ್ಲ ಎಂದು ಎಸ್ ಏನ್ ಮಂಗೊಂಡ ಹೇಳಿದರು.ಬ್ರಹ್ಮಸ್ವರೂಪಿ ನಿರಾಕಾರ ಕಣ್ಣಿಗೆ ಕಾಣುವುದಿಲ್ಲ ನಿಜವಾದ ವಸ್ತುವನ್ನು ತೋರಿಸುವವನೆ ನಿಜವಾದ ಗುರು ಅಖಂಡ ಧ್ಯಾನದಿಂದಲೇ ನಾವು ಆ ದೇವರನ್ನು ಕಾಣಬಹುದು ಎಂದು ವಿಲಾಸರಾವ ಮಹಾರಾಜರು ಹೇಳಿದರು.ಬಿ ಡಿ ತೊದಲಬಾಗಿ ದಾನಯ್ಯ ಸತ್ತಿಗೇರಿ ರಾಮು ಚಪ್ಪರ ಎಸ್ ಬಿ ಕಡಬಿ ಬಿ ಎಂ ದೇವನಾಯಕ ಬಸವರಾಜ್ ಬರಾಡಿ ಕಲ್ಲಪ್ಪ ಹಂಜಿ ಮಹಾದೇವ ಹಂಜಿ ಮತ್ತಿತರರು ಇದ್ದರು.
ಚಡಚಣ: ಸೋಮವಾರ ಸಂಜೆ ವೇಳೆಗೆ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ರೇವತಗಾಂವ ಗ್ರಾಮದ ಜಮೀನವೊಂದರಲ್ಲಿ ನಡೆದಿದೆ.ವಿಠ್ಠಲ ಲಾಯಪ್ಪ ಲೋಣಿಯವರ ಜಮೀನಿನಲ್ಲಿರುವ ಮನೆಯ ಮುಂಭಾಗ ೫೦ ಮೀಟರ್ ಅಂತರದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಸಂಜೆ ೧೧:೧೫ರ ಸುಮಾರಿಗೆ ಬೀರುಗಾಳಿ ಸಹಿತ ಮಿಂಚು ಸಿಡಿಲಿನ ಅಬ್ಬರದಲ್ಲಿ ಸಿಡಿಲು ಬಡಿದ ಪರಿಣಾಮವಾಗಿ ತೆಂಗಿನ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿಸಿದ್ದಾರೆ.
ಕಲಕೇರಿ: ಗ್ರಾಮದ ಪೀಸ್ ಇಂಟರ್‌ನ್ಯಾಶನಲ್ ಆಂಗ್ಲ ಮಾಧ್ಯಮ ಪ್ರೌಡಶಾಲೆಯ ವಿಧ್ಯಾರ್ಥಿಗಳು ೨೦೨೩-೨೪ ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆಗೆ ಕುಳಿತ ಎಲ್ಲ ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶಾಲೆಯ ಒಟ್ಟು ಫಲಿತಾಂಶ ಶೇ.೧೦೦ ರಷ್ಟಾಗಿದೆ.ಮಹ್ಮದ್ ತನವೀರ ತಾಳಿಕೋಟಿ – ೫೯೦ – ೯೪.೪% ಪಡೆದು ಪ್ರಥಮ ಸ್ಥಾನ, ಸಾಹೇಬಗೌಡ ಕರಿಗೌಡರ – ೫೪೨ – ೮೬.೭೨%ದ್ವಿತೀಯ ಸ್ಥಾನ, ಅಬ್ದುಲ್‌ರಹಮಾನ ಅಸ್ಕಿ- ೫೧೪ – ೮೨.೨೪% ತೃತೀಯ ಸ್ಥಾನ, ಮಕ್ಕಾಬಿ ನದಾಫ – ೫೦೯ – ೮೧.೪೪% ನಾಲ್ಕನೆ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದು, ಮಕ್ಕಳ ಸಾಧನೆಗೆ ಮುಖ್ಯಗುರುಗಳು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ರೇವತಗಾಂವ: ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆಕಾಶ ರಾಜೇಂದ್ರ ಬಗಲಿ ಸಾಮಾನ್ಯ ಕಿರಾಣಿ ಅಂಗಡಿ ವ್ಯಾಪಾರಿ ಮಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೫೮೧(ಶೇ.೯೨.೯೬%) ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದಾನೆ. ಅಲ್ಲದೇ ಶಾಲೆಗೂ ಪ್ರಥಮ ಸ್ಥಾನ ಪಡೆದಿದ್ದಾನೆಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು. ಆಗ ದಾರಿ ಎಷ್ಟೇ ಕಷ್ಟವಾದರೂ ಸರಿ ಗುರಿ ಮುಟ್ಟಲು ಸಾಧ್ಯ ಎಂದು ಈ ಆಕಾಶ ತೋರಿಸಿಕೊಟ್ಟಿದ್ದಾರೆ. ೧೫ ವರ್ಷಗಳಿಂದ ಇಲ್ಲಿಯವರೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶಾಲಾ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಇತ್ತು. ಈ ಬಾರಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆಯವ ಮೂಲಕ ನಾವು ಏನೂ ಕಡಿಮೆ ಇಲ್ಲ ಎಂಬುದನ್ನು ಈ ಬಾಲಕ ತೋರಿಸಿಕೊಟ್ಟಿದ್ದಾನೆ.ತಂದೆ ಗ್ರಾಮದಲ್ಲಿ ಸುಮಾರು ೪೫ ವರ್ಷಗಳಿಂದ ಕಿರಾಣಿ ಅಂಗಡಿ ವ್ಯಾಪಾರಿ ವೃತ್ತಿಯನ್ನು ಮಾಡುತ್ತ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕೆಂದು ಮಕ್ಕಳಿಗಾಗಿ ಆಸ್ತಿಯನ್ನು ಮಾಡುವುದು ಬೇಡ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ತತ್ವವನ್ನು ಇಟ್ಟುಕೊಂಡು ಅವನು ತುಂಬಾ ಕಷ್ಟಪಟ್ಟಿದ್ದಾನೆ. ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ…
ತಿಕೋಟಾ: ವಿಜಯಪುರ ನಗರದ ಸೆಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಿಕೋಟಾ ಪಟ್ಟಣದ ವೈದ್ಯ ದಂಪತಿ ಡಾ. ಗುರುರಾಜ ನಾಗಠಾಣ ಹಾಗೂ ಡಾ.ಜಯಶ್ರೀ ನಾಗಠಾಣ ಅವರ ತ್ರಿವಳಿ ಅವಳಿ ಪುತ್ರಿಯರು ಈ ಬಾರಿ ನಡೆದ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ.ತ್ರಿವಳಿ ಅವಳಿ ಸಹೋದರಿಯರಾದ ಅಪೂರ್ವ ಶೇ. 95.36, ಅಮೂಲ್ಯ ಶೇ. 94.24 ಆಕಾಂಕ್ಷ ಶೇ. 85.28 ಮೂವರೂ ಉತ್ತಮ ಅಂಕ ಪಡೆದು ಗಮನ ಸೆಳೆದಿದ್ದಾರೆ. ಈ ತ್ರಿವಳಿ ಸಹೋದರಿಯರ ಸಾಧನೆಗೆ ಗ್ರಾಮಸ್ಥರು ಹಾಗೂ ವೈಧ್ಯ ದಂಪತಿಗಳು ಹರ್ಷವ್ಯಕ್ತಪಡಿಸಿದ್ದಾರೆ.
