ಬಸವನಬಾಗೇವಾಡಿ: ಬಂಜಾರ ಸಮುದಾಯವು ತನ್ನದೇಯಾದ ವೇಷಭೂಷಣದಿಂದ ಭಾರತೀಯ ಶ್ರೀಮಂತ ಕಲಾ ಸಂಸ್ಕ್ರತಿಗೆ ಅಪಾರವಾದ ಕೊಡುಗೆ ನೀಡಿದೆ ಎಂದು ಕೇಸರಟ್ಟಿಯ ಸೋಮಲಿಂಗ ಮಹಾರಾಜರು ಹೇಳಿದರು.
ಪಟ್ಟಣದ ಗಣೇಶ ನಗರದಲ್ಲಿರುವ ಯಲ್ಲಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಗೋರ್(ಬಂಜಾರ) ಮಾಳಾವ, ಅರಕೇರಿ-೨ದ ಎ.ಎಂ.ಆರ್.ಸಂಕಲ್ಪ ಸಂವೀಜಿನಿ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಂಜಾರ ಕಲಾಮೇಳ ಹಾಗೂ ರಾಜ್ಯಮಟ್ಟದ ಬಂಜಾರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಂಜಾರ ಸಂಸ್ಕ್ರತಿಯು ಸಾಂಸ್ಕ್ರತಿಕವಾಗಿ ಶ್ರೀಮಂತ ಪರಂಪರೆ ಹೊಂದಿದೆ. ಈ ಸಮುದಾಯದವರು ಆರ್ಥಿಕವಾಗಿ ಬಡವರಾದರೂ ಸಾಂಸ್ಕ್ರತಿಕವಾಗಿ ಶ್ರೀಮಂತವಾಗಿರುವ ಬಂಜಾರ ಸಮುದಾಯದ ಪ್ರದರ್ಶನ ಕಲೆ, ವೇಷಭೂಷಣ, ಮೌಖಿಕ ಸಾಹಿತ್ಯ ಆಧುನೀಕರಣದ ಪ್ರಭೆಯಲ್ಲಿ ಮಂಕಾಗಬಾರದು. ನಮ್ಮ ಸಮುದಾಯ ಬಾಂಧವರು ಯಾವುದೇ ಕಾರಣಕ್ಕೂ ಅನ್ಯ ಧರ್ಮಕ್ಕೆ ಮತಾಂತರವಾಗಬಾರದು. ವೈಶಿಷ್ಟಪೂರ್ಣ, ಶ್ರೇಷ್ಠ ಸಂಸ್ಕ್ರತಿಯಾದ ಬಂಜಾರ ಕಲೆ ಮತ್ತು ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಕಾರ್ಯವಾದರೆ ಮಾತ್ರ ಬಂಜಾರ ಸಮಾಜ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೋರ್ ಮಳಾವ್ ಸಂಘಟನೆಯ ಕಾರ್ಯಾಧ್ಯಕ್ಷ ಜಯಸಿಂಹ ಖಾಟ್ರೋತ, ರಾಜ್ಯ ಸಂಚಾಲಕ ಎಸ್.ಪಿ.ಲಿಂಬ್ಯಾನಾಯಕ, ಮಲ್ಲಿಕಾರ್ಜುನ ನಾಯಕ, ರವಿ ರಾಠೋಡ, ಹರಿಲಾಲ ನಾಯಕ, ಬಾಬು ಚವ್ಹಾಣ, ಶಾಂತು ರಾಠೋಡ, ಬಾಳು ರಾಠೋಡ, ಶಿವಾಜಿ ರಾಠೋಡ, ಬಸವರಾಜ ಲಮಾಣಿ, ಲಕ್ಷ್ಮಣ ರಾಠೋಡ, ರುಕ್ಮಿಣಿ ರಾಠೋಡ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಆಯುಕ್ತ ಬಸವರಾಜ ಲಮಾಣಿ ಇತರರು ಇದ್ದರು.
ಅಧ್ಯಕ್ಷತೆಯನ್ನು ರಾಷ್ಟ್ರೀಯ ಗೋರ್(ಬಂಜಾರಾ) ಮಳಾವದ ರಾಜ್ಯಾಧ್ಯಕ್ಷ ಡಾ.ಬಸವರಾಜ ಚವ್ಹಾಣ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಜಿ ಟಿವಿ ಕನ್ನಡದ ಸರಿಗಮಪ ಖ್ಯಾತಿಯ ಗಾಯಕ ರಮೇಶ ಲಮಾಣಿ, ಗಾಯಕ ಆರ್.ಬಿ.ನಾಯಕ, ಪುಂಡಲಿಕ ಲಮಾಣಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜ ಬಾಂಧವರಿಗೆ ಬಂಜಾರಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವ ತಾಯಂದಿರ ದಿನಾಚರಣೆಯಂಗವಾಗಿ ಬಳ್ಳಾವುರ ತಾಂಡೆಯ ೧೦೧ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿರುವ ಸೋನಾಬಾಯಿ ಹಾಪಸು ಪವಾರ ಅವರಿಗೆ ತುಲಾಭಾರ ನಡೆಯಿತು. ಮೋತಿಲಾಲ ರಾಠೋಡ ಸ್ವಾಗತಿಸಿದರು. ಪುಂಡಲೀಕ ಲಮಾಣಿ ನಿರೂಪಿಸಿದರು. ವಸಂತ ಚವ್ಹಾಣ ವಂದಿಸಿದರು. ಬಂಜಾರಾ ಕಲಾಮೇಳ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳ ಕಲಾವಿದರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

