ತಿಕೋಟಾ: ವಿಜಯಪುರ ನಗರದ ಸೆಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಿಕೋಟಾ ಪಟ್ಟಣದ ವೈದ್ಯ ದಂಪತಿ ಡಾ. ಗುರುರಾಜ ನಾಗಠಾಣ ಹಾಗೂ ಡಾ.ಜಯಶ್ರೀ ನಾಗಠಾಣ ಅವರ ತ್ರಿವಳಿ ಅವಳಿ ಪುತ್ರಿಯರು ಈ ಬಾರಿ ನಡೆದ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ.
ತ್ರಿವಳಿ ಅವಳಿ ಸಹೋದರಿಯರಾದ ಅಪೂರ್ವ ಶೇ. 95.36, ಅಮೂಲ್ಯ ಶೇ. 94.24 ಆಕಾಂಕ್ಷ ಶೇ. 85.28 ಮೂವರೂ ಉತ್ತಮ ಅಂಕ ಪಡೆದು ಗಮನ ಸೆಳೆದಿದ್ದಾರೆ. ಈ ತ್ರಿವಳಿ ಸಹೋದರಿಯರ ಸಾಧನೆಗೆ ಗ್ರಾಮಸ್ಥರು ಹಾಗೂ ವೈಧ್ಯ ದಂಪತಿಗಳು ಹರ್ಷವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

