ಹೊನವಾಡ: ಗುರುವಿಲ್ಲದೆ, ಜೀವನದ ಅರ್ಥವಾಗಲಿ ಅಥವಾ ಜ್ಞಾನದ ಸಾಧನೆಯಾಗಲಿ ಸಾಧ್ಯವಿಲ್ಲ ಎಂದು ಚಿಕ್ಕರೂಗಿಯ ಈರಣ್ಣ ಶಾಸ್ತ್ರಿಗಳು ಹೇಳಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಬಸಣ್ಣ ಮಹಾರಾಜರು ಹಂಜಿಯವರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಮೊದಲ ಗುರು ತಾಯಿ ನಮಗೆ ಜೀವ ನೀಡಿ ಲೌಕಿಕ ಮೌಲ್ಯಗಳನ್ನು ಪರಿಚಯಿಸಿದಂತೆ ಒಬ್ಬ ಗುರು ಮಾತ್ರ ಜ್ಞಾನ ಮತ್ತು ಭಗವಂತನ ಸಾಧನೆಯ ಮಾರ್ಗವನ್ನು ತೋರಿಸಬಲ್ಲ ಎಂದು ಎಸ್ ಏನ್ ಮಂಗೊಂಡ ಹೇಳಿದರು.
ಬ್ರಹ್ಮಸ್ವರೂಪಿ ನಿರಾಕಾರ ಕಣ್ಣಿಗೆ ಕಾಣುವುದಿಲ್ಲ ನಿಜವಾದ ವಸ್ತುವನ್ನು ತೋರಿಸುವವನೆ ನಿಜವಾದ ಗುರು ಅಖಂಡ ಧ್ಯಾನದಿಂದಲೇ ನಾವು ಆ ದೇವರನ್ನು ಕಾಣಬಹುದು ಎಂದು ವಿಲಾಸರಾವ ಮಹಾರಾಜರು ಹೇಳಿದರು.
ಬಿ ಡಿ ತೊದಲಬಾಗಿ ದಾನಯ್ಯ ಸತ್ತಿಗೇರಿ ರಾಮು ಚಪ್ಪರ ಎಸ್ ಬಿ ಕಡಬಿ ಬಿ ಎಂ ದೇವನಾಯಕ ಬಸವರಾಜ್ ಬರಾಡಿ ಕಲ್ಲಪ್ಪ ಹಂಜಿ ಮಹಾದೇವ ಹಂಜಿ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

