ಇಂಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಎಸಿ ಗದ್ಯಾಳ್ ಸೋಮವಾರ ಧಿಡೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ಈರಣ್ಣ ಧಾರವಾಡಕರ್ ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ಅಲ್ಲಿನ ವ್ಯವಸ್ಥೆ ಕುರಿತು ವಿವರಿಸಿದರು.
ಕಳೆದ ೧೫ ವರ್ಷಗಳಿಂದ ಆಸ್ಪತ್ರೆಯಲ್ಲಿ ಸಿಜೇರಿಯನ್ ವ್ಯವಸ್ಥೆ ಇರಲಿಲ್ಲ. ಈಗ ವಾರದಲ್ಲಿ ಎರಡು ದಿನ ಮಂಗಳವಾರ ಮತ್ತು ಶುಕ್ರವಾರ ಸಿಜೇರಿಯನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಓಪಿಡಿ ವಿಭಾಗದಲ್ಲಿ ಮೊದಲಿನಂತೆ ಹಾಳೆಯ ಮೇಲೆ ಚೀಟಿ ಬರೆಯುತ್ತಿಲ್ಲ ಬದಲಾಗಿ ಡಿಜಟಲೀಕರಣ ಮಾಡಲಾಗಿದ್ದು ರೋಗಿಯ ಆಧಾರ ಕಾರ್ಡ ನಂಬರ್ ನೀಡಿದರೆ ಕೂಡಲೆ ಓಪಿಡಿ ಚೀಟಿಯ ಪ್ರಿಂಟ್ ಬರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿಯೂ ಸಹ ಉನ್ನತ ಮಟ್ಟದ ಮಶೀನಗಗಳನ್ನು ಸ್ಥಾಪಿಸಲಾಗಿದೆ. ರಕ್ತ ಶೇಖರಣಾ ಘಟಕ ಪ್ರಾರಂಭಿಸಲಾಗಿದ್ದು, ಖಾಸಗಿ ವೈದ್ಯರಿಗೂ ಸಹ ರಕ್ತ ನೀಡಲು ಮುಂದಾಗಲೂ ಸೂಚಿಸಿದರು.
ಕೆಂದ್ರೀಯ ಪ್ರಯೋಗಾಲಯಕ್ಕೆ ಭೇಟಿ ನೀಡಿ ಅಲ್ಲಿನ ಉನ್ನತ ಮಟ್ಟದ ಟೆಸ್ಟ ಮಾಡುವುದನ್ನು ವೀಕ್ಷಿಸಿ ಅಲ್ಲಿನ ಸಿಬ್ಬಂದಿ ಹಾಗೂ ಮುಖ್ಯ ವೈದ್ಯಾಧಿಕಾರಿಗಳಿಗೆ ಪ್ರಶಂಸಿಸಿದರು.
ಈ ವಾರದಲ್ಲಿ ೫೭ ಟೆಸ್ಟಗಳನ್ನು ಮಾಡಲು ಪ್ರಾರಂಭ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಲಸಿದರು.
ಕ್ಷಯರೋಗ ವಿಭಾಗಕ್ಕೆ ಭೇಟಿ ನೀಡಿದ ಕಂದಾಯ ಉಪವಿಭಾಗಾಧಿಕಾರಿಗಳು ಉನ್ನತ ತಾಂತ್ರಿಕ ಸಿ.ಬಿ.ಎನ್.ಎ.ಎ.ಟಿ ಮಶೀನ್ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು ನಿಯೋಜನೆ ಮೇಲಿರುವ ವೈದ್ಯರನ್ನು ಕರೆ ತರಲು ಡಿಹೆಚ್ ಓ ಅವರಿಗೆ ಪತ್ರ ಬರೆಯಲುಸೂಚಿಸಿದರು.
ಎನ್.ಆರ್.ಸಿ ಕೇಂದ್ರದ ಕಟ್ಟಡ ಪೂರ್ಣಗೊಂಡಿದ್ದು ಇದುವರೆಗೂ ನಮಗೆ ಹಸ್ತಾಂತರವಾಗಿಲ್ಲ ಎಂದು ಮುಖ್ಯ ವೈದ್ಯಾಧಿಕಾರಿಗಳು ಕಂದಾಯ ಉಪವಿಭಾಗಾಧಿಕಾರಿಗಳಿಗೆ ತಿಳಿಸಿದಾಗ ಕೇಂದ್ರಕ್ಕೆ ಭೇಟಿ ನೀಡಿದ ಅಬೀದ್ ಗದ್ಯಾಳ ಅಲ್ಲಿನ ಕಟ್ಟಡ ಬಿರುಕು ಬಿಟ್ಟಿದ್ದನ್ನು ಕಂಡು ಅಸಮಾಧನಾಗೊಂಡು ಲ್ಯಾಂಡ್ ಆರ್ಮಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಕಟ್ಟಡ ಬಿರುಕು ಬಿಟ್ಟಿದ್ದಲ್ಲದೆ ಇನ್ನಷ್ಟು ಕೆಲಸಗಳು ಬಾಕಿ ಉಳಿದುಕೊಂಡಿವೆ. ಅವೆಲ್ಲವನ್ನೂ ಕೂಡಲೆ ಪೂರ್ಣಗೊಳಿಸಿ, ಜೊತೆಗೆ ಮೂಲ ಸೌಲಭ್ಯ ಕಲ್ಪಿಸಿ ಕೂಡಲೆ ಮುಖ್ಯ ವೈದ್ಯಾಧಿಕಾರಿಗಳಿಗೆ ಕಟ್ಟಡ ಹಸ್ತಾಂತರಿಸಲು ಸೂಚಿಸಿದರು.
ವಿಶ್ವ ದಾದಿಯರ ದಿನದ ಪ್ರಯುಕ್ತ ಎಲ್ಲ ದಾದಿಯರಿಗೆ ಕಂದಾಯ ಉಪವಿಭಾಗಾಧಿಕಾರಿಗಳು ಶುಭಾಷಯ ತಿಳಿಸಿ, ನಿಮ್ಮ ಕರ್ತವ್ಯವನ್ನು ಚಾಚೂ ತಪ್ಪದೆ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿ ಎಂದು ತಿಳಿಸಿದರು.
ಡಾ|| ರವಿ ಭತಗುಣಕಿ, ಡಾ|| ಅಮಿತ ಕೋಳೆಕರ್, ಡಾ|| ವಿಪುಲ್ ಕೋಳೆಕರ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

