ಬಸವನಬಾಗೇವಾಡಿ, ಮೇ. ೧೩
ತಾಲೂಕಿನ ಡೋಣೂರ ಗ್ರಾಮದ ಕಟ್ಟೇಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ ಜಾತ್ರಾಮಹೋತ್ಸವ. ಹಜರತ್ ಸುಲೇಮಾನ ಉರುಸು ಮತು ಚೌಡಮ್ಮದೇವಿ ಜಾತ್ರಾಮಹೋತ್ಸವ ಜೂ. ೬ ಮತ್ತು ೭ ರಂದು ನಡೆಯಲಿದೆ. ಜಾತ್ರಾಮಹೋತ್ಸವದಂಗವಾಗಿ ಮೇ.೨೩ ರಿಂದ ಜೂ.೭ ರವರೆಗೆ ಹನುಮನಾಳದ ಶಿವಾನಂದೀಶ್ವರ ಶಾಸ್ತ್ರಿಗಳಿಂದ ಕಲಬುರಗಿ ಶರಣಬಸವೇಶ್ವರರ ಚರಿತ್ರೆ ಪ್ರತಿನಿತ್ಯ ಸಂಜೆ ೭ ಗಂಟೆಗೆ ಶ್ರೀಮಠದಲ್ಲಿ ಪುರಾಣ ಜರುಗಲಿದೆ. ಜಾತ್ರಾಮಹೋತ್ಸವದಂಗವಾಗಿ ಜೂ. ೭ ರಂದು ನಡೆಯುವ ಕಾರ್ಯಕ್ರಮದಲ್ಲಿ ಸರ್ವಧರ್ಮೀಯರ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲಿಚ್ಛಿಸುವವರು ವಧು-ವರ ಅವರ ಶಾಲೆಯ ದಾಖಲಾತಿ, ಆಧಾರ ಕಾರ್ಡ್, ವೋಟರ್ ಐಡಿ, ರಹವಾಸಿ ಪ್ರಮಾಣ ಪತ್ರ, ವಧು-ವರರ ನಾಲ್ಕು ಪೋಟೋಗಳೊಂದಿಗೆ ಜೂ.೨ ರೊಳಗೆ ಜಾತ್ರಾ ಕಮೀಟಿಯಲ್ಲಿ ತಮ್ಮ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಎಸ್.ಎಂ. ದುಂಬಾಳಿ- ೯೯೦೧೫೯೬೮೦೬, ಕೆ.ಜಿ.ಪಾಟೀಲ- ೯೫೩೫೪೯೭೨೯೯, ಎಸ್.ಎ.ಹಿರೇಮಠ- ೯೯೭೨೭೮೫೧೪೨, ಜಿ.ಡಿ.ಕೆರುಟಗಿ- ೯೪೮೨೬೨೯೬೦೮ ಅವರನ್ನು ಸಂಪರ್ಕಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
