ರೇವತಗಾಂವ: ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆಕಾಶ ರಾಜೇಂದ್ರ ಬಗಲಿ ಸಾಮಾನ್ಯ ಕಿರಾಣಿ ಅಂಗಡಿ ವ್ಯಾಪಾರಿ ಮಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೫೮೧(ಶೇ.೯೨.೯೬%) ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದಾನೆ. ಅಲ್ಲದೇ ಶಾಲೆಗೂ ಪ್ರಥಮ ಸ್ಥಾನ ಪಡೆದಿದ್ದಾನೆ
ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು. ಆಗ ದಾರಿ ಎಷ್ಟೇ ಕಷ್ಟವಾದರೂ ಸರಿ ಗುರಿ ಮುಟ್ಟಲು ಸಾಧ್ಯ ಎಂದು ಈ ಆಕಾಶ ತೋರಿಸಿಕೊಟ್ಟಿದ್ದಾರೆ. ೧೫ ವರ್ಷಗಳಿಂದ ಇಲ್ಲಿಯವರೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶಾಲಾ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಇತ್ತು. ಈ ಬಾರಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆಯವ ಮೂಲಕ ನಾವು ಏನೂ ಕಡಿಮೆ ಇಲ್ಲ ಎಂಬುದನ್ನು ಈ ಬಾಲಕ ತೋರಿಸಿಕೊಟ್ಟಿದ್ದಾನೆ.
ತಂದೆ ಗ್ರಾಮದಲ್ಲಿ ಸುಮಾರು ೪೫ ವರ್ಷಗಳಿಂದ ಕಿರಾಣಿ ಅಂಗಡಿ ವ್ಯಾಪಾರಿ ವೃತ್ತಿಯನ್ನು ಮಾಡುತ್ತ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕೆಂದು ಮಕ್ಕಳಿಗಾಗಿ ಆಸ್ತಿಯನ್ನು ಮಾಡುವುದು ಬೇಡ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ತತ್ವವನ್ನು ಇಟ್ಟುಕೊಂಡು ಅವನು ತುಂಬಾ ಕಷ್ಟಪಟ್ಟಿದ್ದಾನೆ. ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಅವರ ರಾಜೇಂದ್ರರವರು ಹೇಳಿದರು.
ವಿದ್ಯಾರ್ಥಿ ಆಕಾಶ ಬಗಲಿ ಮಾತನಾಡುತ್ತ. ಪಾಲಕರ ಪರಿಶ್ರಮದ ಫಲವಾಗಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು. ನನ್ನ ಪೋಷಕರು ಮತ್ತು ಶಿಕ್ಷಕರು ನನ್ನನ್ನು ಚೆನ್ನಾಗಿ ತಯಾರು ಮಾಡಲು ಪ್ರೋತ್ಸಾಹಿಸಿದರು. ಕಠಿಣ ಪರಿಶ್ರಮದ ಜೊತೆಗೆ ಆಕಾಶ ತನ್ನ ಶೈಕ್ಷಣಿಕ ಯಶಸ್ಸನ್ನು ತನ್ನ ಪೋಷಕರು ಮತ್ತು ಶಿಕ್ಷಕರಿಗೆ ಕಾರಣವೆಂದು ಹೇಳಿದರು.
ವಿದ್ಯಾರ್ಥಿಯ ಈ ಪರಿಶ್ರಮಕ್ಕೆ ಶಾಲೆಯ ಮುಖ್ಯ ಗುರುಗಳಾದ ಎಂ.ಎಸ್.ಪಾಟೀಲ ಹಾಗೂ ಶಿಕ್ಷಕರುಗಳು ಹಾಗೂ ಮಲ್ಲು ಮಾನೆ, ಎಸ್.ಎಂ.ಮಾಳಿ, ಪಿ.ಸಿ.ಮಾಳಿ ಸೇರಿದಂತೆ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

