Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಿಮ್ಮಡ: ಮಂಗಳವಾರ ರಾತ್ರಿ ಸುರಿದ ಜೋರು ಮಳೆಯಿಂದ ಈ ಭಾಗದ ವಾತಾವರಣ ತಂಪೆರೆದಂತಾಗಿದ್ದು ರೈತರು ಹರ್ಷವ್ಯಕ್ತಪಡಿಸಿದ್ದಾರೆ. ಆದರೆ ಗ್ರಾಮದಲ್ಲಿ ನಡೆಯುತ್ತಿರುವ ಮೂರು ಮುಖದವ್ವದೇವಿ ಜಾತ್ರೆಗೆ ಆಗಮಿಸಿದ ಭಕ್ತರು ಹೈರಾಣಾಗಿದ್ದಾರೆ.ರಾತ್ರಿ ೮.೦೦ಘಂ. ಯಿಂದ ಸುಮಾರು ೩ ಘಂ.ಗಳ ಕಾಲ ಸುರಿದ ಮಳೆಯಿಂದಾಗಿ ಗ್ರಾಮದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಬ್ರಹತ್ ಜಾತ್ರೆ ಅಸ್ತವ್ಯಸಥಗೊಂಡಿದೆ, ಎತ್ತಿನಬಂಡಿ, ಟ್ರ್ಯಾಕ್ಟರ್ ಮುಂತಾದ ವಾಹನಗಳಲ್ಲಿ ಅಡುಗೆ ಸಾಮಗ್ರಿಗಳೊಂದಿಗೆ ಆಗಮಿಸಿದ ಸಾವಿರಾರು ಜನ ಭಕ್ತಾಧಿಗಳು ಈ ಅಕಾಲಿಕ ಮಳೆಯಿಂದ ಪರಿತಪಿಸುವಂತಾಯಿತು. ಅವರ ವಸತಿಗಾಗಿ ಹಾಕಿದ ಶಾಮಿಯಾನ ಕಿತ್ತು ಹೋದ ಪರಿಣಾಮ ಭಕ್ತರು ಶಾಲೆ, ಮಠ, ಮಂದಿರಗಳಲ್ಲಿ ಆಶ್ರಯ ಪಡೆದರು, ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸೊಳ್ಳೆಗಳ ಕಾಟದಿಂದಾಗಿ ಗ್ರಾಮಸ್ಥರು ಜಾಗರಣೆ ಮಾಡುವಂತಾಯಿತು,ಆದರೆ ವ್ಯಾಪಾರಿಗಳು ನಮಗೆ ಹಾನಿಯಾದರೂ ಪರವಾಗಿಲ್ಲ ಮಳೆಯಾಗಿದ್ದು ತುಂಬಾ ಖುಷಿಯಾಗಿದೆ, ಮೂರುಮಕದವ್ವ ಈ ಮಳೆ ಮೂಲಕ ನಮಗೆಲ್ಲ ಆಶೀರ್ವದಿಸಿದ್ದಾರೆಂದು ವ್ಯಾಪಾರಿ ಮಂಜುನಾಥ ತೊರವಿ ಅಭಿಪ್ರಾಯ ವ್ಯಕ್ತಪಡಿಸಿದರು.ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಮಳೆಯಿಲ್ಲದೇ ಹಲವಾರು ಕೊಳವೆ ಬಾವಿಗಳು ಕೈಕೊಟ್ಟಿದ್ದರ ಪರಿಣಾಮ…
೨ ದಿನದಲ್ಲಿ ಕೆರೆಗೆ ನೀರು ತುಂಬಿಸದಿದ್ದರೆ ಸಾವಿರಾರು ರೈತರೊಂದಿಗೆ ಕೆರೆಯಲ್ಲಿಯೆ ಕುಳಿತು ಧರಣಿ ಸತ್ಯಾಗ್ರಹದ ಎಚ್ಚರಿಕೆ ವಿಜಯಪುರ: ಜಂಬಗಿ ಕೆರೆ ಜಿಲ್ಲೆಯಲ್ಲಿಯೇ ೨ನೇ ಅತೀದೊಡ್ಡ ಕೆರೆಯಾಗಿದ್ದು, ಹಾಗೂ ಹುಣಶ್ಯಾಳ (ಮಾದಾಳ) ಕೆರೆಗಳಲ್ಲಿ ನೀರು ತುಂಬಿದರೆ ಸುತ್ತಮುತ್ತಲಿನ ೫-೬ ಹಳ್ಳಿಗಳ ರೈತರಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದು ಮಾತ್ರವಲ್ಲದೇ, ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಮೂಲಗಳು ಅಭಿವೃದ್ಧಿ ಹೊಂದುತ್ತವೆ. ಇದರಿಂದ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಆಹೇರಿ ಗ್ರಾಮದ ಮಾಜಿ ಗ್ರಾ.ಪಂ ಚೇರಮನ್ ಬಸವರಾಜ ಗಾಣಿಗೇರ ಮಾತನಾಡಿ, ಜಿಲ್ಲೆಯ ಎಲ್ಲಾ ಕೆರೆಗಳು ತುಂಬುತ್ತಿದ್ದರೂ ಜಂಬಗಿ ಹಾಗೂ ಹುಣಶ್ಯಾಳ ಕೆರೆ ಮಾತ್ರ ತುಂಬದೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಯವರೆಗೆ ಕೆರೆ ನೀರು ತುಂಬದೇ ಪುರಾಣ ಹೇಳುತ್ತಿದ್ದಾರೆ, ಕೇಳಿದರೆ ನಿಮಗೆ ನೀರು ಬರುವುದಿಲ್ಲ, ನೀವು ಮೇಲಿನ ಅಧಿಕಾರಿಗಳಿಗೆ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದರು.ವಿಜಯಪುರ…
ಇಂಡಿ: ತಾಲೂಕಿನ ತಾಂಬಾ ಗ್ರಾಮದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತ ಅವರ ಬಾಳನ್ನು ಬೆಳಗಿಸಿ ಶಿಕ್ಷಣ ಕ್ರಾಂತಿ ಮಾಡಿದ ಸುಭಾಸ ಎಸ್. ಕಲ್ಲೂರ ಅವರು ಬಡವರು, ನಿರ್ಗತಿಕರು, ಅಲ್ಪಸಂಖ್ಯಾತರ ಮತ್ತು ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಿದ ದಿವ್ಯ ಚೇತನ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಂಬಾ ಗ್ರಾಮದಲ್ಲಿ ಬುಧವಾರ ನಡೆದ ವೃಷಭಲಿಂಗೇಶ್ವರ ವಿದ್ಯಾ ವರ್ಧಕ ಸಂಘದ ನಿರ್ದೇಶಕ ಸುಭಾಸ ಎಸ್. ಕಲ್ಲೂರ ೩ನೇ ಪುಣ್ಯಸ್ಮರಣೆ ಮತ್ತು ಮೂರ್ತಿ ಅನಾವರಣ ಸಮಾರಂಭದಲ್ಲಿ ಮಾತನಾಡಿ, ೧೯೮೬ ರಲ್ಲಿ ವೃಷಭಲಿಂಗೇಶ್ವರ ವಿದ್ಯಾ ವರ್ಧಕ ಸಂಘದ ನಿರ್ದೇಶಕರಾಗಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಅವರ ಶಿಕ್ಷಣ ಪ್ರೇಮ, ಸಾಮಾಜಿಕ ಕಳಕಳಿ, ಸೇವಾ ಮನೋಭಾವ ಮಾದರಿಯಾಗಿದೆ. ಇಂತಹ ಮಹಾನ್ ವ್ಯಕ್ತಿಗಳ ಜೀವನಾದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದರು.ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸುಭಾಸ ಎಸ್. ಕಲ್ಲೂರ ಅವರು ಜನರ ಕಣ್ಣಿನಿಂದ ಮರೆಯಾದರೂ, ಅವರು ಮಾಡಿರುವ ಕಾರ್ಯಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ, ಕೇವಲ ಶಿಕ್ಷಣ ಕ್ಷೇತ್ರದಲ್ಲಷ್ಟೇ ಅಲ್ಲ,…
ಇಂಡಿ: ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ಅರ್ಹತೆಯಂತೆ ಬೆಳೆ ಹಾನಿ ಮೊತ್ತವನ್ನು ರೈತರ ಖಾತೆಗಳಿಗೆ ನೇರವಾಗಿ ಸರಕಾರದಿಂದ ಡಿಬಿಟಿ ಮೂಲಕ ಹಣ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.ರೈತರು ತಮ್ಮ ಖಾತೆಗೆ ಜಮಾ ಆಗಿರುವ ಹಣದ ಕುರಿತು ಪರಿಶೀಲಿಕೊಂಡು ಬೆಳೆ ಹಾನಿ ಪರಿಹಾರ ಜಮಾ ಅಗದೇ ಇದ್ದ ಸಂದರ್ಭದಲ್ಲಿ ೦೮೩೫೯ ೨೨೫೦೨೦, ೦೮೩೫೯ ೨೨೫೦೦೩ ಗೆ ಸಂಪರ್ಕಿಸಲು ಗದ್ಯಾಳ ತಿಳಿಸಿದ್ದಾರೆ.ಅದಲ್ಲದೆ ರೈತರಿಗೆ ಪರಿಹಾರ ಬರದಿದ್ದರೆ ರೈತರು ತಮ್ಮ ಖಾತೆಗೆ ಆಧಾರ ಲಿಂಕ ಮತ್ತು ಇಕೆವೈಸಿ ಮಾಡಿಸಬೇಕು. ಅದಲ್ಲದೆ ರೈತರು ಎಫ್‌ಐಡಿ ಮತ್ತು ಎನ್‌ಪಿಸಿಐ ಮಾಡಿಸಿರಬೇಕು. ಅದಲ್ಲದೆ ರೈತರು ಬ್ಯಾಂಕಿಗೆ ಹೋಗಿ ಅಕೌಂಟ್ ರಿ ಒಪನ್ ಪಾಡಿಸಬೇಕು. ಪ್ರುಟ್ ತಂತ್ರಾಂಶದಲ್ಲಿ ಹೆಸರು ಅಪ್ಲೆಡ್ ಆಗಿರಬೇಕು. ಸದರಿ ಫಲಾನುಭವಿಗಳು ಬ್ಯಾಂಕಿಗೆ ಹೋಗಿ ಎನ್.ಪಿ.ಸಿ ಐ ಮಾಡಿಸಬೇಕೆಂದು ಗದ್ಯಾಳ ತಿಳಿಸಿದ್ದಾರೆ.ಇಂಡಿ ತಾಲೂಕಿನ ೪೨೩೨೦ ರೈತರಿಗೆ ೬೪ ಕೋಟಿ ೭೧ ಲಕ್ಷ ೯೬,೭೯೫ ರೂ ಹಣ ಬಿಡುಗಡೆಯಾಗಿದೆ ಎಂದರು.
ಇಂಡಿ: ತಾಲೂಕಿನಲ್ಲಿ ಮಂಗಳವಾರ ರಾತ್ರಿ ೨೭.೭ ಮಿ.ಮಿ ಮಳೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.ಇಂಡಿ ೨೬.೭ ಮಿ.ಮಿ, ನಾದ ಬಿ.ಕೆ ೮.೨ ಮಿ.ಮಿ, ಅಗರಖೇಡ ೧೧.೧ ಮಿ.ಮಿ, ಹೊರ್ತಿ ೩೪.೦ ಮಿ.ಮಿ, ಝಳಕಿ ೫೮.೫ ಮಿ.ಮಿ, ಹಲಸಂಗಿ ೨೨.೦ ಮಿ.ಮಿ. ಮಳೆಯಾಗಿದೆ ಎಂದು ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ವಿಜಯಪುರ: ನಗರದ ಆದರ್ಶ ನಗರ ಶಿವಾಲಯದಲ್ಲಿ ನಾಟ್ಯಕಲಾ ಅಕಾಡೆಮಿ ವತಿಯಿಂದ ಗೆಜ್ಜೆಪೂಜೆ ಸಮಾರಂಭ ಜರುಗಿತು.ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ತಮ್ಮೋಳಗಿರುವ ಪ್ರತಿಭೆಯನ್ನು ಹೊರ ಹಾಕದೆ ತಮ್ಮ ಅಮೂಲ್ಯ ಸಮಯವನ್ನು ಪೆಸ್ಬುಕ್, ವಾಟ್ಸಪ್ ನಂತಹ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಇಂತಹ ಭರತನಾಟ್ಯ ಕಲೆಗಳಲ್ಲಿ ತೊಡಗಿಸುತ್ತಿರುವದು ಬಹಳ ಸಂತಸದ ಸಂಗತಿ. ಮಕ್ಕಳು ಕೂಡಾ ತಂದೆ ತಾಯಿಗಳ ಅಮೂಲ್ಯ ಸಮಯದ ಜೊತೆಗೆ ತಮ್ಮ ಆಸೆ, ಆಕಾಂಕ್ಷೆಗಳನ್ನು ಬತ್ತಿಗೊತ್ತಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಶ್ರಮಕ್ಕೆ ಮಕ್ಕಳು ಸಹ ಗಮನದಲ್ಲಿ ಇಟ್ಟುಕೊಂಡು ಸಾಧನೆಗೆ ಮುಂದಾಗಬೇಕೆಂದರು.ಅತಿಥಿಗಳಾಗಿ ಶ್ರೀಮತಿ ಮಧುಮತಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಶ್ರೀಮತಿ ಮಂಜುಳಾ ಹಿಪ್ಪರಗಿ, ದತ್ತಾತ್ರೇಯ ಹಿಪ್ಪರಗಿ, ನಾಟ್ಯಕಲಾ ಅಕಾಡೆಮಿ ಅದ್ಯಕ್ಷೆ ಶ್ರೀಮತಿ ಲಕ್ಷ್ಮಿ ತೇರದಾಳಮಠ, ರಾಹುಲ್ ಕಾಖಂಡಕಿ, ಕರುಣಾ ಬಂಬುರೆ ಉಪಸ್ಥಿತರಿದ್ದರು.ಮಕ್ಕಳು ಭರತನಾಟ್ಯ ಕಲೆಯನ್ನು ಪ್ರದರ್ಶನ ಮಾಡಿದರು.
ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದ ಲಿಂ.ಶಿವಲಿಂಗೇಶ್ವರರ ಕತೃತ್ವ ಶಕ್ತಿ ಅಗಾಧವಾಗಿದೆ. ಇಂತಹ ಪೂಜ್ಯರು ಬಸವನಾಡಿನಲ್ಲಿ ಸದಾ ಪ್ರಾತ:ಸ್ಮರಣಿಯರಾಗಿದ್ದರೆ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ಬುಧವಾರ ಬಸವಜಯಂತಿ ಆಚರಣೆ ಹಾಗೂ ಶಿವಲಿಂಗೇಶ್ವರ ಶಿವಯೋಗಿಗಳ ಪುಣ್ಯರಾಧನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿರಕ್ತ ಪರಂಪರೆಯಲ್ಲಿ ಅಗಾಧವಾದ ಶಕ್ತಿ ಇದೆ. ಮನೆಯಲ್ಲಿ ಮಗು ಅಳುತ್ತಿದ್ದರೆ ಆ ಮಗುವನ್ನ ವಿರಕ್ತಮಠದಲ್ಲಿರುವ ಶಿವಲಿಂಗೇಶ್ವರರ ಗದ್ದುಗೆಯ ಮುಂದೆ ಹಾಕಿ ಶ್ರೀಗಳ ಪ್ರಸಾದ ಹಣೆಗೆ ಹಚ್ಚಿದರೆ ಸಾಕು ಮಗು ಅಳುವನ್ನು ನಿಲ್ಲಿಸುತ್ತಿತ್ತು ಎಂದರೆ ಶಿವಲಿಂಗೇಶ್ವರ ಶಿವಯೋಗಿಗಳು ಎಂತಹ ಮಹಾನ್ ತಪಸ್ವಿಗಳಾಗಿದ್ದರು ಎನ್ನುವುದನ್ನು ನಾವೆಲ್ಲರು ಅರಿತುಕೊಳ್ಳಬೇಕೆಂದರು.ವಿರಕ್ತ ಪರಂಪರೆಯಲ್ಲಿ ಸಾಕಷ್ಟು ಶರಣರು ಇಂತಹ ಶಕ್ತಿಯನ್ನ ಪಡೆದಿದ್ದರು. ಮಠಕ್ಕೆ ಬಂದ ಭಕ್ತರಿಗೆ ಯಂತ್ರವನ್ನು ಕಟ್ಟಿ ಅವರ ದು:ಖವನ್ನು ದೂರ ಮಾಡುವ ಶಕ್ತಿಯನ್ನು ಸಿದ್ದಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮೀಜಿ ಹೊಂದಿದ್ದರು. ಅದೇ ರೀತಿಯಲ್ಲಿ ಅಗಾದ ಶಕ್ತಿ ಪಡೆದ ಶಿವಲಿಂಗೇಶ್ವರ ಶಿವಯೋಗಿಗಳು ಕಷ್ಟ ಅಂತ ಬಂದವರ ಕಷ್ಟವನ್ನು ಪರಿಹರಿಸುತ್ತಿದ್ದರು. ಈಗಾಗಲೇ ಅವರ…
ಬಸವನಬಾಗೇವಾಡಿ: ಜಗತ್ತಿನಲ್ಲಿ ಭಕ್ತಿ ಭಾವ ಕಡಿಮೆಯಾದರೆ ಸಮಾಜಕ್ಕೆ ಕಂಟಕವಾಗುತ್ತದೆ. ಈ ನಿಟ್ಟಿನಲ್ಲಿ ಭಕ್ತಿ ಭಾವ ಕಡಿಮೆಯಾಗದಂತೆ ಜನರು ಗಮನ ಹರಿಸುವುದು ತುಂಬಾ ಅಗತ್ಯವಿದೆ ಎಂದು ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಉತ್ನಾಳ ಗ್ರಾಮದ ಮಹಾಲಕ್ಷ್ಮೀದೇವಿಯ ೩೧ ನೇ ಜಾತ್ರಾಮಹೋತ್ಸವದಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮಸಭೆ, ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ, ಶ್ರೀಮಠದ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಮಠ-ಮಾನ್ಯಗಳು ಭಕ್ತರಿಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚು ಭಾಗವಹಿಸುವ ಮೂಲಕ ಧರ್ಮ ಮತ್ತು ಸಂಸ್ಕ್ರತಿಯನ್ನು ಅರಿತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರವಾದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು. ಈಚೆಗೆ ಧರ್ಮ ಮತ್ತು ಸಂಸ್ಕ್ರತಿ ಮೊದಲಿನಂತೆ ಉಳಿಯುತ್ತಿಲ್ಲ. ಇದನ್ನು ಹೀಗೆ ಮುಂದುವರಿಯಲು ಬಿಟ್ಟರೆ ಸಮಾಜಕ್ಕೆ ಕಂಟಕವಾಗುತ್ತದೆ. ಇದನ್ನು ಅರಿತುಕೊಂಡು ಪ್ರತಿಯೊಬ್ಬರೂ ಧರ್ಮ, ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದರು.ಪ್ರತಿವರ್ಷ ಉತ್ನಾಳದ ಹಿರೇಮಠವು ಮಹಾಲಕ್ಷ್ಮೀದೇವಿ ಜಾತ್ರಾಮಹೋತ್ಸವದಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು…
ಬಸವನಬಾಗೇವಾಡಿ: ಸರ್ಕಾರ ಪಂಚಗ್ಯಾರಂಟಿಗಳಲ್ಲಿ ೨೦೦ ಯುನಿಟ್ ಬಳಕೆ ಮಾಡುವ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುತ್ತಿದೆಯಾದರೂ ವಿದ್ಯುತ್ ಬಿಲ್ ಕಟ್ಟುವ ಗ್ರಾಹಕರು ಸ್ಥಳೀಯ ಹೆಸ್ಕಾಂ ಕಚೇರಿಯ ಬಿಲ್ ಕೇಂದ್ರದ ಮುಂದೆ ನಿತ್ಯವೂ ಬಿಸಿಲಿನಲ್ಲಿಯೇ ನಿಂತು ತುಂಬುತ್ತಿರುವದು ಕಂಡುಬರುತ್ತಿದೆ.ವಿದ್ಯುತ್ ಬಿಲ್ ಕಟ್ಟುವ ಒಂದು ಬದಿಯಲ್ಲಿ ಇಳಿಜಾರು ಇರುವದರಿಂದಾಗಿ ವೃದ್ದರಿಗೆ ತುಂಬಾ ತೊಂದರೆಯಾಗುತ್ತಿದೆ. ಬಿಲ್ ತುಂಬಲು ಬರುವ ಗ್ರಾಹಕರು ತಮ್ಮ ಬಿಲ್ ರಸೀದಿ ಬರುವವರೆಗೂ ಬಿಸಿಲಿನಲ್ಲಿಯೇ ನಿಂತು ಕೊಳ್ಳುವುದು ಅನಿವಾರ್ಯವಾಗಿದೆ. ಬಿಲ್ ರಸೀದಿ ತಡವಾಗಿ ಬರುತ್ತಿದೆ. ಇದರಿಂದಾಗಿ ಗ್ರಾಹಕರು ಕಾಯ್ದು ತೆಗೆದುಕೊಂಡು ಹೋಗಬೇಕಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇದರ ಕಡೆಗೆ ಗಮನ ಹರಿಸಬೇಕೆಂದು ಎಂ.ಬಿ.ತೋಟದ ಹೇಳುತ್ತಾರೆ.
ಸಿಂದಗಿ: ಮುಂಬರುವ ದಿನಮಾನಗಳಲ್ಲಿ ಸಿಂದಗಿ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸನ್ನು ಹೊಂದಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಗೋಲಗೇರಿ ಹಾಗೂ ಸಾಸಾಬಾಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಮ್ಮಿಕೊಂಡ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ. ಅದನ್ನು ಈಡೇರಿಸಿಯೇ ತಿರುತ್ತೇನೆ ಎಂದರು.ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಸವರಾಜ ಮಾರಲಭಾವಿ, ದಾನಪ್ಪಗೌಡ ಚನಗೊಂಡ, ಸಿಂದಗಿ ಭೂನ್ಯಾಯ ಮಂಡಳಿ ಸದಸ್ಯ ಮುದಿಗೌಡ ಬಿರಾದಾರ, ಕಾಂಗ್ರೆಸ್ ಪಕ್ಷದ ಮುಖಂಡ ಮಡಿವಾಳ ನಾಯ್ಕೋಡಿ, ಮಂಜುನಾಥ ಯಂಕಂಚಿ, ನೀಲಕಂಠ ಚಲವಾದಿ, ನಬೀಸಾಬ ಕೋರಬು, ಬಾಬು ಜಾಲವಾದಿ, ಖಾದರ್ ಹಳಿಮನಿ, ಲಕ್ಷ್ಮಣ ಕಲಾಲ, ರಾಜು ಹೊಳಕುಂದಿ, ಸಿದ್ದಣ್ಣ ಬಿರಾದಾರ, ಧರ್ಮುರಾಠೋಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತಿರಿದ್ದರು.
