ವಿಜಯಪುರ: ನಗರದ ಆದರ್ಶ ನಗರ ಶಿವಾಲಯದಲ್ಲಿ ನಾಟ್ಯಕಲಾ ಅಕಾಡೆಮಿ ವತಿಯಿಂದ ಗೆಜ್ಜೆಪೂಜೆ ಸಮಾರಂಭ ಜರುಗಿತು.
ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ತಮ್ಮೋಳಗಿರುವ ಪ್ರತಿಭೆಯನ್ನು ಹೊರ ಹಾಕದೆ ತಮ್ಮ ಅಮೂಲ್ಯ ಸಮಯವನ್ನು ಪೆಸ್ಬುಕ್, ವಾಟ್ಸಪ್ ನಂತಹ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಇಂತಹ ಭರತನಾಟ್ಯ ಕಲೆಗಳಲ್ಲಿ ತೊಡಗಿಸುತ್ತಿರುವದು ಬಹಳ ಸಂತಸದ ಸಂಗತಿ. ಮಕ್ಕಳು ಕೂಡಾ ತಂದೆ ತಾಯಿಗಳ ಅಮೂಲ್ಯ ಸಮಯದ ಜೊತೆಗೆ ತಮ್ಮ ಆಸೆ, ಆಕಾಂಕ್ಷೆಗಳನ್ನು ಬತ್ತಿಗೊತ್ತಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಶ್ರಮಕ್ಕೆ ಮಕ್ಕಳು ಸಹ ಗಮನದಲ್ಲಿ ಇಟ್ಟುಕೊಂಡು ಸಾಧನೆಗೆ ಮುಂದಾಗಬೇಕೆಂದರು.
ಅತಿಥಿಗಳಾಗಿ ಶ್ರೀಮತಿ ಮಧುಮತಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಶ್ರೀಮತಿ ಮಂಜುಳಾ ಹಿಪ್ಪರಗಿ, ದತ್ತಾತ್ರೇಯ ಹಿಪ್ಪರಗಿ, ನಾಟ್ಯಕಲಾ ಅಕಾಡೆಮಿ ಅದ್ಯಕ್ಷೆ ಶ್ರೀಮತಿ ಲಕ್ಷ್ಮಿ ತೇರದಾಳಮಠ, ರಾಹುಲ್ ಕಾಖಂಡಕಿ, ಕರುಣಾ ಬಂಬುರೆ ಉಪಸ್ಥಿತರಿದ್ದರು.
ಮಕ್ಕಳು ಭರತನಾಟ್ಯ ಕಲೆಯನ್ನು ಪ್ರದರ್ಶನ ಮಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

