ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದ ಲಿಂ.ಶಿವಲಿಂಗೇಶ್ವರರ ಕತೃತ್ವ ಶಕ್ತಿ ಅಗಾಧವಾಗಿದೆ. ಇಂತಹ ಪೂಜ್ಯರು ಬಸವನಾಡಿನಲ್ಲಿ ಸದಾ ಪ್ರಾತ:ಸ್ಮರಣಿಯರಾಗಿದ್ದರೆ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಬುಧವಾರ ಬಸವಜಯಂತಿ ಆಚರಣೆ ಹಾಗೂ ಶಿವಲಿಂಗೇಶ್ವರ ಶಿವಯೋಗಿಗಳ ಪುಣ್ಯರಾಧನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿರಕ್ತ ಪರಂಪರೆಯಲ್ಲಿ ಅಗಾಧವಾದ ಶಕ್ತಿ ಇದೆ. ಮನೆಯಲ್ಲಿ ಮಗು ಅಳುತ್ತಿದ್ದರೆ ಆ ಮಗುವನ್ನ ವಿರಕ್ತಮಠದಲ್ಲಿರುವ ಶಿವಲಿಂಗೇಶ್ವರರ ಗದ್ದುಗೆಯ ಮುಂದೆ ಹಾಕಿ ಶ್ರೀಗಳ ಪ್ರಸಾದ ಹಣೆಗೆ ಹಚ್ಚಿದರೆ ಸಾಕು ಮಗು ಅಳುವನ್ನು ನಿಲ್ಲಿಸುತ್ತಿತ್ತು ಎಂದರೆ ಶಿವಲಿಂಗೇಶ್ವರ ಶಿವಯೋಗಿಗಳು ಎಂತಹ ಮಹಾನ್ ತಪಸ್ವಿಗಳಾಗಿದ್ದರು ಎನ್ನುವುದನ್ನು ನಾವೆಲ್ಲರು ಅರಿತುಕೊಳ್ಳಬೇಕೆಂದರು.
ವಿರಕ್ತ ಪರಂಪರೆಯಲ್ಲಿ ಸಾಕಷ್ಟು ಶರಣರು ಇಂತಹ ಶಕ್ತಿಯನ್ನ ಪಡೆದಿದ್ದರು. ಮಠಕ್ಕೆ ಬಂದ ಭಕ್ತರಿಗೆ ಯಂತ್ರವನ್ನು ಕಟ್ಟಿ ಅವರ ದು:ಖವನ್ನು ದೂರ ಮಾಡುವ ಶಕ್ತಿಯನ್ನು ಸಿದ್ದಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮೀಜಿ ಹೊಂದಿದ್ದರು. ಅದೇ ರೀತಿಯಲ್ಲಿ ಅಗಾದ ಶಕ್ತಿ ಪಡೆದ ಶಿವಲಿಂಗೇಶ್ವರ ಶಿವಯೋಗಿಗಳು ಕಷ್ಟ ಅಂತ ಬಂದವರ ಕಷ್ಟವನ್ನು ಪರಿಹರಿಸುತ್ತಿದ್ದರು. ಈಗಾಗಲೇ ಅವರ ಚರಿತ್ರೆ ಪುಸ್ತಕ ರೂಪದಲ್ಲಿ ಲೋಕಾರ್ಪಣೆಗೊಂಡಿದೆ. ಮುಂಬರುವ ದಿನಗಳಲ್ಲಿ ಶಿವಲಿಂಗೇಶ್ವರರ ಪುರಾಣವನ್ನು ಶ್ರೀಮಠದ ಪೂಜ್ಯರು ಬರೆಸಿದರೆ ನಾಡಿನುದ್ದಕ್ಕೂ ಎಲ್ಲರೂ ಅದನ್ನ ಕೇಳಿ ಪಾವನರಾಗುತ್ತಾರೆ ಎಂದರು.
ಸಾಹಿತಿ ಲ.ರು. ಗೊಳಸಂಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದ ವಿಶ್ವಗುರು ಬಸವೇಶ್ವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಶಿವಲಿಂಗೇಶ್ವರ ಶಿವಯೋಗಿಗಳು ಬಸವೇಶ್ವರರ ತತ್ವ ಆದರ್ಶಗಳನ್ನ ಜಾರಿಗೆ ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದರು. ಅಗಾಧ ಶಕ್ತಿಯನ್ನು ಹೊಂದಿರುವ ಶಿವಯೋಗಿಗಳು ಸಾಕಷ್ಟು ಪವಾಡಗಳನ್ನು ಮಾಡಿದ್ದರು. ಕಾಯಕ ದಾಸೋಹಕ್ಕೆ ಮಹತ್ವ ನೀಡಿದ ಶಿವಯೋಗಿಗಳು ಬಾಗೇವಾಡಿಯ ಭಾಗ್ಯವಾಗಿದ್ದರು ಎಂದರು.
ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ದಾನಗಳಲ್ಲಿ ಶ್ರೇಷ್ಠ ದಾನ ರಕ್ತ ದಾನ ಶಿವಯೋಗಿಗಳ ಪುಣ್ಯರಾಧಾನೆ ನಿಮಿತ್ಯ ಸಾಕಷ್ಟು ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗುತ್ತಿರುವ ಕಾರ್ಯ ಶ್ಲಾಘನೀಯ. ಸಮಾಜಕ್ಕಾಗಿ ಶ್ರಮಿಸಿದವರಿಗೆ ಸಾವಿಲ್ಲ. ಸಮಾಜಕ್ಕಾಗಿ ದುಡಿದವರು ಅಜರಾಮರವಾಗುತ್ತಾರೆ ಎನ್ನುವುದಕ್ಕೆ ಶಿವಲಿಂಗೇಶ್ವರ ಶ್ರೀಗಳು ಸಾಕ್ಷಿಯಾಗಿದ್ದಾರೆ ಎಂದರು.
ಶಿಕ್ಷಕ ಎಚ್.ಬಿ.ಬಾರಿಕಾಯಿ ಉಪನ್ಯಾಸ ನೀಡಿದರು. ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸಿದ್ದರು. ಮುಖಂಡರಾದ ಶಿವನಗೌಡ ಬಿರಾದಾರ, ಶಿವಾನಂದ ಈರಕಾರ ಮುತ್ಯಾ, ಡಾ, ಸುನೀಲ ಚವ್ಹಾಣ, ಬಸವರಾಜ ಹಾರಿವಾಳ, ಬಸಣ್ಣ ದೇಸಾಯಿ, ಮುರಗೆಪ್ಪ ಚಿಂಚೊಳಿ, ರವಿ ಚಿಕ್ಕೊಂಡ ಇತರರು ಇದ್ದರು. ಮಹಾಂತೇಶ ಆದಿಗೊಂಡ ಸ್ವಾಗತಿಸಿದರು. ಕೊಟ್ರೇಶ ಹೆಗಡ್ಯಾಳ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಶಿವಲಿಂಗೇಶ್ವರ ಶಿವಯೋಗಿಗಳ ಪುಣ್ಯಾದಾಧನೆಯಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಶ್ರೀಮಠ ಪೂಜ್ಯರು ಸೇರಿದಂತೆ ವಿವಿಧ ಜನರು ರಕ್ತದಾನ ಮಾಡಿದರು.
Subscribe to Updates
Get the latest creative news from FooBar about art, design and business.
ಲಿಂ.ಶಿವಲಿಂಗೇಶ್ವರರು ಬಸವನಾಡಿನಲ್ಲಿ ಸದಾ ಪ್ರಾತ:ಸ್ಮರಣಿಯರು
Related Posts
Add A Comment

