ಚಿಮ್ಮಡ: ಮಂಗಳವಾರ ರಾತ್ರಿ ಸುರಿದ ಜೋರು ಮಳೆಯಿಂದ ಈ ಭಾಗದ ವಾತಾವರಣ ತಂಪೆರೆದಂತಾಗಿದ್ದು ರೈತರು ಹರ್ಷವ್ಯಕ್ತಪಡಿಸಿದ್ದಾರೆ. ಆದರೆ ಗ್ರಾಮದಲ್ಲಿ ನಡೆಯುತ್ತಿರುವ ಮೂರು ಮುಖದವ್ವದೇವಿ ಜಾತ್ರೆಗೆ ಆಗಮಿಸಿದ ಭಕ್ತರು ಹೈರಾಣಾಗಿದ್ದಾರೆ.
ರಾತ್ರಿ ೮.೦೦ಘಂ. ಯಿಂದ ಸುಮಾರು ೩ ಘಂ.ಗಳ ಕಾಲ ಸುರಿದ ಮಳೆಯಿಂದಾಗಿ ಗ್ರಾಮದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಬ್ರಹತ್ ಜಾತ್ರೆ ಅಸ್ತವ್ಯಸಥಗೊಂಡಿದೆ, ಎತ್ತಿನಬಂಡಿ, ಟ್ರ್ಯಾಕ್ಟರ್ ಮುಂತಾದ ವಾಹನಗಳಲ್ಲಿ ಅಡುಗೆ ಸಾಮಗ್ರಿಗಳೊಂದಿಗೆ ಆಗಮಿಸಿದ ಸಾವಿರಾರು ಜನ ಭಕ್ತಾಧಿಗಳು ಈ ಅಕಾಲಿಕ ಮಳೆಯಿಂದ ಪರಿತಪಿಸುವಂತಾಯಿತು. ಅವರ ವಸತಿಗಾಗಿ ಹಾಕಿದ ಶಾಮಿಯಾನ ಕಿತ್ತು ಹೋದ ಪರಿಣಾಮ ಭಕ್ತರು ಶಾಲೆ, ಮಠ, ಮಂದಿರಗಳಲ್ಲಿ ಆಶ್ರಯ ಪಡೆದರು, ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸೊಳ್ಳೆಗಳ ಕಾಟದಿಂದಾಗಿ ಗ್ರಾಮಸ್ಥರು ಜಾಗರಣೆ ಮಾಡುವಂತಾಯಿತು,
ಆದರೆ ವ್ಯಾಪಾರಿಗಳು ನಮಗೆ ಹಾನಿಯಾದರೂ ಪರವಾಗಿಲ್ಲ ಮಳೆಯಾಗಿದ್ದು ತುಂಬಾ ಖುಷಿಯಾಗಿದೆ, ಮೂರುಮಕದವ್ವ ಈ ಮಳೆ ಮೂಲಕ ನಮಗೆಲ್ಲ ಆಶೀರ್ವದಿಸಿದ್ದಾರೆಂದು ವ್ಯಾಪಾರಿ ಮಂಜುನಾಥ ತೊರವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಮಳೆಯಿಲ್ಲದೇ ಹಲವಾರು ಕೊಳವೆ ಬಾವಿಗಳು ಕೈಕೊಟ್ಟಿದ್ದರ ಪರಿಣಾಮ ಈ ಭಾಗದಲ್ಲಿ ಹಲವೆಡೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿತ್ತು ರಾತ್ರಿ ಸುರಿದ ಮಳೆಯಿಂದ ವಾತಾವರಣ ತಂಪಾಗಿದ್ದು ಅಂತರ್ಜಲ ಮಟ್ಟ ಹೆಚ್ಚುವ ಸಾಧ್ಯತೆಯಿದೆಯಂದು ಹಲವಾರು ರೈತರು ಅಭಿಪ್ರಾಯ ಪಡುತ್ತಾರೆ.
ಒಟ್ಟಾರೆ ಈ ಭಾಗದಲ್ಲಿ ಸುರಿದ ಕೃತಿಕಾ ಮಳೆಗೆ ಸಾರ್ವಜನಿಕರು ರೈತರು ಖುಷಿಯಾಗಿದ್ದು ತಮ್ಮ ಬಿತ್ತನೆ ಕಾರ್ಯಕ್ಕೆ ಭುಮಿಯನ್ನು ಹದಗೊಳಿಸಿ ಮಳೆಗಾಗಿ ಕಾಯುತಿದ್ದ ರೈತರಿಗೆ ಈ ಮಳೆ ವರದಾನವಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

