Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೆಂಭಾವಿ: ಪಂಚಮಸಾಲಿ ಸಮಾಜದನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಹೊನಪ್ಪಗೌಡ ಮೇಟಿಗೌಡ ಇವರನ್ನು ಮುದನೂರಿನ ಹಿರಿಯ ಮುಖಂಡರು ಸೇರಿ ಸನ್ಮಾನಿಸಿದರು.ಈ ವೇಳೆ ನೂತನ ಉಪಾಧ್ಯಕ್ಷ ಹೊನ್ನಪ್ಪಗೌಡ ಮೇಟಿಗೌಡ ಮಾತನಾಡಿ, ಪಂಚಮಸಾಲಿ ಸಮಾಜದ ಏಳಿಗೆಗಾಗಿ ನಾವು ಎಲ್ಲರೂ ಒಂದಾಗಬೇಕಿದೆ. ಪಂಚಮಸಾಲಿ ಸಮಾಜಕ್ಕೆ ಅನ್ಯಾಯವಾದಾಗ ನಾವು ಹೋರಾಟ ಮಾಡಲು ಸದಾ ಸಿದ್ದರಿದ್ದೇವೆ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡುವರೆಗೂ ನಾವು ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗುತ್ತದೆ ಎಂದರು.ಈ ಸಂಧರ್ಭದಲ್ಲಿ ಶಿವರೆಡ್ಡಿ ಯಡಹಳ್ಳಿ, ಸಿದ್ದನಗೌಡ ಗೌಡಪ್ಪಗೌಡ, ನಾಗರೆಡ್ಡಿ ಬುಸ್ಸಾ,ಈರಣ್ಣ ಚೌದ್ರಿ, ಪ್ರಭು ಬಳಿ, ಎಸ್. ಐ. ತನಶೆಟ್ಟಿ, ಬಸವರಾಜ್ ಸಜ್ಜನ್, ಗೌಸ್ ಪಟೇಲ್, ಡಾ.ಭಾಷಾಪಟೇಲ್, ಸೈಯದ್ ತಾಳಿಕೋಟಿ, ಹಾಗೂ ಇತರರು ಇದ್ದರು.
ಕೆಂಭಾವಿ: ಪಟ್ಟಣದಲ್ಲಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಶನಿವಾರ ವಿವಿಧ ಇಲಾಖೆಗಳ ನೂತನ ಕಟ್ಟಡ ಉದ್ಘಾಟಿಸಿ, ಲೋಕಾರ್ಪಣೆ ಮಾಡಿದರು.ಇಲ್ಲಿಯ ವಾರ್ಡ್ ನಂ 15 ರಲ್ಲಿ 66 ಲಕ್ಷ ರೂ. ವೆಚ್ಚದ ರೈತ ಸಂಪರ್ಕ ಕೇಂದ್ರ, 18 ಲಕ್ಷ ರೂ ವೆಚ್ಚದಲ್ಲಿನ ನಾಡ ಕಚೇರಿ,1.23 ಕೋಟಿ ರೂ. ಮೊತ್ತದ ಶತಮಾನ ಪೂರೈಸಿದ ಪೊಲೀಸ್ ಠಾಣೆ ಕಟ್ಟಡ ಹಾಗೂ ಅಂಗನವಾಡಿ ಕೇಂದ್ರ, ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಯಾತ್ರಿ ನಿವಾಸ ಮತ್ತು ನಮ್ಮ ಕ್ಲಿನಿಕ್ ಕೇಂದ್ರ ಸೇರಿ ಒಟ್ಟಾರೆಯಾಗಿ 3 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಮ್ಮೆಟಿಗುಡ್ಡದಲ್ಲಿ ರೂ.3.50 ಕೋಟಿ ವೆಚ್ಚದ ಸಮದಾಯ ಭವನ & ರೂ.25 ಲಕ್ಷ ವೆಚ್ಚದ ಯಾತ್ರಿ ನಿವಾಸ ಉದ್ಘಾಟನೆ | ಅಮೋಘಸಿದ್ಧ ಅವಧೂತ ಅಭಿಮತ ವಿಜಯಪುರ: ಶ್ರೀ ಅಮೋಘಸಿದ್ಧರ ಕೃಪೆಯಿಂದ ಮತ್ತಷ್ಟು ಒಳ್ಳೆಯ ದಿನಗಳು ಬರಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ತಿಕೋಟಾ ತಾಲೂಕಿನ ಮುಮ್ಮೆಟಿಗುಡ್ಡ ಶ್ರೀ ಅಮೋಘಸಿದ್ಧ ದೇವಸ್ಥಾನದ ಬಳಿ ರೂ.3.50 ಕೋ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಮದಾಯ ಭವನ ಮತ್ತು ರೂ. 25 ಲಕ್ಷ ವೆಚ್ಚದಲ್ಲಿ ಕಟ್ಟಲಾಗಿರುವ ಯಾತ್ರಿ ನಿವಾಸವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಸಮುದಾಯ ಭವನ ನಿರ್ಮಾಣದಿಂದ ಈ ಭಾಗದ ಬಡವರು ಮತ್ತು ಮಧ್ಯಮ ವರ್ಗದ ಜನರ ಶುಭ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ. ಅಲ್ಲದೇ, ಯಾತ್ರಿ ನಿವಾಸ ನಿರ್ಮಾಣದಿಂದ ಭಕ್ತಾದಿಗಳಿಗೆ ಉಳಿದುಕೊಳ್ಳಲು ನೆರವಾಗಲಿದೆ. ಸಮುದಾಯ ಭವನ ನಿರ್ವಹಣೆಗೆ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಮುಮ್ಮೆಟಿಗುಡ್ಡ ಸಂಪರ್ಕಿಸುವ ರಸ್ತೆಗಳ ಅಗಲೀಕರಣಕ್ಕೆ ಈಗಾಗಲೇ ಟೆಂಡರ್ ಮಾಡಲಾಗಿದೆ.…
ವಿಜಯಪುರ: ಬಿಜಾಪುರ ಲಿಂಗಾಯತ ಡೆವಲೆಪಮೆಂಟ್ ಸೌಹಾರ್ದ ಸಹಕಾರಿ ಸಂಘ ನಿ. ಗ್ರಾಹಕರ ವಿಶ್ವಾಸ ಗಳಿಸಿ, ಇದೀಗ ಇಂಡಿ ಮತ್ತು ತಾಳಿಕೋಟೆಗಳಲ್ಲಿ ದಿ.4 ಸೋಮವಾರರಂದು ನೂತನ ಶಾಖೆಗಳು ಆರಂಭವಾಗಲಿವೆ ಎಂದು ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಸುನೀಗೌಡ ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಬಿ.ಎಲ್.ಡಿ ಸೌಹಾರ್ದವು ಕಳೆದ ಒಂದುವರೆ ವರ್ಷದಲ್ಲಿ ರೂ. 225 ಕೋಟಿಗೂ ಅಧಿಕ ವಹಿವಾಟು ನಡೆಸಿದೆ. ಆಕರ್ಷಕ ಬಡ್ಡಿ ದರಗಳೊಂದಿಗೆ ರೂ. 100 ಕೋಟಿಗೂ ಅಧಿಕ ಸಾಲಗಳನ್ನು ನೀಡಲಾಗಿದೆ. ಹಿರಿಯ ನಾಗರಿಕರಿಗೆ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ ಹಾಗೂ ವಿಧವೆಯರಿಗೆ 0.5% ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಅಲ್ಲದೇ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಸೇವೆ ಒದಗಿಸುವ ಯೋಜನೆ ರೂಪಿಸಲಾಗಿದೆ ಮತ್ತು ರಾಷ್ಟ್ರೀಕೃತ ಸೇವೆಗಳಾದ ಆರ್.ಟಿ.ಜಿ.ಎಸ್ / ಎನ್.ಇ.ಎಫ್.ಟಿ ಸೌಲಭ್ಯಗಳನ್ನು ಆರಂಭಿಸಲಾಗಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಪಾಟೀಲ ಹೊಂಡಾ ಶೋರೂಂ ಕಟ್ಟಡ, ವಿಜಯಪುರ ರಸ್ತೆ, ಇಂಡಿಯಲ್ಲಿ ಬೆ.10ಗಂ. ಆರಂಭವಾಗಲಿರುವ ಶಾಖೆಯಲ್ಲಿ ಬಂಥನಾಳ ಸಂಸ್ಥಾನ ಮಠದ ಮ.ನಿ.ಪ್ರ ಡಾ.ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಸಾನಿಧ್ಯ…
ಆಲಮೇಲದ ವಿಶ್ವೇಶ್ವರ ಪ್ರಾಥಮಿಕ ಶಾಲೆಯ ಸ್ನೇಹ ಸಮ್ಮೇಳನ & ಡಿಜಿಟಲ್ ಬೋರ್ಡಗಳ ಲೋಕಾರ್ಪಣೆ ಆಲಮೇಲ: ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಪೂರ್ವ ಪ್ರಾಥಮಿಕ ಹಾಗೂ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 34ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಡಿಜಿಟಲ್ ಬೋರ್ಡಗಳ ಲೋಕಾರ್ಪಣೆ ಸಮಾರಂಭ ವಿಜ್ರಂಭಣೆಯಿಂದ ಜರುಗಿತು.ಸಮಾರಂಭವನ್ನು ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ ಸೀಜನ್ ೧೯ರ ಫೈನಲಿಸ್ಟ ಕು.ರೇವಣಸಿದ್ದ ಫುಲಾರಿ ಉದ್ಘಾಟಿಸಿದರು .ಕಾರ್ಯಕ್ರಮವನ್ನು ದಾನಯ್ಯ ಕವಟಗಿಮಠ ೬೫ ಸೆಟ್, ನೆಟ್,ಟಿ.ಇ.ಟಿ ,ಪರೀಕ್ಷೆಗಳನ್ನು ಉತ್ತೀರ್ಣ ಮಾಡಿ ಇಂಗ್ಲೆಂಡ್ ಹಾಗೂ ಭಾರತ ದೇಶಗಳ ವಿಶ್ವದಾಖಲೆ ಮಾಡಿರುವ ಅಕ್ಕಲಕೋಟ ನ ಕೆ.ಎಲ್.ಇ ಸೊಸೈಟಿನ ಪ್ರಾಧ್ಯಾಪಕರು ಜ್ಯೋತಿ ಬೆಳಗಿಸಿದರು.ಬಳಿಕ ಮಾತನಾಡಿದ ಅವರು, ಇಂದಿನ ಪಾಲಕರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಅಭಿರುಚಿಗೆ ತಕ್ಕಂತೆ ಅವರ ಇಷ್ಟವಾದ ಕಲಿಕೆ ಪ್ರೋತ್ಸಾಹ ನೀಡಬೇಕು. ಇಂತಹ ಗ್ರಾಮೀಣ ಮಟ್ಟದ ಬಡ ಮಕ್ಕಳಿಗೆ ಈ ಶಾಲಾ ಆಡಳಿತ ಮಂಡಳಿಯವರು ಅಂದಾಜು ೬ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಡಿಜಿಟಲ್ ಬೋರ್ಡಗಳನ್ನು ಅಳವಡಿಸಿ…
ವಿಜಯಪುರ: ನಗರದ ಡಾ ಡಿ.ಎನ್. ಧರಿ ಇವರಿಗೆ ಭಾರತ ಯುವ ವೇದಿಕೆ ಸಂಸ್ಥೆಯಿಂದ ವೈದ್ಯಕೀಯ ಸೇವೆಗಾಗಿ ಪ್ರಸಕ್ತ ಸಾಲಿಗೆ “ಜಿಲ್ಲಾ ಸದ್ಭೂಷಣ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುನೀಲ್ ಜೈನಾಪೂರ ತಿಳಿಸಿದ್ದಾರೆ.ಮೂಲತಃ ಬಸವ ನಾಡಿನ ಎಂಭತನಾಳ ಗ್ರಾಮದ ರೈತಾಪಿ ಕುಟುಂಬದ ಡಾ.ಧರಿ ಅವರು 1994 ರಿಂದ ಇಲ್ಲಿಯವರೆಗೆ 30 ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅವರು ವೃತ್ತಿ ಜೀವನ ಆರಂಭಿಸಿ 25 ವರ್ಷಗಳಿಂದ ವಿಜಯಪುರ ಮಹಾನಗರದ ಆದರ್ಶ ನಗರ ಬಡಾವಣೆಯಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಅವರ ದವಾಖಾನೆಯ ಸರಳತೆ ಸೌಜನ್ಯತೆ ಅಂಗವಿಕಲರಿಗೆ ಅಂದರಿಗೆ ಅನಾಥರಿಗೆ ಉಚಿತವಾಗಿ ಸೇವೆ ಮಾಡುತ್ತಿರುವುದು ಅವರ ಗುರುಗಳು ಅವರಿಗೆ ನೀಡಿದ ಮಾರ್ಗದರ್ಶನ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ವಿಜಯಪುರದ ಗಾನ ಬನದ ಸಂಗೀತ ಶಾಲೆಯ ಎಲ್ಲ ಮಕ್ಕಳಿಗೆ ಇಂದಿನವರೆಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ಉಪಚಾರ ಮಾಡುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪರಮ ಭಕ್ತರಾದ ಇವರು…
Udayarashmi kannada daily newspaper Udayarashmi kannada daily newspaper
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟವನ್ನು ‘ಬಾಂಬ್ ಸ್ಫೋಟ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ.ಕೆಫೆಯೊಳಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಬ್ಯಾಗ್ ಇಟ್ಟು ಹೋಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.‘ಇದು ಭಾರೀ ಸ್ಫೋಟಕವಲ್ಲ. ಆದರೆ ಅದನ್ನು ಸುಧಾರಿತಗೊಳಿಸಲಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕೆಫೆಯೊಳಗೆ ಬ್ಯಾಗ್ ಇಟ್ಟ ವ್ಯಕ್ತಿ ಕ್ಯಾಶ್ ಕೌಂಟರ್‌ನಿಂದ ಟೋಕನ್ ತೆಗೆದುಕೊಂಡಿದ್ದಾನೆ. ಕ್ಯಾಷಿಯರ್ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.ಗಾಯಗೊಂಡವರಲ್ಲಿ ಮೂವರು ಸಿಬ್ಬಂದಿ ಮತ್ತು ಒಬ್ಬ ಗ್ರಾಹಕ ಸೇರಿದ್ದಾರೆ; ಗಾಯಗಳು ಗಂಭೀರವಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
9 ಮಂದಿಗೆ ಗಂಭೀರ ಗಾಯ | ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಬ್ಯಾಗ್‌ನಲ್ಲಿ ಇರಿಸಿದ್ದ ನಿಗೂಢ ವಸ್ತು ಸ್ಫೋಟ ಬೆಂಗಳೂರು: ಇಲ್ಲಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಿಗೂಢ ಸ್ಫೋಟ ಸಂಭವಿಸಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಎಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ದಿಢೀರ್ ಸ್ಫೋಟ ಸಂಭವಿಸಿದ ಪರಿಣಾಮ ಕೆಫೆಯಲ್ಲಿ ಕೆಲಕಾಲ ಗೊಂದಲ ಉಂಟಾದ ಪರಿಣಾಮ ಗ್ರಾಹಕರು ಪ್ರಾಣ ಉಳಿಸಿಕೊಳ್ಳಲು ಓಡಿದರು. ವರದಿಗಳ ಪ್ರಕಾರ, ಕೆಫೆಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಬ್ಯಾಗ್‌ನಲ್ಲಿ ಇರಿಸಿದ್ದ ನಿಗೂಢ ವಸ್ತು ಸ್ಫೋಟಗೊಂಡಿದೆ.ಘಟನೆಯಲ್ಲಿ 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿದೆ. ಕೆಫೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಒಂಬತ್ತು ಜನ ಗಾಯಾಳುಗಳಲ್ಲಿ ಒಬ್ಬರಿಗೆ ಶೇಕಡಾ 40ರಷ್ಟು ಸುಟ್ಟ ಗಾಯಗಳಾಗಿದ್ದು,…
ಇಂಡಿ: ವಿದ್ಯಾರ್ಥಿಗಳು ವಿಜ್ಞಾನದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ, ಮೂಲ ವಿಜ್ಞಾನಕ್ಕೆ ಆಧ್ಯತೆ ನೀಡಬೇಕು. ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ವೈಜ್ಞಾನಿಕ ಹಾಗೂ ಸಂಶೋಧನ ಮನೋಭಾವ ಬೆಳೆಯಲಿದೆ ಎಂದು ವಿಜ್ಞಾನ ಶಿಕ್ಷಕಿ ನಂದಾ ಎಸ್.ಚವ್ಹಾಣ ಹೇಳಿದರು.ಅವರು ತಾಲೂಕಿನ ಮಿರಗಿ ಗ್ರಾಮದ ಶ್ರೀ ಯಲ್ಲಾಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಜ್ಞಾನವು ಜ್ಞಾನದ ವಿಸ್ತಾರವನ್ನು ಹೆಚ್ಚಿಸುತ್ತದೆ. ನಮ್ಮಲ್ಲಿರುವ ಅಂಧಕಾರವನ್ನು ತೊಲಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.ವಿಜ್ಞಾನಿಗಳು ಸತತ ಪರಿಶ್ರಮ ತಾಳ್ಮೆಗಳಿಂದ ಸಂಶೋಧನಗಳನ್ನು ಕೈಗೊಂಡು ಸಮಾಜಕ್ಕೆ ಉಪಯುಕ್ತ ಸೇವೆಗಳನ್ನು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳು ವಿಜ್ಞಾನಿಗಳ ಜೀವನಶೈಲಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಸರ್ ಸಿವಿ ರಾಮನ್ ಅವರ ಸಾಧನೆಗಳನ್ನು ಮಾತ್ರವಲ್ಲದೆ ಇತರ ವಿಜ್ಞಾನಿಗಳನ್ನೂ ಗೌರವಿಸುವ ದೃಷ್ಟಿಯಿಂದ, ವಿಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಗಳನ್ನು ಮೆಲಕು ಹಾಕಲು ವಿಜ್ಞಾನ ದಿನವನ್ನು ಶಾಲೆ, ಕಾಲೇಜುಗಳು, ವಿಶ್ವವಿದ್ಯಾಲಯಗಳ ಇತರೆ ಸಂಸ್ಥೆಗಳು ಫೆ.೨೮ ರಂದು ಆಚರಿಸಲಾಗುತ್ತದೆ…
