Author: editor.udayarashmi@gmail.com

ಸಿಂದಗಿ: ನೀರು ಭೂಮಿಯ ಮೇಲಿನ ಪ್ರಮುಖ ಮತ್ತು ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದೆ ಎಂದು ತಾಲೂಕು ಯೋಜನಾಧಿಕಾರಿ ಪ್ರಸನ್ನ ಹೇಳಿದರು.ತಾಲೂಕಿನ ಗಣಿಹಾರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀರು ಎಲ್ಲ ಜೀವನವನ್ನು ಉಳಿಸುತ್ತದೆ. ನೀರಿಲ್ಲದೆ ಜೀವನವಿಲ್ಲ. ನೀರು ಮಾನವನಿಗೆ ಮಾತ್ರವಲ್ಲದೇ ಇಡೀ ಪರಿಸರ ವ್ಯವಸ್ಥೆಗೆ ಮುಖ್ಯವಾಗಿದೆ. ಹಾಗಾಗಿ ಯಾವುದೇ ಜೀವಿಗಳ ಉಳಿವಿಗಾಗಿ ನಿರು ಎರಡನೆಯ ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಲಾ ತಂಡದವರಿಂದ ನೀರು ಉಳಿಸಿ ಅಭಿಯಾನ, ಪರಿಸರ ಸಂರಕ್ಷಣೆ ಬಗ್ಗೆ, ಸ್ವಚ್ಛತೆ, ಶೌಚಾಲಯ ಬಳಕೆಯ ಬಗ್ಗೆ ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸಿದರು.ಈ ವೇಳೆ ದಸ್ತಾಗಿರಸಾಬ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಾವ್ಯ, ವಲಯದ ಮೇಲ್ವಿಚಾರಕಿ ರೇಣುಕಾ, ಹನುಮಂತಪ್ಪ, ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಒಕ್ಕೂಟ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.

Read More

ವಿದ್ಯುತ್ ಅಪಘಾತಕ್ಕೆ ತುತ್ತಾದ ದಿ.ಶಾಂತಪ್ಪ ಗಡಗಿಮನಿ ಕುಟುಂಬಕ್ಕೆ ಸಾಂತ್ವನ ಸಿಂದಗಿ: ಶಾಂತಪ್ಪ ಗಡಗಿಮನಿ ಅವರು ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿದ್ದು ದುರಂತ. ಅವರ ಕುಟುಂಬಸ್ಥರ ಜೊತೆ ಸದಾ ಸರ್ಕಾರವಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತಿದ್ದ ತಾಲೂಕಿನ ಖೈನೂರ ಗ್ರಾಮದ ಶಾಂತಪ್ಪ ವಿಶ್ವನಾಥ ಗಡಗಿಮನಿ ಎಂಬುವವರು ಕರ್ತವ್ಯ ವೇಳೆಯಲ್ಲಿ ಮಾರಣಾಂತಿಕ ವಿದ್ಯುತ್ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಅವರ ಕುಟುಂಬಸ್ಥರಿಗೆ ಶಾಸಕ ಅಶೋಕ ಮನಗೂಳಿ ಅವರು ಸರ್ಕಾರದಿಂದ ನೀಡಿರುವ ರೂ.೫ ಲಕ್ಷ ಪರಿಹಾರದ ಚೆಕ್ ವಿತರಿಸಿ ಸಾಂತ್ವಾನ ಹೇಳಿ ಮಾತನಾಡಿದ ಅವರು, ಕುಟುಂಬಸ್ಥರು ಭಯ ಪಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರಕ್ಕೆ ಈ ವರದಿಯನ್ನು ನೀಡಿದ ತಕ್ಷಣವೇ ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಿದೆ ಎಂದರು.ಈ ವೇಳೆ ಹೆಸ್ಕಾಂ ಅಧಿಕಾರಿ ಚಂದ್ರಕಾಂತ ನಾಯಕ, ಕಾಂಗ್ರೆಸ್ ಬ್ಲಾಕ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಶ್ರೀಕಾಂತ ಸೋಮಜ್ಯಾಳ, ಹೊನ್ನಪ್ಪಗೌಡ ಬಿರಾದಾರ, ಮೃತರ ತಂದೆ ವಿಶ್ವನಾಥ ಗಡಗಿಮನಿ,…

Read More

ಸಿಂದಗಿ: ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಒಂದು ಗಿಡವನ್ನಾದರು ನೆಡಬೇಕು. ಪರಿಸರ ನಮ್ಮನ್ನು ಬಿಟ್ಟು ದೂರ ಹೊಗುತ್ತಿದೆ ಅದನ್ನು ಮತ್ತೆ ನಮ್ಮ ಬಳಿ ತರುವ ಕೆಲಸ ನಾವೆಲ್ಲರೂ ಕಡ್ಡಾಯವಾಗಿ ಮಾಡಲೇಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಿಕಾ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ ಹೇಳಿದರು.ಪಟ್ಟಣದ ವಿದ್ಯಾನಗರದ ಶ್ರೀ ಚೆನ್ನವೀರ ಸ್ವಾಮೀಜಿ ಉದ್ಯಾನವನದಲ್ಲಿ ಅವ್ವಾ ಫೌಂಡೇಶನ್ ಹಮ್ಮಿಕೊಂಡಿರುವ ವಿಶ್ವ ಪರಿಸರ ದಿನಾಚಾರಣೆ ನಿಮಿತ್ಯ ಸಸಿ ನೆಟ್ಟು ಮಾತನಾಡಿದ ಅವರು, ಇಂದಿನ ಜಾಗತಿಕ ಮಟ್ಟದಲ್ಲಿ ಪರಿಸರ ನಲುಗಿ ಹೋಗುತ್ತಿದೆ. ಇದರಿಂದ ಜೀವ ಸಂಕುಲಕ್ಕೆ ಅತಿದೊಡ್ಡ ಪೆಟ್ಟು ಬಿಳುತ್ತಿದೆ. ನಾವೆಲ್ಲರೂ ಪ್ರಜ್ಞಾವಂತರು ಪರಿಸರವನ್ನು ಸಂರಕ್ಷಣೆ ಮಾಡದಿದ್ದಲ್ಲಿ ನಮ್ಮ ಬದುಕನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ ಎಚ್ಚರದಿಂದ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.ಈ ವೇಳೆ ಅವ್ವಾ ಫೌಂಡೇಶನ್‌ದ ಸಂಚಾಲಕ ಸಿದ್ದಲಿಂಗ ಕಿಣಗಿ ಮಾತನಾಡಿ, ಪರಿಸರ ನಮ್ಮನ್ನು ಸದಾರಕ್ಷಣೆ ಮಾಡುತ್ತದೆ. ಆದರೆ ಮಾನವರಾದ ನಾವೇಲ್ಲ ನಮ್ಮ ಸುಖದ ಬದುಕಿಗಾಗಿ ಪರಿಸರವನ್ನೇ ಹಾಳು ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಪ್ರತಿ ವರ್ಷ ಹತ್ತಾರು ಸಸಿಗಳನ್ನು ನೆಟ್ಟು…

Read More

ಸಿಂದಗಿ: ಗ್ಯಾಸ್ ಸಿಲಿಂಡರ್ ಗ್ರಾಹಕರು ಕಡ್ಡಾಯವಾಗಿ ಹಾಗೂ ಶೀಘ್ರದಲ್ಲಿ ತಮ್ಮ ಗ್ರಾಹಕರ ಸಂಖ್ಯೆಯ ಮೂಲಕ ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಗ್ಯಾಸ್ ವಿತರಕರ ನರ್ಸಿಂಗ್‌ಪ್ರಸಾದ ತಿವಾರಿ ಮನವಿ ಮಾಡಿದ್ದಾರೆ.ಕೆಲವು ತಿಂಗಳ ಹಿಂದೆ ಕೇಂದ್ರ ಸರಕಾರ ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆದೇಶ ಹೋರಡಿಸಿತ್ತು. ಆ ವೇಳೆ ಕೆಲವು ದಿನ ನೂಕು ನುಗ್ಗಲಾಗಿತ್ತು. ಅದಾದ ನಂತರ ಸದ್ಯಕ್ಕೆ ಇಕೆವೈಸಿ ಮಾಡಿಸುವವರ ಸಂಖ್ಯೆ ಕಡಿಮೆಯಾಗಿದೆ ಗ್ಯಾಸ್ ಸಿಲಿಂಡರ ಸಂಬಂಧಿತ ಸರಕಾರದ ಸೌಲಭ್ಯಕ್ಕಾಗಿ ಎಲ್ಲ ಗ್ರಾಹಕರು ಕಡ್ಡಾಯವಾಗಿ ತಿವಾರಿ ಪೆಟ್ರೋಲ್ ಬಂಕ ಹತ್ತಿರ ಗ್ಯಾಸ್ ವಿತರಣಾ ಆಫೀಸ್‌ಗೆ ಭೇಟಿ ನೀಡಿ ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೮೯೭೧೫೩೧೯೨೯ ಸಂಪರ್ಕಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.

Read More

ಸಿಂದಗಿ: ಪೊಲೀಸ್ ಇಲಾಖೆಯಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಸತತ ೩೬ ವರ್ಷಗಳ ಸುದೀರ್ಘ ಕಾಲದವರೆಗೆ ಕಾರ್ಯನಿರ್ವಹಿಸಿದ ಎಸ್.ಬಿಉಕ್ಕಲಿ ಅವರ ಸೇವೆ ಅನನ್ಯ ಎಂದು ಗ್ರಾಮದ ಹಿರಿಯ ಎನ್.ಎನ್.ಪಾಟೀಲ್ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಹೊರ ಠಾಣೆಯಲ್ಲಿ ಗ್ರಾಮಸ್ಥರ ಪರವಾಗಿ ಗುರುವಾರ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಬೀಳಗಿ, ವಿಜಯಪುರ, ಆಲಮೇಲ, ದೇವರ ಹಿಪ್ಪರಗಿ, ಮೋರಟಗಿ ಸೇರಿದಂತೆ ಅನೇಕ ಠಾಣೆಗಳಲ್ಲಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮೋರಟಗಿ ಗ್ರಾಮದಲ್ಲಿ ೮ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಮರೆಯುವಂತಿಲ್ಲ. ಸರ್ವ ಸಮುದಾಯದ ಜೊತೆಗೆ ಅನ್ಯೋನ್ಯ ಸಂಬAಧ ಹೊಂದಿದ್ದಾರೆ. ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳು ಬಂದಲ್ಲಿ ಖುದ್ದಾಗಿ ಪರಿಹರಿಸಿ ದುಷ್ಚಟಗಳಿಗೆ ಒಳಗಾದ ಯುವಕರಿಗೆ ತಿಳುವಳಿಕೆ ಹೇಳಿ ಸಂಸಾರಿಕ ಜೀವನದ ದಾರಿ ತೋರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಸಮಸ್ತ ಗ್ರಾಮಸ್ಥರ ಪರವಾಗಿ ಹಾರೈಸುತ್ತೇವೆ ಎಂದರು.ಬಳಿಕ ಸನ್ಮಾನ ಸ್ವೀಕರಿಸಿದ ನಿವೃತ್ತ ಎಎಸ್‌ಐ ಎಸ್.ಬಿ.ಉಕ್ಕಲಿ ಮಾತನಾಡಿ, ೩೬ ವರ್ಷದ ಸೇವೆಯಲ್ಲಿ ೮ ವರ್ಷಗಳ ಕಾಲ…

Read More

ತಿಕೋಟಾ: ತಾಲೂಕ ಮಟ್ಟದ ವಿಶ್ವ ಪರಿಸರ ದಿನಾಚರಣೆ ಅರಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅರಿಕೇರಿ ಇಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಗಸ್ತ್ಯ ವಿಜ್ಞಾನ ಕೇಂದ್ರ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ ವಿಶ್ವ ಪರಿಸರ ದಿನಾಚರಣೆ ಆಯೋಜಿಸಲಾಗಿತು.ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೊಲಮಟ್ಟಿ ನೀರಿಗೆ ನೈದಿಲೆ ಸಿಂಗಾರ ನಾಡಿಗೆ ಕಾಡು ಸಿಂಗಾರ ಎಂಬ ಮಾತಿನಂತೆ ಪ್ರಸ್ತುತ ನಾವು ನೀವೆಲ್ಲರೂ ಪ್ರಕೃತಿ ಕೂಸುಗಳಾಗಿ ಪ್ರಕೃತಿಯ ಪೋಷಣೆ ಮಾಡೋಣ. ಪರಿಸರ ಹಾಗೂ ವಾತಾವರಣ ಜೀವ ವೈವಿಧ್ಯದ ಕುರಿತು ಮಕ್ಕಳಿಗೆ ತಿಳಿಹೇಳಿ ಈ ಪರಿಸರವನ್ನ ರಕ್ಷಿಸುವ ಜವಾಬ್ದಾರಿ ಸರಕಾರ, ಸಮುದಾಯ, ಪಾಲಕರ, ಹಾಗೂ ಸ್ಥಳೀಯ ಸಂಸ್ಥೆಗಳ ಹಾಗೂ ಎನ್ಜಿಓ ಸಂಸ್ಥೆಗಳ ಜವಾಬ್ದಾರಿ ಇದೆ ಎಂದು ತಿಳಿಸಿದರು.ಹಿರಿಯ ಮುಖಂಡ ಪೀರ್ ಪಟೇಲ್ ಪಾಟೀಲ್ ಮಾತನಾಡಿ, ಈ ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ನಾವು ನೆಟ್ಟ ಪ್ರತಿಯೊಂದು ಗಿಡವನ್ನು ಒಂದು ವರ್ಷ ಎರಡು…

Read More

ದೇವರಹಿಪ್ಪರಗಿ: ಸಾಂಪ್ರದಾಯಿಕ ಬಾದ್ಮಿ ಅಮವಾಸ್ಯೆಯಂದು ಜರುಗುವ ಚೌಡೇಶ್ವರ ದೇವಿಯ ಜಾತ್ರೆ ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.ಪಟ್ಟಣದಲ್ಲಿ ಗುರುವಾರ ಚೌಡೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ಆರಂಭಗೊಂಡವು. ಹರಕೆ ಹೊತ್ತ ಮಹಿಳೆಯರು ಮುತೈದೆಯರಿಗೆ ಉಡಿ ತುಂಬಿ ತಮ್ಮ ಭಕ್ತಿ ಮೆರೆದರು. ನಂತರ ನೆರೆದ ಭಕ್ತಮಂಡಳಿಗೆ ಮಹಾಪ್ರಸಾದ ವಿತರಿಸಲಾಯಿತು. ನಂತರ ಸಾಯಂಕಾಲ ಅರ್ಚಕರು ದೇವಿಯ ಮುಖವಾಡ ಧರಿಸಿ ಮೇನ್ ಬಜಾರ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೋಲಾಟದಂತ ಕುಣಿತದ ಪ್ರದರ್ಶನದ ಮೂಲಕ ಡೊಳ್ಳುವಾದ್ಯದ ಮೇಳದೊಂದಿಗೆ ಮೆರವಣಿಗೆ ಹೊರಟರು. ನಂತರ ಸದಯ್ಯನಮಠದ ಗಂಗಾಸ್ಥಳ ತಲುಪಿ ಪುನಃ ಮರಳಿ ದೇವಸ್ಥಾನ ತಲುಪಿದರು. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಕೋಲಿ, ಕಬ್ಬಲಿಗ, ತಳವಾರ ಸಮುದಾಯದ ಭಕ್ತರು ದೇವಿಯ ಮುಂದೆ ಬಡಿಗೆ ಹಿಡಿದು, ಓಡುತ್ತಾ ನೋಡುಗರ ಗಮನ ಸೆಳೆದರು.ಪಟ್ಟಣ ಪಂಚಾಯಿತಿ ಸದಸ್ಯ ಮಂಗಳೇಶ ಕಡ್ಲೇವಾಡ, ಅಶೋಕ ಮಶಾನವರ, ಕಾಶೀನಾಥ ಸರೂರ, ಸಂಪತ್ ಜಮಾದಾರ, ಶಿವಾನಂದ ಕುಂಬಾರ, ಕಾಶೀನಾಥ ರಾಮಗೊಂಡ, ಬಸವರಾಜ ಕುಂಬಾರ, ಭೀಮರಾಯ ಕುಂಬಾರ, ಸಿದ್ದು ಕುಂಬಾರ, ಕಾಶೀನಾಥ ಕುಂಬಾರ, ಚಿದಾನಂದ…

Read More

ದೇವರಹಿಪ್ಪರಗಿ: ಪರಿಸರ ಉಳಿದರೆ, ಜೀವಜಗತ್ತು ಉಳಿಯುತ್ತದೆ, ಬೆಳೆಯುತ್ತದೆ ಎಂದು ಹೆಡಗಾಪೂರ ಶಿವಯೋಗೇಶ್ವರ ಸಂಸ್ಥಾನಮಠ ಹಾಗೂ ಯಾಳವಾರ ಗುರುಮಠದ ದಾರುಕಲಿಂಗ ಶ್ರೀಗಳು ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಬುಧವಾರ ಅನುದಿನ ಅನುಸರಿಸು ಸಂಸ್ಥೆಯಿಂದ ಊರಿಗೊಂದು ವನ, ಗ್ರಾಮಕ್ಕೊಂದು ಗ್ರಂಥಾಲಯ, ಹಳ್ಳಿಗೊಂದು ಆಧ್ಯಾತ್ಮಯೋಗಮಂದಿರ ಎಂಬ ಸಂಕಲ್ಪ ಯೋಜನೆಯಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು, ನೀರುಣಿಸಿ ಹಾಗೂ ಗ್ರಾಮಸ್ಥರಿಗೆ ವಿತರಿಸಿ ಮಾತನಾಡಿ, ನಾವೆಲ್ಲರೂ ಪರಿಸರವನ್ನು ಉಳಿಸಿ ಬೆಳೆಸೋಣ ಎಂದರು.ಅಧ್ಯಕ್ಷತೆ ವಹಿಸಿದ ಪ್ರಣವ ಸ್ವಾಮೀಜಿ ಮಾತನಾಡಿ, ಪರಿಸರದ ಉಳಿವು ಇಂದು ಅತೀ ಅವಶ್ಯವಾಗಿದ್ದು, ಪರಿಸರ ನಾಶದಿಂದಲೇ ಈಗ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಮನುಷ್ಯ ಸ್ವಾರ್ಥತೆಯಿಂದ ಪರಿಸರ ನಾಶ ಮಾಡಿದರೆ ಮುಂದೆ ನೀರಿನಂತೆ ಗಾಳಿಯನ್ನು ಕೂಡಾ ಹಣ ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಬರುವುದರಲ್ಲಿ ಸಂದೇಹವಿಲ್ಲ ಎಂದರು.ಇದೇ ಸಂದರ್ಭದಲ್ಲಿ ಶಿವಬಸವ ದೇವರ ಉಪಸ್ಥಿತಿಯಲ್ಲಿ ಸಂಸ್ಥೆಯ ಧ್ಯೇಯಗೀತೆಯನ್ನು ಬಿಡುಗಡೆ ಮಾಡಲಾಯಿತು.ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ನಾಡಗೌಡ್ರ, ಆರ್.ಎಸ್.ಪಾಟೀಲ, ಸೋಮನಗೌಡ ತಳೇವಾಡ, ಅರವಿಂದ ನಾಗರಾಳ, ಮಾಂತಯ್ಯ ಹಂಚಿನಾಳಮಠ, ಬಸನಗೌಡ ಮೂಲಿಮನಿ, ನೀಲಮ್ಮ…

Read More

ದೇವರಹಿಪ್ಪರಗಿ ರೈತ ಸಂಪರ್ಕ ಕೇಂದ್ರ | ಕೃಷಿ ಇಲಾಖೆಯಿಂದ ಚಾಲನೆ ದೇವರಹಿಪ್ಪರಗಿ: ರೈತರು ನೆಟೆರೋಗ ನಿರೋಧಕ ಹಾಗೂ ಅಧಿಕ ಇಳುವರಿ ತಳಿಗಳನ್ನು ಬಿತ್ತನೆ ಮಾಡಬೇಕು ಎಂದು ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಹೇಳಿದರು.ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಇತ್ತೀಚಿಗೆ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ೮೨ ಕ್ವಿಂಟಲ್ ತೊಗರಿ, ೩ ಕ್ವಿಂಟಲ್ ಹೆಸರು, ೨೦ ಕ್ವಿಂಟಲ್ ಮೆಕ್ಕೆಜೋಳ, ೩ ಕ್ವಿಂಟಲ್ ಸಜ್ಜೆ, ೨ ಕ್ವಿಂಟಲ್ ಸೂರ್ಯಕಾಂತಿಯನ್ನು ದಾಸ್ತಾನಿಕರಿಸಲಾಗಿದೆ. ಮುಖ್ಯವಾಗಿ ತೊಗರಿಯಲ್ಲಿ ನೀರಾವರಿ ಹಾಗೂ ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಜಮೀನುಗಳಿಗೆ ಹೊಸದಾಗಿ ಅಭಿವೃದ್ಧಿ ಪಡಿಸಿದ ನೆಟೆ ರೋಗ ನಿರೋಧಕ ತಳಿಗಳಾದ ಜಿಆರ್‌ಜಿ-೧೫೨, ಜಿಆರ್‌ಜಿ-೮೧೧ ಗಳನ್ನು ರೈತರು ಬಳಸಬೇಕು ಮತ್ತು ಬಿತ್ತನೆ ಬೀಜಗಳನ್ನು ಪಡೆಯಲು ಕಡ್ಡಾಯವಾಗಿ ಎಫ್‌ಐಡಿ ಮತ್ತು ಜಾತಿಪ್ರಮಾಣ ಪತ್ರ ದಾಖಲಾತಿಗಳನ್ನು ಸಲ್ಲಿಸಿ ಸಹಾಯಧನದಲ್ಲಿ ಪ್ರಮಾಣಿಕೃತ ಬಿತ್ತನೆ ಬೀಜಗಳನ್ನು ಪಡೆಯಬೇಕು ಎಂದು ತಿಳಿಸಿದರು.ಕೃಷಿ ಅಧಿಕಾರಿ ಎಚ್.ಕೆ.ಪಾಟೀಲ ಮಾತನಾಡಿ, ಸರ್ಕಾರದ ಆದೇಶದಂತೆ…

Read More

ವಿಜಯಪುರ: ಆರೋಗ್ಯ ಇಲಾಖೆ ಹಾಗೂ ಸರಕಾರಿ ನರ್ಸಿಂಗ್ ಮಹಾವಿದ್ಯಾಲಯ, ಸರಕಾರಿ ನರ್ಸಿಂಗ್ ಶಾಲೆ ವಿಜಯಪುರ ಸಹಯೋಗದಲ್ಲಿ ಜೂ.೫ ರಂದು ವಿಜಯಪುರದ ಪ್ಯಾರಾಮೆಡಿಕಲ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಸಿದೇಶ್ವರ ಸ್ವಾಮಿಗಳ ವನದಲ್ಲಿರುವ ೬೦೦ ಮತ್ತು ಬೃಂದಾವನದಲ್ಲಿರುವ ೭೦೦ ಸಸಿಗಳಿಗೆ ನೀರುಣಿಸುವ ಮೂಲಕ ಪರಿಸರ ಪ್ರಜ್ಞೆ ಮೆರೆಯಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ಶಿವಾನಂದ ಮಾಸ್ತಿಹೋಳಿ, ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ|| ಚಂದು ರಾಠೋಡ ಮತ್ತು ಡಾ|| ಎ. ಜಿ. ಬಿರಾದಾರ, ನರ್ಸಿಂಗ ಗ್ರೇಡ ೧ ರಾದ ಶ್ರೀಮತಿ ಸುಜಾತಾ ಭಜಂತ್ರಿ, ನರ್ಸಿಂಗ ಸೂಪರವೈಜರಾದ ಶ್ರೀಮತಿ ವಿಣಾ ಕುಲಕರ್ಣಿ, ಶ್ರೀಮತಿ ಭಾರತಿ ಸೂರಗಾವಿ ನರ್ಸಿಂಗ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಗೀತಾ ತರವಿ, ನರ್ಸಿಂಗ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಭಾರತಿ ಮೋಕಾಶಿ, ಎಲ್ಲ ಭೋದಕರು ಮತ್ತು ವಿದ್ಯಾರ್ಥಿಗಳು ಉಪಸ್ತಿತರಿದ್ದರು.

Read More