ದೇವರಹಿಪ್ಪರಗಿ: ಪರಿಸರ ಉಳಿದರೆ, ಜೀವಜಗತ್ತು ಉಳಿಯುತ್ತದೆ, ಬೆಳೆಯುತ್ತದೆ ಎಂದು ಹೆಡಗಾಪೂರ ಶಿವಯೋಗೇಶ್ವರ ಸಂಸ್ಥಾನಮಠ ಹಾಗೂ ಯಾಳವಾರ ಗುರುಮಠದ ದಾರುಕಲಿಂಗ ಶ್ರೀಗಳು ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಬುಧವಾರ ಅನುದಿನ ಅನುಸರಿಸು ಸಂಸ್ಥೆಯಿಂದ ಊರಿಗೊಂದು ವನ, ಗ್ರಾಮಕ್ಕೊಂದು ಗ್ರಂಥಾಲಯ, ಹಳ್ಳಿಗೊಂದು ಆಧ್ಯಾತ್ಮಯೋಗಮಂದಿರ ಎಂಬ ಸಂಕಲ್ಪ ಯೋಜನೆಯಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು, ನೀರುಣಿಸಿ ಹಾಗೂ ಗ್ರಾಮಸ್ಥರಿಗೆ ವಿತರಿಸಿ ಮಾತನಾಡಿ, ನಾವೆಲ್ಲರೂ ಪರಿಸರವನ್ನು ಉಳಿಸಿ ಬೆಳೆಸೋಣ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಣವ ಸ್ವಾಮೀಜಿ ಮಾತನಾಡಿ, ಪರಿಸರದ ಉಳಿವು ಇಂದು ಅತೀ ಅವಶ್ಯವಾಗಿದ್ದು, ಪರಿಸರ ನಾಶದಿಂದಲೇ ಈಗ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಮನುಷ್ಯ ಸ್ವಾರ್ಥತೆಯಿಂದ ಪರಿಸರ ನಾಶ ಮಾಡಿದರೆ ಮುಂದೆ ನೀರಿನಂತೆ ಗಾಳಿಯನ್ನು ಕೂಡಾ ಹಣ ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಬರುವುದರಲ್ಲಿ ಸಂದೇಹವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಶಿವಬಸವ ದೇವರ ಉಪಸ್ಥಿತಿಯಲ್ಲಿ ಸಂಸ್ಥೆಯ ಧ್ಯೇಯಗೀತೆಯನ್ನು ಬಿಡುಗಡೆ ಮಾಡಲಾಯಿತು.
ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ನಾಡಗೌಡ್ರ, ಆರ್.ಎಸ್.ಪಾಟೀಲ, ಸೋಮನಗೌಡ ತಳೇವಾಡ, ಅರವಿಂದ ನಾಗರಾಳ, ಮಾಂತಯ್ಯ ಹಂಚಿನಾಳಮಠ, ಬಸನಗೌಡ ಮೂಲಿಮನಿ, ನೀಲಮ್ಮ ದೊಡಮನಿ ಸೇರಿದಂತೆ ಮಕ್ಕಳು, ವಿದ್ಯಾರ್ಥಿಗಳು ಇದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

