ಸಿಂದಗಿ: ನೀರು ಭೂಮಿಯ ಮೇಲಿನ ಪ್ರಮುಖ ಮತ್ತು ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದೆ ಎಂದು ತಾಲೂಕು ಯೋಜನಾಧಿಕಾರಿ ಪ್ರಸನ್ನ ಹೇಳಿದರು.
ತಾಲೂಕಿನ ಗಣಿಹಾರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀರು ಎಲ್ಲ ಜೀವನವನ್ನು ಉಳಿಸುತ್ತದೆ. ನೀರಿಲ್ಲದೆ ಜೀವನವಿಲ್ಲ. ನೀರು ಮಾನವನಿಗೆ ಮಾತ್ರವಲ್ಲದೇ ಇಡೀ ಪರಿಸರ ವ್ಯವಸ್ಥೆಗೆ ಮುಖ್ಯವಾಗಿದೆ. ಹಾಗಾಗಿ ಯಾವುದೇ ಜೀವಿಗಳ ಉಳಿವಿಗಾಗಿ ನಿರು ಎರಡನೆಯ ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಲಾ ತಂಡದವರಿಂದ ನೀರು ಉಳಿಸಿ ಅಭಿಯಾನ, ಪರಿಸರ ಸಂರಕ್ಷಣೆ ಬಗ್ಗೆ, ಸ್ವಚ್ಛತೆ, ಶೌಚಾಲಯ ಬಳಕೆಯ ಬಗ್ಗೆ ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸಿದರು.
ಈ ವೇಳೆ ದಸ್ತಾಗಿರಸಾಬ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಾವ್ಯ, ವಲಯದ ಮೇಲ್ವಿಚಾರಕಿ ರೇಣುಕಾ, ಹನುಮಂತಪ್ಪ, ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಒಕ್ಕೂಟ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

