ಸಿಂದಗಿ: ಪೊಲೀಸ್ ಇಲಾಖೆಯಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಸತತ ೩೬ ವರ್ಷಗಳ ಸುದೀರ್ಘ ಕಾಲದವರೆಗೆ ಕಾರ್ಯನಿರ್ವಹಿಸಿದ ಎಸ್.ಬಿಉಕ್ಕಲಿ ಅವರ ಸೇವೆ ಅನನ್ಯ ಎಂದು ಗ್ರಾಮದ ಹಿರಿಯ ಎನ್.ಎನ್.ಪಾಟೀಲ್ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಹೊರ ಠಾಣೆಯಲ್ಲಿ ಗ್ರಾಮಸ್ಥರ ಪರವಾಗಿ ಗುರುವಾರ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಬೀಳಗಿ, ವಿಜಯಪುರ, ಆಲಮೇಲ, ದೇವರ ಹಿಪ್ಪರಗಿ, ಮೋರಟಗಿ ಸೇರಿದಂತೆ ಅನೇಕ ಠಾಣೆಗಳಲ್ಲಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮೋರಟಗಿ ಗ್ರಾಮದಲ್ಲಿ ೮ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಮರೆಯುವಂತಿಲ್ಲ. ಸರ್ವ ಸಮುದಾಯದ ಜೊತೆಗೆ ಅನ್ಯೋನ್ಯ ಸಂಬAಧ ಹೊಂದಿದ್ದಾರೆ. ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳು ಬಂದಲ್ಲಿ ಖುದ್ದಾಗಿ ಪರಿಹರಿಸಿ ದುಷ್ಚಟಗಳಿಗೆ ಒಳಗಾದ ಯುವಕರಿಗೆ ತಿಳುವಳಿಕೆ ಹೇಳಿ ಸಂಸಾರಿಕ ಜೀವನದ ದಾರಿ ತೋರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಸಮಸ್ತ ಗ್ರಾಮಸ್ಥರ ಪರವಾಗಿ ಹಾರೈಸುತ್ತೇವೆ ಎಂದರು.
ಬಳಿಕ ಸನ್ಮಾನ ಸ್ವೀಕರಿಸಿದ ನಿವೃತ್ತ ಎಎಸ್‌ಐ ಎಸ್.ಬಿ.ಉಕ್ಕಲಿ ಮಾತನಾಡಿ, ೩೬ ವರ್ಷದ ಸೇವೆಯಲ್ಲಿ ೮ ವರ್ಷಗಳ ಕಾಲ ಸೇವೆ ಸಲ್ಲಿಸಲು ಗ್ರಾಮದ ಹಿರಿಯರು ಯುವಕರು ಮತ್ತು ಮಾಧ್ಯಮ ಮಿತ್ರರು ಮತ್ತು ನನ್ನ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಯುವ ಪೊಲೀಸ್ ಪೇದೆಗಳು ನನಗೆ ನೀಡಿದ ಸಹಕಾರಕ್ಕೆ ನಾನು ಸದಾ ಚಿರಋಣಿ ಎಂದೆಂದೂ ಮರೆಯಲಾರೆ ಎಂದು ಬಾವುಕಾರಾದರು.
ಈ ವೇಳೆ ಶ್ರೀಶೈಲಗೌಡ ಪಾಟೀಲ್, ಎಂ.ಕೆ ಕಣ್ಣಿ, ಮಾಜಿ ಸೈನಿಕ ಎಂ.ಟಿ ಸಿಂಗೆ, ಪಿಕೆಪಿಎಸ್ ಅಧ್ಯಕ್ಷ ವೀರನಗೌಡ ಪಾಟೀಲ್, ಕಾಂಗ್ರೆಸ್ ಮುಖಂಡ ರವಿಕಾಂತ ನಡುವಿನಕೇರಿ, ಸಲೀಮ್ ಕಣ್ಣಿ, ಧರ್ಮರಾಜ ಯಂಟಮನ, ಬಿ.ಐ.ಕಣ್ಣಿ, ಅಬ್ಬಾಸಲಿ ಬಂಟನೂರ, ಹಣಮಂತ ಹೂಗಾರ, ಯೂಸುಫ್ ಮುಲ್ಲಾ, ನಿಂಗಣ್ಣ ವಾಲೀಕಾರ, ಸಿಬ್ಬಂದಿಗಳಾದ ನಿಂಗಣ್ಣ ಪೂಜಾರಿ, ಭೀಮು ಲಮಾಣಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

