ಸಿಂದಗಿ: ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಒಂದು ಗಿಡವನ್ನಾದರು ನೆಡಬೇಕು. ಪರಿಸರ ನಮ್ಮನ್ನು ಬಿಟ್ಟು ದೂರ ಹೊಗುತ್ತಿದೆ ಅದನ್ನು ಮತ್ತೆ ನಮ್ಮ ಬಳಿ ತರುವ ಕೆಲಸ ನಾವೆಲ್ಲರೂ ಕಡ್ಡಾಯವಾಗಿ ಮಾಡಲೇಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಿಕಾ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ ಹೇಳಿದರು.
ಪಟ್ಟಣದ ವಿದ್ಯಾನಗರದ ಶ್ರೀ ಚೆನ್ನವೀರ ಸ್ವಾಮೀಜಿ ಉದ್ಯಾನವನದಲ್ಲಿ ಅವ್ವಾ ಫೌಂಡೇಶನ್ ಹಮ್ಮಿಕೊಂಡಿರುವ ವಿಶ್ವ ಪರಿಸರ ದಿನಾಚಾರಣೆ ನಿಮಿತ್ಯ ಸಸಿ ನೆಟ್ಟು ಮಾತನಾಡಿದ ಅವರು, ಇಂದಿನ ಜಾಗತಿಕ ಮಟ್ಟದಲ್ಲಿ ಪರಿಸರ ನಲುಗಿ ಹೋಗುತ್ತಿದೆ. ಇದರಿಂದ ಜೀವ ಸಂಕುಲಕ್ಕೆ ಅತಿದೊಡ್ಡ ಪೆಟ್ಟು ಬಿಳುತ್ತಿದೆ. ನಾವೆಲ್ಲರೂ ಪ್ರಜ್ಞಾವಂತರು ಪರಿಸರವನ್ನು ಸಂರಕ್ಷಣೆ ಮಾಡದಿದ್ದಲ್ಲಿ ನಮ್ಮ ಬದುಕನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ ಎಚ್ಚರದಿಂದ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ವೇಳೆ ಅವ್ವಾ ಫೌಂಡೇಶನ್‌ದ ಸಂಚಾಲಕ ಸಿದ್ದಲಿಂಗ ಕಿಣಗಿ ಮಾತನಾಡಿ, ಪರಿಸರ ನಮ್ಮನ್ನು ಸದಾರಕ್ಷಣೆ ಮಾಡುತ್ತದೆ. ಆದರೆ ಮಾನವರಾದ ನಾವೇಲ್ಲ ನಮ್ಮ ಸುಖದ ಬದುಕಿಗಾಗಿ ಪರಿಸರವನ್ನೇ ಹಾಳು ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಪ್ರತಿ ವರ್ಷ ಹತ್ತಾರು ಸಸಿಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡಬೇಕು ಎಂದರು.
ಈ ಸಂಧರ್ಭದಲ್ಲಿ ಅವ್ವಾ ಫೌಂಡೇಶನ್‌ದ ಅಧ್ಯಕ್ಷ ಚಂದ್ರಶೇಖರ ಕಿಣಗಿ, ಸಿದ್ದಲಿಂಗ ಚೌಧರಿ, ಕುಮಾರ ಮಠ, ಸತೀಶ ಹಿರೇಮಠ, ಬಸವರಾಜ ಗಬಸಾವಳಗಿ, ಡಾ.ಪ್ರಕಾಶ ರಾಗರಂಜನಿ, ಗುರುನಾಥ ಅರಳಗುಂಡಗಿ, ಸಿದ್ದರಾಮ ಬ್ಯಾಕೋಡ, ಮುತ್ತು ಪಟ್ಟಣಶೆಟ್ಟಿ, ಬಸವರಾಜ ಸೋಂಪೂರ, ಚನ್ನು ಕತ್ತಿ, ಅರುಣ ಭಜಂತ್ರಿ, ಕಲ್ಯಾಣಿ ಕನ್ನೊಳ್ಳಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

