ದೇವರಹಿಪ್ಪರಗಿ: ಸಾಂಪ್ರದಾಯಿಕ ಬಾದ್ಮಿ ಅಮವಾಸ್ಯೆಯಂದು ಜರುಗುವ ಚೌಡೇಶ್ವರ ದೇವಿಯ ಜಾತ್ರೆ ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದಲ್ಲಿ ಗುರುವಾರ ಚೌಡೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ಆರಂಭಗೊಂಡವು. ಹರಕೆ ಹೊತ್ತ ಮಹಿಳೆಯರು ಮುತೈದೆಯರಿಗೆ ಉಡಿ ತುಂಬಿ ತಮ್ಮ ಭಕ್ತಿ ಮೆರೆದರು. ನಂತರ ನೆರೆದ ಭಕ್ತಮಂಡಳಿಗೆ ಮಹಾಪ್ರಸಾದ ವಿತರಿಸಲಾಯಿತು. ನಂತರ ಸಾಯಂಕಾಲ ಅರ್ಚಕರು ದೇವಿಯ ಮುಖವಾಡ ಧರಿಸಿ ಮೇನ್ ಬಜಾರ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೋಲಾಟದಂತ ಕುಣಿತದ ಪ್ರದರ್ಶನದ ಮೂಲಕ ಡೊಳ್ಳುವಾದ್ಯದ ಮೇಳದೊಂದಿಗೆ ಮೆರವಣಿಗೆ ಹೊರಟರು. ನಂತರ ಸದಯ್ಯನಮಠದ ಗಂಗಾಸ್ಥಳ ತಲುಪಿ ಪುನಃ ಮರಳಿ ದೇವಸ್ಥಾನ ತಲುಪಿದರು. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಕೋಲಿ, ಕಬ್ಬಲಿಗ, ತಳವಾರ ಸಮುದಾಯದ ಭಕ್ತರು ದೇವಿಯ ಮುಂದೆ ಬಡಿಗೆ ಹಿಡಿದು, ಓಡುತ್ತಾ ನೋಡುಗರ ಗಮನ ಸೆಳೆದರು.
ಪಟ್ಟಣ ಪಂಚಾಯಿತಿ ಸದಸ್ಯ ಮಂಗಳೇಶ ಕಡ್ಲೇವಾಡ, ಅಶೋಕ ಮಶಾನವರ, ಕಾಶೀನಾಥ ಸರೂರ, ಸಂಪತ್ ಜಮಾದಾರ, ಶಿವಾನಂದ ಕುಂಬಾರ, ಕಾಶೀನಾಥ ರಾಮಗೊಂಡ, ಬಸವರಾಜ ಕುಂಬಾರ, ಭೀಮರಾಯ ಕುಂಬಾರ, ಸಿದ್ದು ಕುಂಬಾರ, ಕಾಶೀನಾಥ ಕುಂಬಾರ, ಚಿದಾನಂದ ಕುಂಬಾರ, ಶೇಖಪ್ಪ ವಾಡೇದಮನಿ, ಸಾಬಣ್ಣ ಹಡಪದ, ಸೇರಿದಂತೆ ಪಟ್ಟಣದ ಸಮಸ್ತ ಭಕ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

