ತಿಕೋಟಾ: ತಾಲೂಕ ಮಟ್ಟದ ವಿಶ್ವ ಪರಿಸರ ದಿನಾಚರಣೆ ಅರಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅರಿಕೇರಿ ಇಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಗಸ್ತ್ಯ ವಿಜ್ಞಾನ ಕೇಂದ್ರ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ ವಿಶ್ವ ಪರಿಸರ ದಿನಾಚರಣೆ ಆಯೋಜಿಸಲಾಗಿತು.
ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೊಲಮಟ್ಟಿ ನೀರಿಗೆ ನೈದಿಲೆ ಸಿಂಗಾರ ನಾಡಿಗೆ ಕಾಡು ಸಿಂಗಾರ ಎಂಬ ಮಾತಿನಂತೆ ಪ್ರಸ್ತುತ ನಾವು ನೀವೆಲ್ಲರೂ ಪ್ರಕೃತಿ ಕೂಸುಗಳಾಗಿ ಪ್ರಕೃತಿಯ ಪೋಷಣೆ ಮಾಡೋಣ. ಪರಿಸರ ಹಾಗೂ ವಾತಾವರಣ ಜೀವ ವೈವಿಧ್ಯದ ಕುರಿತು ಮಕ್ಕಳಿಗೆ ತಿಳಿಹೇಳಿ ಈ ಪರಿಸರವನ್ನ ರಕ್ಷಿಸುವ ಜವಾಬ್ದಾರಿ ಸರಕಾರ, ಸಮುದಾಯ, ಪಾಲಕರ, ಹಾಗೂ ಸ್ಥಳೀಯ ಸಂಸ್ಥೆಗಳ ಹಾಗೂ ಎನ್ಜಿಓ ಸಂಸ್ಥೆಗಳ ಜವಾಬ್ದಾರಿ ಇದೆ ಎಂದು ತಿಳಿಸಿದರು.
ಹಿರಿಯ ಮುಖಂಡ ಪೀರ್ ಪಟೇಲ್ ಪಾಟೀಲ್ ಮಾತನಾಡಿ, ಈ ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ನಾವು ನೆಟ್ಟ ಪ್ರತಿಯೊಂದು ಗಿಡವನ್ನು ಒಂದು ವರ್ಷ ಎರಡು ವರ್ಷ ಅವುಗಳನ್ನ ಪೋಷಿಸಿ ಸಂರಕ್ಷಿಸುವ ಜವಾಬ್ದಾರಿಯನ್ನ ನಾವು ನೀವೆಲ್ಲರೂ ತೆಗೆದುಕೊಳ್ಳೋಣ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಅಶೋಕ ಭಂಡಾರಿ, ಮುಖ್ಯೋಪಾಧ್ಯಾಯ ಆರ್.ಎ. ಮುಲ್ಲಾ, ಎಸ್.ಜಿ.ಚವ್ಹಾಣ, ಎಸ್.ಜಿ.ಕರಕಿ, ಕಾಂತು ಗೌಡಪಾಟೀಲ್, ಚಂದ್ರಶೇಖರ ಅಂಬಿಗೇರ, ವಿನೋದ ದಳವಾಯಿ, ರೇವಣಸಿದ್ದಪ್ಪ ನಾಗರಾಳ, ಅಮಸಿದ್ದ ಒಡೆಯರ, ಲಕ್ಷ್ಮಣ ರಾಠೋಡ, ಭೀಮಣ್ಣ ಶಿಂಧೆ, ಮಲಕಾರಿ ಸೋನ್ನದ, ನೀಲಮ್ಮ ಕಾಂಬಳೆ, ಕ್ಷೇತ್ರ ಸಮನ್ವಾಧಿಕಾರಿ ಎಸ್.ಡಿ.ಮೋಸಲಗಿ ಸಿಆರ್ಪಿ ಸಂತೋಷ ಮದಕವಿ, ಬಿಆರ್ಪಿ ಅಮರಗೊಂಡ ಹಾಗೂ ಶಾಲಾ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

