Author: editor.udayarashmi@gmail.com

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅಭಿಮತ ಸಿಂದಗಿ: ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪರಿಸರ ಸಂರಕ್ಷಣಾ ಜಾಗೃತಿ ಮೂಡಿಸುವುದು ಅತ್ಯಗತ್ಯ. ಪರಿಸರವನ್ನು ಸಂರಕ್ಷಿಸುವ, ಪೋಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ವಸತಿ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಮಾಡಿದಕ್ಕೆ ಪ್ರಾಚಾರ್ಯರಿಗೂ ಹಾಗೂ ಸಿಬ್ಬಂದಿಗಳಿಗೂ ಪ್ರಸಂಶನೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ವ್ಯಕ್ತಪಡಿಸಿದರು.ತಾಲೂಕಿನ ಗುಬ್ಬೆವಾಡ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ರಾತ್ರಿ ವಾಸ್ಥವ್ಯ ಹೂಡಿ ಮಕ್ಕಳ ಜೊತೆ ಊಟ ಮಾಡಿದ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮೂರಾರ್ಜಿ ವಸತಿ ಶಾಲೆಗಳು ಪರಿಸರ ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ವಸತಿ ನಿಲಯಗಳಲ್ಲಿ ಮಕ್ಕಳ ತಮ್ಮ ವಿಷಯಗಳನ್ನು ಹೇಳಲಿಕ್ಕೆ ಸಲಹಾ ಪೆಟ್ಟಿಗೆ ಅಳವಡಿಸಬೇಕು. ಊಟದ ಮೆನು ಮಕ್ಕಳ ಕಾಣುವ ರೀತಿಯಲ್ಲಿ ಹಾಕಬೇಕು. ಮೂರು ವರ್ಷವಾದರೂ ಸ್ಟಿಮ್ ಅಳವಡಿಕೆ ಅನುಸ್ಥಾಪನೆ ಮಾಡಿಲ್ಲ ಎಂದರೆ ಹೇಗೆ…

Read More

ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಅವರು ಜೂ.೨೪ರಿಂದ ೨೬ರವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಜೂ.೨೪ರಂದು ಸಂಜೆ ೭ ಗಂಟೆಗೆ ವಿಜಯಪುರಕ್ಕೆ ಆಗಮಿಸಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಜೂ.೨೫ರಂದು ಬೆಳಿಗ್ಗೆ ೧೧ ಗಂಟೆಗೆ ವಿಜಯಪುರದಿಂದ ಪ್ರಯಾಣ ಬೆಳೆಸಿ, ಮಧ್ಯಾಹ್ನ ೧೨ ಗಂಟೆಗೆ ಜತ್ತ ಮತ್ತು ಅಕ್ಕಲಕೋಟ ತಾಲೂಕುಗಳಲ್ಲಿ ಕನ್ನಡ ಶಿಕ್ಷಕರ ನೇಮಕವಾದ ಶಾಲೆಗಳಿಗೆ ಭೇಟಿ ನೀಡಿ, ತಾಲೂಕಿನ ಶಾಸಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕನ್ನಡಪರ ಹೋರಾಟಗಾರರು, ಶಿಕ್ಷಕರೊಂದಿಗೆ ಗಡಿ ಸಮಸ್ಯೆಗಳ ಸಮಾಲೊಚನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ಜತ್ತದಿಂದ ಹೊರಟು ೫-೩೦ಕ್ಕೆ ವಿಜಯಪುರಕ್ಕೆ ಆಗಮಿಸಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಜೂ.೨೬ ರಂದು ಬೆಳಿಗ್ಗೆ ೮ ಗಂಟೆಗೆ ವಿಜಯಪುರದಿಂದ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

Read More

ವಿಜಯಪುರ: ಬಸವನಬಾಗೇವಾಡಿ ೨೨೦/೧೧೦/೧೧ ಕೆವ್ಹಿ ಸ್ವೀಕರಣಾ ಕೇಂದ್ರದಲ್ಲಿ ಜೂ.೨೪ ರಂದು ಮೊದಲನೇ ತ್ರೆöÊಮಾಸಿಕ ನಿರ್ವಹಣಾ ಕಾರ್ಯ ಮತ್ತು ಬಸ ಕಪ್ಲರ್ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಸದರಿ ಸ್ವೀಕರಣಾ ಕೇಂದ್ರದ ಮೇಲೆ ಬರುವ ೧೧೦ ಕೆವ್ಹಿ ಮಾರ್ಗಗಳಿಗೆ ಅಂದು ಬೆಳಿಗ್ಗೆ ೮ ರಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಜೂ.೨೪ರಂದು ೧೧೦ ಕೆವ್ಹಿ ಮಾರ್ಗಗಳಲ್ಲಿ ಬರುವ ಮಮದಾಪುರ, ಬೆಳ್ಳುಬ್ಬಿ, ಶಿರಬೂರ, ದೇವರಗೆಣ್ಣೂರ, ಬಬಲೇಶ್ವರ, ಕಂಬಾಗಿ, ಮಟ್ಟಿಹಾಳ, ಮಲಘಾಣ, ರೋಣಿಹಾಳ, ಮುದ್ದೇಬಿಹಾಳ, ಹಿರೇಮುರಾಳ, ದೇವರಹಿಪ್ಪರಗಿ, ಉಕ್ಕಲಿ, ನಂದಿಹಾಳ, ಅಥರ್ಗಾ ಮತ್ತು ಹಿರೆಮಸಳಿ ೧೧೦ಕೆವ್ಹಿ ಉಪ ಕೇಂದ್ರಗಳಲ್ಲಿಯು ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಮದ ೩೩ ಕೆವ್ಹಿ ಮನಗೂಳಿ, ಮುತ್ತಗಿ, ಹೂವಿನಹಿಪ್ಪರಗಿ, ಢವಳಗಿ, ತಂಗಡಗಿ, ನಾತಲವಾಡ, ಕೋಲಾರ ನೀರು ಸರಬರಾಜು ಮಾರ್ಗ, ಕಾರಜೊಳ ಎಲ್.ಆಯ್.ಎಸ್. ದೇವರಗೆಣ್ಣೂರ, ಲಿಂಗದಳ್ಳಿ ಎಲ್‌ಆಯ್‌ಎಸ್, ಕೋರವಾರ ಹಾಗೂ ಕಡ್ಲೇವಾಡ ವಿದ್ಯುತ್ ಉಪ ಕೇಂದ್ರಗಳಿಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಅಧಿಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ವಿಜಯಪುರ: ಮಹಾನಗರ ಪಾಲಿಕೆ ವತಿಯಿಂದ ಡೇ-ನಲ್ಮ ಅಭಿಯಾನ ಮತ್ತು ಪಿಎಂ ಸ್ವ-ನಿಧಿ ಯೋಜನೆಯಡಿ ನಗರ ಕಲಿಕಾ ಪ್ರಾಯೋಗಿಕ ತರಬೇತಿ (The Urbon Learning Internship Programme-TULIP) ಕಾರ್ಯಕ್ರಮಕ್ಕೆ ಇಂಟರ್‌ನಶಿಪ್‌ಗಾಗಿ ಪದವಿ-ಸ್ನಾತಕೋತ್ತರ ಪದವಿ, ಡಿಪ್ಲೋಮಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅಸಕ್ತ ಅಭ್ಯರ್ಥಿಗಳು ಆಧಾರ ಕಾರ್ಡ, ಕಾಲೇಜ್ ಐಡಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಹಾಘೂ ಪದವಿ-ಸ್ನಾತಕೋತ್ತರ ಪದವಿ-ಡಿಪ್ಲೋಮಾ ಅಂಕಪಟಿಯೊಂದಿಗೆ ದಿನಾಂಕ : ೦೧-೦೭-೨೦೨೪ರೊಳಗಾಗಿ ಅರ್ಜಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆಯ ಡೇ-ನಲ್ಮ ಶಾಖೆಗೆ ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಜೂನ್ ೨೨ ರಂದು ಡಿಸಿಇಟಿ – ೨೦೨೪ ರ ಪ್ರವೇಶ ಪರೀಕ್ಷೆ ವಿಜಯಪುರ: ನಗರದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೂ.೨೨ ರಂದು ಡಿಪ್ಲೋಮಾ ಅಭ್ಯರ್ಥಿಗಳಿಗೆ ಡಿಸಿಇಟಿ – ೨೦೨೪ ರ ಪ್ರವೇಶ ಪರೀಕ್ಷೆಗಳು ಜರುಗಲಿದ್ದು, ಎಲ್ಲ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಂಡು ವ್ಯವಸ್ಥಿತವಾಗಿ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಡಿಸಿಇಟಿ – ೨೦೨೪ ರ ಪ್ರವೇಶ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರಶ್ನೆಪತ್ರಿಕೆಗಳನ್ನ ಪರೀಕ್ಷೆ ಕೇಂದ್ರಗಳಿಗೆ ನಿಗಧಿತ ಸಮಯದಲ್ಲಿ ತಲುಪಿಸಲು ತಹಶೀಲ್ದಾರ, ಪ್ರಿನ್ಸಿಪಾಲ್, ಹಾಗೂ ಬಿಇಒ ಅವರ ತ್ರಿಸದಸ್ಯ ಸಮಿತಿ ರಚಿಸಲಾಗಿದ್ದು, ಸಮಿತಿ ಸದಸ್ಯರು ಕಡ್ಡಾಯವಾಗಿ ಬಯೋಮೆಟ್ರಿಕ್ ನೊಂದಣಿ ಮಾಡಿಕೊಳ್ಳಬೇಕು. ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆ ಪಡೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ತಲುಪಿಸಬೇಕು. ಪರೀಕ್ಷೆ ಮುಗಿದ ನಂತರ ರಹಸ್ಯ ಬಂಡಲ್‌ಗಳನ್ನು ಸ್ವೀಕರಿಸಿ ನೇರವಾಗಿ ಅಂಚೆ ಕಚೇರಿಯ iಟಿsuಡಿeಜ ಠಿosಣ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ…

Read More

ತಿಕೋಟಾ: ಪ್ರತಿದಿನ ಯೋಗ ಮಾಡುವದರಿಂದ ರೋಗಗಳು ದೂರಾಗುತ್ತವೆ ಎಂದು ತಾಲ್ಲೂಕ ಪಂಚಾಯತಿ ಸಹಾಯಕ ನಿರ್ದೇಶಕಿ ಶೋಭಕ್ಕಾ ಶಿಳೀನ ಹೇಳಿದರು.ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡ ಅಮೃತ ಸರೋವರದ ಆವರಣದಲ್ಲಿ ತಾಲ್ಲೂಕ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಜರುಗಿದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.ಇಂದಿನ ಯುಗದಲ್ಲಿ ಎಲ್ಲರೂ ಯೋಗವನ್ನು ರೂಢಿಸಿಕೊಳ್ಳುವುದು ತುಂಬಾ ಅನಿವಾರ್ಯವಾಗಿದೆ. ಯೋಗದ ಮಹತ್ವವನ್ನು ಜನರಿಗೆ ತಲುಪಿಸುವುದು ಈ ಯೋಗ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಉತ್ತಮ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ನಾವೆಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಪ್ರತಿಜ್ಞೆ ಮಾಡೋಣ ಎಂದರು.ಪಿಡಿಓ ಸುರೇಶ ಕಳ್ಳಿಮನಿ, ಶಿಕ್ಷಕ ಭೀರಪ್ಪ ಖಂಡೇಕರ, ಗ್ರಾಮ ಪಂಚಾಯತಿ ಅಧ್ಯಕ್ಷ ತುಕಾರಾಮ ದಡಕೆ, ಕಲ್ಲಪ್ಪ ನಂದರಗಿ, ಸೋಮನಿಂಗ ನವರಂಗಿ, ಅಣ್ಣಪ್ಪ ಬಿದರಿ, ಗ್ಹೂವಣ್ಣ ಪೂಜಾರಿ, ಶಿವು ಪತ್ತಾರ, ಸಿದ್ರಾಯ ದಾಶ್ಯಾಳ ಇದ್ದರು.ಬಾಬಾನಗರ ಗ್ರಾಮದಲ್ಲಿ ಜರುಗಿದ ಯೋಗ ದಿನಾಚರಣೆಯು ಬಸವೇಶ್ವರ ಅಮೃತ ಸರೋವರದ ಆವರಣದಲ್ಲಿ ಹಮ್ಮಿಕೊಂಡಿದ್ದು ಗ್ರಾಮ…

Read More

ಬಸವನಬಾಗೇವಾಡಿ: ಯೋಗವೆಂದರೆ ಅದೊಂದು ಬದುಕಿನ ಕಲೆಯಾಗಿದೆ. ಕೌಶಲ್ಯತೆಯಿಂದ ಮಾಡುವ ಕೆಲಸವೇ ಯೋಗ. ಯಾವುದೇ ಕೆಲಸವನ್ನು ಮಾಡಿ ತಮ್ಮ ಪಾಲಿಗೆ ಬಂದ ಕೆಲಸವನ್ನು ಅತ್ಯಂತ ಕೌಶಲ್ಯಪೂರ್ಣವಾಗಿ ಯಶಸ್ವಿಯಾಗಿ ಮಾಡುವುದು ಸಹ ಯೋಗವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.ತಾಲೂಕಿನ ಟಕ್ಕಳಕಿ ಗ್ರಾಮದ ಸಮೀಪವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾರತ ಸೇವಾದಳದ ಜಿಲ್ಲಾ ಹಾಗೂ ತಾಲೂಕು ಸಮಿತಿ, ಜಿಲ್ಲಾ ಆಯುಷ್ಯ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಆದರ್ಶ ಶಿಕ್ಷಕರ ವೇದಿಕೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಹಯೋಗದಲ್ಲಿ ಕಳೆದ ನಾಲ್ಕು ದಿನಗಳಿಂದ ಹಮ್ಮಿಕೊಂಡಿದ್ದ ಯೋಗ ಶಿಬಿರದ ಸಮಾರೋಪ ಹಾಗೂ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶುಕ್ರವಾರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಾಚೀನರು ನೀಡಿದ ಯೋಗ ಕಲೆಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯ, ಜೀವನವನ್ನು ಸುಂದರವಾಗಿಟ್ಟುಕೊಳ್ಳಬೇಕೆಂದರು.ಸೇವಾದಳದ ಕೇಂದ್ರ ಸಮಿತಿ ಸದಸ್ಯ ಶಿವನಗೌಡ ಬಿರಾದಾರ ಮಾತನಾಡಿ, ಯೋಗಾಸನಗಳು ಕೇವಲ ಋಷಿಮುನಿಗಳಿಗೆ ಮಾತ್ರ ಸಂಬಂಧಿಸಿವೆ. ಸಾಮಾನ್ಯರಿಗೆ ಅಲ್ಲ…

Read More

ಬಸವನಬಾಗೇವಾಡಿ: ನಮ್ಮ ಪೂರ್ವಿಕರ ಹಾಗೆ ನಾವೆಲ್ಲರೂ ನಿರೋಗಿಗಳಾಗಿ ಬಹುಕಾಲದವರೆಗೆ ಬದುಕಬೇಕಾದರೆ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವದು ಅಗತ್ಯವಿದೆ ಎಂದು ಸಿದ್ದ ಸಮಾಧಿ ಯೋಗದ ಆಚಾರ್ಯ, ಯೋಗಗುರು ದಯಾಸಾಗರ ಉಪಾಧ್ಯೆ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗ ಗುರುವಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನದಲ್ಲಿ ನಾವೆಲ್ಲರೂ ಸಿಲುಕಿಕೊಂಡಿರುವದರಿಂದಾಗಿ ಆರೋಗ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ಉತ್ತಮ ಆರೋಗ್ಯಕ್ಕಾಗಿ ಪ್ರತಿನಿತ್ಯ ಒಂದಿಷ್ಟು ಕಾಲ ಯೋಗಕ್ಕೆ ಸಮಯ ಕೊಟ್ಟರೆ ನಮಗೆ ಯಾವ ರೋಗಗಳು ಬರುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗಾಸನ ರೂಢಿಸಿಕೊಳ್ಳಬೇಕೆಂದರು.ರಾಜ್ಯ, ರಾಷ್ಟ್ರಮಟ್ಟದ ಯೋಗ ಪ್ರಶಸ್ತಿ ಪುರಸ್ಕ್ರತೆ ಶ್ರೀರಕ್ಷಾ ಉಪಾಧ್ಯೆ ಅವರು ಪದ್ಮಾಸನ, ತಾಡಾಸನ, ವಜ್ರಾಸನ, ವೃಕ್ಷಾಸನ, ತ್ರಿಕೋನಾಸನ, ಚಕ್ರಾಸನ ಹಾಗು ಪ್ರಾಣಾಯಾಮದ ಕುರಿತು ಪ್ರಾತ್ಯಕ್ಷಿತೆ ತೋರಿಸಿ ಅವುಗಳ ಮಹತ್ವದ ಕುರಿತು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಪೂ ಕಾಲೇಜಿನ ಪ್ರಾಚಾರ್ಯ ಆರ್.ಎ.ಪವಾರ,…

Read More

ಬಸವನಬಾಗೇವಾಡಿ: ತಾಲೂಕಿನ ಯರನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಅಮೃತ ಸರೋವರ ದಡದ ಮೇಲೆ ಶುಕ್ರವಾರ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಎಸ್.ಡಿ.ಕನ್ನೊಳ್ಳಿ ಅವರು, ಪ್ರತಿನಿತ್ಯ ಯೋಗ ಮಾಡುವದರಿಂದ ಜೀವನದಲ್ಲಿ ಆಗುವ ಪ್ರಯೋಜನಗಳ ಕುರಿತು, ಉಸಿರಾಟದ ವ್ಯಾಯಾಮದ ಬಗ್ಗೆ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತಿಳಿಸಿಕೊಟ್ಟರು.ಕಾರ್ಯಕ್ರಮದಲ್ಲಿ ಯರನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತವ್ವ ಕೋಲಕಾರ, ಉಪಾಧ್ಯಕ್ಷ ಹಣಮಂತ ಹಾದಿಮನಿ, ಸದಸ್ಯ ಅನಿಲ ಹಾರಿವಾಳ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಾನಕರ, ಸಿಬ್ಬಂದಿಗಳಾದ ರಮೇಶ ಉಣ್ಣಿಭಾವಿ, ಸಿದ್ದವ್ವ ಹರಿಜನ, ನೀಲವ್ವ ಕರಾಬಿ, ನಾಗು ಬಡಿಗೇರ, ಆಕಾಶ ಮಾದರ, ಗ್ರಾಮ ಕಾಯಕ ಮಿತ್ರ ಲಲಿತಾ ಕೋಲಕಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಡಿ.ಬಿ.ಉಕ್ಕಲಿ, ತಾಲೂಕು ಐಇಸಿ ಸಂಯೋಜಕ ಮಡಿವಾಳಪ್ಪ ಬಿರಾದಾರ ಇತರರು ಇದ್ದರು.ಯೋಗ ದಿನಾಚರಣೆಯಲ್ಲಿ ನರೇಗಾ ಕೂಲಿಕಾರರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು.

Read More

ಬಸವನಬಾಗೇವಾಡಿ: ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿರುವ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ವಿನೂತನವಾಗಿ ಸಪ್ತ ಚಕ್ರದ ಮೊದಲನೇ ಅಂಗ ಮೂಲಾಧಾರ ಶೈಲಿಯಲ್ಲಿ ಯೋಗವನ್ನು ಶಾಲೆಯ ೩೫೦ ವಿದ್ಯಾರ್ಥಿಗಳೊಂದಿಗೆ ಸೂರ್ಯ ನಮಸ್ಕಾರ, ಆಸನಗಳು ಹಾಗೂ ಪ್ರಾಣಾಯಾಮ ಮತ್ತು ಶಾಲೆಯ ೨೨ ಯೋಗಪಟುಗಳು ಯೋಗದ ಕಠಿಣವಾದ ಆಸನಗಳನ್ನು ಶಾಲೆಯ ದೈಹಿಕ ಶಿಕ್ಷಕರಾದ ಮಹೇಶ ಸಂಗಮ, ವಿಜಯ ರಾಠೋಡ ಅವರ ಮಾರ್ಗದರ್ಶನದಲ್ಲಿ ಯೋಗ ದಿನಾಚರಣೆಯಂಗವಾಗಿ ಪ್ರದರ್ಶಿಸಿದರು.ಅತಿಥಿಗಳಾಗಿ ಆಗಮಿಸಿದ್ದ ಡಾ.ಅರವಿಂದ ಪಿ.ಕೆ. ಅವರು ವಿದ್ಯಾರ್ಥಿಗಳೊಂದಿಗೆ ಯೋಗಾಸನ ಮಾಡುವ ಜೊತೆಗೆ ಯೋಗದ ಮಹತ್ವದ ಕುರಿತು ಮಾಹಿತಿ ನೀಡಿದರು.ಶಾಲಾ ಮೇಲುಉಸ್ತುವಾರಿ ಸಮಿತಿ ಅಧ್ಯಕ್ಷ ಅನಿಲ ಅಗರವಾಲ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಯೋಗವನ್ನು ಮಾಡಬೇಕು. ಯೋಗ ಮಾಡಿದರೆ ತಮ್ಮ ಆರೋಗ್ಯ ಚೆನ್ನಾಗಿ ಇರುವ ಜೊತೆಗೆ ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಾಗುವ ಜೊತೆಗೆ ದೇಹವು ಚೈತನ್ಯಮಯ,ಉಲ್ಲಾಸಭರಿತವಾಗಿ ಸದಾ ಇರುತ್ತದೆ. ಪ್ರತಿಯೊಬ್ಬರೂ ಯೋಗವನ್ನು ನಿತ್ಯ ತಪ್ಪದೇ ಮಾಡಿದರೆ ನಿರೋಗಿಗಳಾಗಿ ಇರಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಶಾಲಾ…

Read More