ಬಸವನಬಾಗೇವಾಡಿ: ನಮ್ಮ ಪೂರ್ವಿಕರ ಹಾಗೆ ನಾವೆಲ್ಲರೂ ನಿರೋಗಿಗಳಾಗಿ ಬಹುಕಾಲದವರೆಗೆ ಬದುಕಬೇಕಾದರೆ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವದು ಅಗತ್ಯವಿದೆ ಎಂದು ಸಿದ್ದ ಸಮಾಧಿ ಯೋಗದ ಆಚಾರ್ಯ, ಯೋಗಗುರು ದಯಾಸಾಗರ ಉಪಾಧ್ಯೆ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗ ಗುರುವಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನದಲ್ಲಿ ನಾವೆಲ್ಲರೂ ಸಿಲುಕಿಕೊಂಡಿರುವದರಿಂದಾಗಿ ಆರೋಗ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ಉತ್ತಮ ಆರೋಗ್ಯಕ್ಕಾಗಿ ಪ್ರತಿನಿತ್ಯ ಒಂದಿಷ್ಟು ಕಾಲ ಯೋಗಕ್ಕೆ ಸಮಯ ಕೊಟ್ಟರೆ ನಮಗೆ ಯಾವ ರೋಗಗಳು ಬರುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗಾಸನ ರೂಢಿಸಿಕೊಳ್ಳಬೇಕೆಂದರು.
ರಾಜ್ಯ, ರಾಷ್ಟ್ರಮಟ್ಟದ ಯೋಗ ಪ್ರಶಸ್ತಿ ಪುರಸ್ಕ್ರತೆ ಶ್ರೀರಕ್ಷಾ ಉಪಾಧ್ಯೆ ಅವರು ಪದ್ಮಾಸನ, ತಾಡಾಸನ, ವಜ್ರಾಸನ, ವೃಕ್ಷಾಸನ, ತ್ರಿಕೋನಾಸನ, ಚಕ್ರಾಸನ ಹಾಗು ಪ್ರಾಣಾಯಾಮದ ಕುರಿತು ಪ್ರಾತ್ಯಕ್ಷಿತೆ ತೋರಿಸಿ ಅವುಗಳ ಮಹತ್ವದ ಕುರಿತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಪೂ ಕಾಲೇಜಿನ ಪ್ರಾಚಾರ್ಯ ಆರ್.ಎ.ಪವಾರ, ನ್ಯಾಕ್ ಸಂಯೋಜಕ,ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಪಿ.ಧಡೇಕರ, ಐಕ್ಯೂಎಸಿ, ರಾಜ್ಯಶಾಸ್ತ್ರದ ಮುಖ್ಯಸ್ಥ ಪ್ರೊ.ಡಿ.ಎನ್. ಕೊನಂತೆಲಿ, ಎನ್ಎಸ್ಎಸ್,ಸಮಾಜಶಾಸ್ತ್ರದ ಮುಖ್ಯಸ್ಥ ಡಾ.ವೈ.ಬಿ.ನಾಯಕ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರಗೌಡ, ಡಾ.ಎಸ್.ಬಿ.ಜನಗೊಂಡ, ಪ್ರೊ.ಎಸ್.ಜೆ.ಸೂರ್ಯವಂಶಿ, ಪ್ರೊ.ಪಿ.ಎಸ್.ನಾಟೀಕಾರ, ಪ್ರೊ.ಪಿ.ಎಸ್.ಹೊರಕೇರಿ, ಪ್ರೊ.ಎಂ.ಆರ್.ಮಮದಾಪೂರ, ಪ್ರೊ.ಆರ್.ಎನ್.ರಾಠೋಡ, ಪ್ರೊ.ಜಲಪೂರ, ಪ್ರೊ.ಭರತಕುಮಾರ, ಪ್ರೊ.ಎಸ್.ಎಸ್.ನಾಯ್ಕೋಡಿ, ಪ್ರೊ.ಟಿ.ವೈ.ಮಣ್ಣೂರ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಮೌನೇಶ ಪತ್ತಾರ, ಶಿವಾನಂದ ತೋಳನೂರ, ಪೃಥ್ವಿರಾಜ ನಾಯ್ಕೋಡಿ ಇತರರು ಇದ್ದರು. ಪ್ರೊ.ಎಂ.ಕೆ.ಯಾಧವ ಸ್ವಾಗತಿಸಿ, ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

