ತಿಕೋಟಾ: ಪ್ರತಿದಿನ ಯೋಗ ಮಾಡುವದರಿಂದ ರೋಗಗಳು ದೂರಾಗುತ್ತವೆ ಎಂದು ತಾಲ್ಲೂಕ ಪಂಚಾಯತಿ ಸಹಾಯಕ ನಿರ್ದೇಶಕಿ ಶೋಭಕ್ಕಾ ಶಿಳೀನ ಹೇಳಿದರು.
ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡ ಅಮೃತ ಸರೋವರದ ಆವರಣದಲ್ಲಿ ತಾಲ್ಲೂಕ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಜರುಗಿದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಇಂದಿನ ಯುಗದಲ್ಲಿ ಎಲ್ಲರೂ ಯೋಗವನ್ನು ರೂಢಿಸಿಕೊಳ್ಳುವುದು ತುಂಬಾ ಅನಿವಾರ್ಯವಾಗಿದೆ. ಯೋಗದ ಮಹತ್ವವನ್ನು ಜನರಿಗೆ ತಲುಪಿಸುವುದು ಈ ಯೋಗ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಉತ್ತಮ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ನಾವೆಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಪ್ರತಿಜ್ಞೆ ಮಾಡೋಣ ಎಂದರು.
ಪಿಡಿಓ ಸುರೇಶ ಕಳ್ಳಿಮನಿ, ಶಿಕ್ಷಕ ಭೀರಪ್ಪ ಖಂಡೇಕರ, ಗ್ರಾಮ ಪಂಚಾಯತಿ ಅಧ್ಯಕ್ಷ ತುಕಾರಾಮ ದಡಕೆ, ಕಲ್ಲಪ್ಪ ನಂದರಗಿ, ಸೋಮನಿಂಗ ನವರಂಗಿ, ಅಣ್ಣಪ್ಪ ಬಿದರಿ, ಗ್ಹೂವಣ್ಣ ಪೂಜಾರಿ, ಶಿವು ಪತ್ತಾರ, ಸಿದ್ರಾಯ ದಾಶ್ಯಾಳ ಇದ್ದರು.
ಬಾಬಾನಗರ ಗ್ರಾಮದಲ್ಲಿ ಜರುಗಿದ ಯೋಗ ದಿನಾಚರಣೆಯು ಬಸವೇಶ್ವರ ಅಮೃತ ಸರೋವರದ ಆವರಣದಲ್ಲಿ ಹಮ್ಮಿಕೊಂಡಿದ್ದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಸೋಲಾಪುರ ಚಾಲನೆ ನೀಡಿ ಮಾತನಾಡಿ ಸರ್ವ ರೋಗಕ್ಕೂ ಯೋಗ ಮುಕ್ತಿ ನೀಡುವ ಅಗಾಧವಾದ ಶಕ್ತಿಯನ್ನು ಹೊಂದಿದೆ ಎಂದರು. ಮುಖ್ಯ ಶಿಕ್ಷಕಿ ಎಸ್.ಐ.ಬಾಗಲಕೋಟ ಯೋಗ ತರಬೇತಿ ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ, ಉಫಾಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.
ತಾಲ್ಲೂಕಿನ ಬಿಜ್ಜರಗಿ, ಕನಮಡಿ, ಸಿದ್ಧಾಪುರ (ಕೆ), ಲೋಹಗಾಂವ ಹಾಗೂ ಟಕ್ಕಳಕಿ ಗ್ರಾಮದ ಅಮೃತ ಸರೋವರದಲ್ಲಿಯೂ ಯೋಗ ದಿನಾಚರಣೆ ಆಚರಿಸಲಾಯಿತು.
ಪಿಡಿಓ ಮಹೇಶ ಕಗ್ಗೊಡದವರ, ಜಯಲಕ್ಷ್ಮಿ ದಶವಂತ, ಪಿಡಿಓ ಪದ್ಮಿನಿ ಬಿರಾದಾರ, ಅಕ್ಕಮಹಾದೇವಿ ಪವಾರ, ಸೋಮಸಿಂಗ್ ಕೋಳಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

