ಬಸವನಬಾಗೇವಾಡಿ: ಯೋಗವೆಂದರೆ ಅದೊಂದು ಬದುಕಿನ ಕಲೆಯಾಗಿದೆ. ಕೌಶಲ್ಯತೆಯಿಂದ ಮಾಡುವ ಕೆಲಸವೇ ಯೋಗ. ಯಾವುದೇ ಕೆಲಸವನ್ನು ಮಾಡಿ ತಮ್ಮ ಪಾಲಿಗೆ ಬಂದ ಕೆಲಸವನ್ನು ಅತ್ಯಂತ ಕೌಶಲ್ಯಪೂರ್ಣವಾಗಿ ಯಶಸ್ವಿಯಾಗಿ ಮಾಡುವುದು ಸಹ ಯೋಗವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ತಾಲೂಕಿನ ಟಕ್ಕಳಕಿ ಗ್ರಾಮದ ಸಮೀಪವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾರತ ಸೇವಾದಳದ ಜಿಲ್ಲಾ ಹಾಗೂ ತಾಲೂಕು ಸಮಿತಿ, ಜಿಲ್ಲಾ ಆಯುಷ್ಯ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಆದರ್ಶ ಶಿಕ್ಷಕರ ವೇದಿಕೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಹಯೋಗದಲ್ಲಿ ಕಳೆದ ನಾಲ್ಕು ದಿನಗಳಿಂದ ಹಮ್ಮಿಕೊಂಡಿದ್ದ ಯೋಗ ಶಿಬಿರದ ಸಮಾರೋಪ ಹಾಗೂ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶುಕ್ರವಾರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಾಚೀನರು ನೀಡಿದ ಯೋಗ ಕಲೆಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯ, ಜೀವನವನ್ನು ಸುಂದರವಾಗಿಟ್ಟುಕೊಳ್ಳಬೇಕೆಂದರು.
ಸೇವಾದಳದ ಕೇಂದ್ರ ಸಮಿತಿ ಸದಸ್ಯ ಶಿವನಗೌಡ ಬಿರಾದಾರ ಮಾತನಾಡಿ, ಯೋಗಾಸನಗಳು ಕೇವಲ ಋಷಿಮುನಿಗಳಿಗೆ ಮಾತ್ರ ಸಂಬಂಧಿಸಿವೆ. ಸಾಮಾನ್ಯರಿಗೆ ಅಲ್ಲ ಎಂಬುವದು ಸರಿಯಲ್ಲ. ಯೋಗಾಸನಗಳು ಎಲ್ಲರ ಸ್ವತ್ತು. ಎಲ್ಲರೂ ಯೋಗದ ಮಹತ್ವ ಅರಿತು ನಿತ್ಯ ಜೀವನದಲ್ಲಿ ಯೋಗಾಸನಗಳನ್ನು ಮಾಡುವ ಮೂಲಕ ಆರೋಗ್ಯವಂತ ಜೀವನ ಸಾಗಿಸಬೇಕೆಂದರು.
ಸೇವಾದಳದ ಗೌರವಾಧ್ಯಕ್ಷ ಎಫ್.ಡಿ.ಮೇಟಿ ಮಾತನಾಡಿ, ಯೋಗವೆಂದರೆ ಕೇವಲ ಆಸನಗಳು ಎಂಬ ಕಲ್ಪನೆ ದೂರವಾಗಿ ಯೋಗ ಒಂದು ಬದುಕಿನ ಕಲೆ ಎಂಬ ಭಾವ ಎಲ್ಲರಲ್ಲಿ ಬರಬೇಕಿದೆ. ನಮ್ಮ ನಿತ್ಯ ಜೀವನದಲ್ಲಿ ಯೋಗವನ್ನು ಅನ್ವಯಿಸಿದಾಗ ಎಲ್ಲ ಕಾರ್ಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಭಾರತ ಸೇವಾದಳದ ತಾಲೂಕಾಧ್ಯಕ್ಷ ಎಸ್.ಐ.ಗಚ್ಚಿನವರ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಅಶೋಕ ಗುಡದಿನ್ನಿ, ತಾಲೂಕು ಕಾರ್ಯದರ್ಶಿ ಆರ್.ಜಿ.ಅಳ್ಳಗಿ, ಕೋಶಾಧ್ಯಕ್ಷ ವೀರಣ್ಣ ಮರ್ತುರ, ವಲಯ ಸಂಘಟಕ ನಾಗೇಶ ಡೋಣೂರ, ತಾಲೂಕು ಸಮಿತಿ ಸದಸ್ಯರಾದ ಜಿ.ವೈ.ನಾಗರಾಳ, ಎಂ.ಎಸ್.ಅವಟಿ, ಅಜೀವ ಸದಸ್ಯ ವಿವೇಕಾನಂದ ಕಲ್ಯಾಣಶೆಟ್ಟಿ, ಆದರ್ಶ ಶಿಕ್ಷಕರ ವೇದಿಕೆಯ ಅಧ್ಯಕ್ಷ ಉಮೇಶ ಕವಲಗಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ವಸತಿ ಶಾಲೆಯ ಪ್ರಾಚಾರ್ಯ ಡಿ.ಎಂ.ಚಲವಾದಿ ಇತರರು ಇದ್ದರು.
ಬಿ.ವ್ಹಿ.ಚಕ್ರಮನಿ ಸ್ವಾಗತಿಸಿದರು. ಶಿವು ಮಡಿಕೇಶ್ವರ ನಿರೂಪಿಸಿದರು. ಕೊಟ್ರೇಶ ಹೆಗಡ್ಯಾಳ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

