ಬಸವನಬಾಗೇವಾಡಿ: ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿರುವ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ವಿನೂತನವಾಗಿ ಸಪ್ತ ಚಕ್ರದ ಮೊದಲನೇ ಅಂಗ ಮೂಲಾಧಾರ ಶೈಲಿಯಲ್ಲಿ ಯೋಗವನ್ನು ಶಾಲೆಯ ೩೫೦ ವಿದ್ಯಾರ್ಥಿಗಳೊಂದಿಗೆ ಸೂರ್ಯ ನಮಸ್ಕಾರ, ಆಸನಗಳು ಹಾಗೂ ಪ್ರಾಣಾಯಾಮ ಮತ್ತು ಶಾಲೆಯ ೨೨ ಯೋಗಪಟುಗಳು ಯೋಗದ ಕಠಿಣವಾದ ಆಸನಗಳನ್ನು ಶಾಲೆಯ ದೈಹಿಕ ಶಿಕ್ಷಕರಾದ ಮಹೇಶ ಸಂಗಮ, ವಿಜಯ ರಾಠೋಡ ಅವರ ಮಾರ್ಗದರ್ಶನದಲ್ಲಿ ಯೋಗ ದಿನಾಚರಣೆಯಂಗವಾಗಿ ಪ್ರದರ್ಶಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಡಾ.ಅರವಿಂದ ಪಿ.ಕೆ. ಅವರು ವಿದ್ಯಾರ್ಥಿಗಳೊಂದಿಗೆ ಯೋಗಾಸನ ಮಾಡುವ ಜೊತೆಗೆ ಯೋಗದ ಮಹತ್ವದ ಕುರಿತು ಮಾಹಿತಿ ನೀಡಿದರು.
ಶಾಲಾ ಮೇಲುಉಸ್ತುವಾರಿ ಸಮಿತಿ ಅಧ್ಯಕ್ಷ ಅನಿಲ ಅಗರವಾಲ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಯೋಗವನ್ನು ಮಾಡಬೇಕು. ಯೋಗ ಮಾಡಿದರೆ ತಮ್ಮ ಆರೋಗ್ಯ ಚೆನ್ನಾಗಿ ಇರುವ ಜೊತೆಗೆ ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಾಗುವ ಜೊತೆಗೆ ದೇಹವು ಚೈತನ್ಯಮಯ,ಉಲ್ಲಾಸಭರಿತವಾಗಿ ಸದಾ ಇರುತ್ತದೆ. ಪ್ರತಿಯೊಬ್ಬರೂ ಯೋಗವನ್ನು ನಿತ್ಯ ತಪ್ಪದೇ ಮಾಡಿದರೆ ನಿರೋಗಿಗಳಾಗಿ ಇರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮೇಲು ಉಸ್ತುವಾರಿ ಸಮಿತಿ ಉಪಾಧ್ಯಕ್ಷ ಎಸ್.ಎಸ್.ಝಳಕಿ, ಸದಸ್ಯರಾದ ಎಂ.ಜಿ.ಆದಿಗೊಂಡ, ಶೈಲಶ್ರೀ ತೇರದಾಳಮಠ, ಬೇಬಿ ಗಣಾಚಾರಿ, ಶಾಲೆಯ ಪ್ರಾಚಾರ್ಯೆ ಆರ್.ಎಂ.ರೋಣದ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

