ಬಸವನಬಾಗೇವಾಡಿ: ತಾಲೂಕಿನ ಯರನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಅಮೃತ ಸರೋವರ ದಡದ ಮೇಲೆ ಶುಕ್ರವಾರ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಎಸ್.ಡಿ.ಕನ್ನೊಳ್ಳಿ ಅವರು, ಪ್ರತಿನಿತ್ಯ ಯೋಗ ಮಾಡುವದರಿಂದ ಜೀವನದಲ್ಲಿ ಆಗುವ ಪ್ರಯೋಜನಗಳ ಕುರಿತು, ಉಸಿರಾಟದ ವ್ಯಾಯಾಮದ ಬಗ್ಗೆ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಯರನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತವ್ವ ಕೋಲಕಾರ, ಉಪಾಧ್ಯಕ್ಷ ಹಣಮಂತ ಹಾದಿಮನಿ, ಸದಸ್ಯ ಅನಿಲ ಹಾರಿವಾಳ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಾನಕರ, ಸಿಬ್ಬಂದಿಗಳಾದ ರಮೇಶ ಉಣ್ಣಿಭಾವಿ, ಸಿದ್ದವ್ವ ಹರಿಜನ, ನೀಲವ್ವ ಕರಾಬಿ, ನಾಗು ಬಡಿಗೇರ, ಆಕಾಶ ಮಾದರ, ಗ್ರಾಮ ಕಾಯಕ ಮಿತ್ರ ಲಲಿತಾ ಕೋಲಕಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಡಿ.ಬಿ.ಉಕ್ಕಲಿ, ತಾಲೂಕು ಐಇಸಿ ಸಂಯೋಜಕ ಮಡಿವಾಳಪ್ಪ ಬಿರಾದಾರ ಇತರರು ಇದ್ದರು.
ಯೋಗ ದಿನಾಚರಣೆಯಲ್ಲಿ ನರೇಗಾ ಕೂಲಿಕಾರರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

