Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ: ಶಾಲಾ ಆವರಣ ಹಾಗೂ ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಹೇಳಿದರು.ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್, ನಿವಾಳಖೇಡ ಗ್ರಾಮಗಳ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.ಮಕ್ಕಳ ಬಿಸಿಯೂಟದಲ್ಲಿ ತರಕಾರಿ, ಬೇಳೆ ಕಾಳುಗಳನ್ನು ಹೆಚ್ಚು ಬಳಸಬೇಕು. ಶುದ್ಧ ನೀರು ಹಾಗೂ ಹಾಲು ಬಳಸಿಕೊಳ್ಳಬೇಕು ಎಂದು ಮುಖ್ಯಗುರು ಆರ್.ಎಸ್.ಬಿರಾದಾರ ಅವರಿಗೆ ಸೂಚಿಸಿದರು.ನಂತರ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಉತ್ತಮ ಗುಣಮಟ್ಟದ ಕಿಟಕಿ, ಫ್ಯಾನ್, ಟ್ಯೂಬ್‌ಲೈಟ್ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಿದರು.ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ವ್ಯವಸ್ಥಿತ ಕಸ ವಿಲೇವಾರಿ, ಕಸ ವಿಲೇವಾರಿ ವಾಹನಕ್ಕೆ ಸ್ವಸಹಾಯ ಸಂಘದ ಮಹಿಳಾ ಚಾಲಕಿಗೆ ಕೆಲಸ ನೀಡುವಂತೆ ಪಿಡಿಓ ಜಿ.ಸಿ.ಕನ್ನೋಳ್ಳಿ ಅವರಿಗೆ ಸೂಚಿಸಿದರು.ಅಪಾಯದ ಅಂಚಿನಲ್ಲಿರುವ ಕೋಠಡಿಗಳನ್ನು ತೆರವು ಮಾಡಿ, ಆ ಕೋಠಡಿಗಳಲ್ಲಿ ಭೋದನೆ ಮಾಡದಂತೆ ಹಾಗೂ ಶಾಲೆಗೆ ಕಂಪೌಂಡ ನಿರ್ಮಿಸಲು ಪಂಚಾಯತ್ ರಾಜ್ ಎಡಿ ಶಿವಾನಂದ ಮೂಲಿಮನಿ ಅವರಿಗೆ ಸೂಚಿಸಿದರು.ಶಾಲಾ ಶೌಚಾಲಯ ವೀಕ್ಷಿಸಿ, ಶೌಚಾಲಯ ಹಾಗೂ ಬಿಸಿಊಟ ಕೋಣೆಯನ್ನು ಪ್ರತಿದಿನ ಫಿನಾಯಿಲ್‌ನಿಂದ ಸ್ವಚ್ಛ…
ಮುದ್ದೇಬಿಹಾಳ: ವಿದ್ಯಾರ್ಥಿಗಳು ಪಠ್ಯ ಮಾತ್ರವಲ್ಲದೇ ಇತರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪಠ್ಯಪುಸ್ತಕ ಅಂಕಗಳನ್ನು ತಂದುಕೊಟ್ಟರೆ ಇತರ ಪುಸ್ತಕಗಳು ಜ್ಞಾನಾರ್ಜನೆಯನ್ನು ತಂದುಕೊಡುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.ತಾಲೂಕಿನ ಮಡಿಕೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಐವತ್ತು ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.ಜ್ಞಾನ ಪಡೆಯುವ ಏಕೈಕ ಸಾಧನವೆಂದರೆ ಅದು ಪುಸ್ತಕ. ಸಮಯ ಸದುಪಯೋಗ ಮಾಡಿಕೊಂಡು ಅಧ್ಯಯನಶೀಲ ಸದ್ಗುಣಗಳನ್ನು ಅಳವಡಿಸಿಕೊಂಡು ಜ್ಞಾನವಂತರಾಗಿ ದೇಶದ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಯಬೇಕು. ಜಾನಪದ ಸಮ್ಮೇಳನ ಹಾಗೂ ಮಕ್ಕಳ ಸಮ್ಮೇಳನ ಮಾಡುವ ಸಂಕಲ್ಪ ನಮ್ಮದಾಗಿದೆ ಎಂದರು.ಪ್ರೌಢ ಶಾಲೆಯ ಸಹ ಶಿಕ್ಷಕ ಬಸವರಾಜ ಹಂಚಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕ್ರಿಯಾಶೀಲ ಚಟುವಟಿಕೆಗಳಿಂದ ಜಿಲ್ಲೆಯ ಗಮನ ಸೆಳೆದಿದೆ. ಅನೇಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಸಾಹಿತ್ಯ ನಿಂತ ನೀರಾಗದೆ ಹರಿಯುತ್ತಿರುವ ಜಲಧಾರೆಯಾಗಲಿ ಎಂದರು.ಹಿರಿಯ ಶಿಕ್ಷಕ ಎಸ್ ಎಸ್ ಬಾಬಣ್ಣವರ ಮಾತನಾಡಿ ಕನ್ನಡ ಸಾಹಿತ್ಯ…
ವಿಜಯಪುರ: ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯಪುರ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳ ವ್ಯಾಪ್ತಿಯ ೨೦೨೪-೨೫ ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಘೋಷಣೆಯಾಗಿದ್ದು ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆಗೆ ಜೂನ್ ೨೪ ರಿಂದ ೨೯ ರವರೆಗೆ ಚುನಾವಣೆಗಳು ನಡೆಯಲಿದ್ದು ನಾಮಪತ್ರ ಸಲ್ಲಿಸಬಹುದಾಗಿದೆ. ಜುಲೈ ೧ರಂದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದ್ದು, ಜುಲೈ ೭ರಂದು ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶವನ್ನು ಸಹ ಘೋಷಣೆ ಆಗಲಿದೆ.ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಗೆ ಜುಲೈ ೧೫ ರಿಂದ ೧೭ರವರೆಗೆ ನಾಮಪತ್ರ ಸ್ವೀಕಾರ ನಡೆಯಲಿದ್ದು, ಜುಲೈ ೨೦ರಂದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದೆ. ಚುನಾವಣೆ ಜುಲೈ ೨೧ ರಂದು ನಡೆದು ಅಂದೆ ಫಲಿತಾಂಶ ಘೋಷಣೆ ಆಗಲಿದೆ.ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆಗೆ ಜುಲೈ ೨೨ ರಿಂದ ೨೭ರವರೆಗೆ ನಾಮಪತ್ರ ಸ್ವೀಕರಿಸಲಿದ್ದು ಜುಲೈ ೨೯ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ ನೀಡಲಾಗಿದೆ. ಆಗಸ್ಟ್ ೪ರಂದು ಚುನಾವಣೆ ನಡೆದು ಅಂದೇ ಸಂಜೆ ಫಲಿತಾಂಶ ಹೊರಬೀಳಲಿದೆ ಎಂದು…
ವಿಜಯಪುರ: ನೂತನವಾಗಿ ರಚನೆಗೊಂಡ ಕರ್ನಾಟಕ ಲಲಿತಕಲಾ ಅಕಾಡೆಮಿಯ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಅಧ್ಯಕ್ಷರ ಸಲಹೆ ಮೇರೆಗೆ ವಿಜಯಪುರ ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಮತ್ತು ಕಲಾವಿದರನ್ನು ದಿನಾಂಕ: ೨೩-೦೬-೨೦೨೪ ರಂದು ರವಿವಾರ ಬೆಳಿಗ್ಗೆ ೧೦.೦೦ ಗಂಟೆಗೆ ಸರಕಾರಿ ಆರ್ಟ್ ಗ್ಯಾಲರಿ, ಸ್ಟೇಷನ್ ರೋಡ, ವಿಜಯಪುರದಲ್ಲಿ ಸಭೆ ಕರೆಯಲಾಗಿದೆ.ಕಾರಣ ಜಿಲ್ಲೆಯ ಎಲ್ಲ ಕಲಾವಿದರು ಭಾಗವಹಿಸಿ ತಮ್ಮ ಅಮೂಲ್ಯವಾದ ಹೊಸ ವಿಚಾರ ಮತ್ತು ಸಲಹೆ ಸೂಚನೆಗಳನ್ನು ನೀಡಬೇಕೆಂದು ಕರ್ನಾಟಕ ಲಲಿತಕಲಾ ಅಕಾಡೆಮಿ ನೂತನ ಸದಸ್ಯರಾದ ಶ್ರೀಮತಿ ರಾಜೇಶ್ವರಿ ಎಮ್. ಮೋಪಗಾರ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.ಈ ವೇಳೆ ಸಂಸ್ಥೆಯ ಕಾರ್ಯದರ್ಶಿಗಳಾದ ಎಲ್ ಆರ್ ಪಾಟೀಲ್ ಮಾತನಾಡಿ, ಐದು ಸಾವಿರ ವರ್ಷಗಳ ಇತಿಹಾಸ ಇರುವ ಯೋಗವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ನಮ ಧರ್ಮ, ಸಂಸ್ಕೃತಿ, ಪದ್ಧತಿಗೆ ಜಾಗತಿಕ ಮಾನ್ಯತೆ ದೊರೆತಿದೆ. ಹಿರಿಯರು ಮಹಾ ಋಷಿಗಳು ಯೋಗಕ್ಕೆ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.ಹಿರಿಯ ಜೀವಿ ಶಾಂತವ್ವಜ್ಜಿ ಮಠಪತಿಯವರು ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ಮಾಡಿಸಿದರು.ಈ ಸಂದರ್ಭದಲ್ಲಿ ಶಾಲೆಯ ಸಂಸ್ಥೆಯ ನಿರ್ದೇಶಕ ಎಂ ಟಿ ಶಿಂದೆ, ರೈತ ಸಂಘದ ಪ್ರತಿನಿಧಿ ಧರೆಪ್ಪ ಹಡಪದ್, ಮುಖ್ಯ ಗುರು ಎನ್ ಬಿ ಕೋಟಿ ಸಹ ಶಿಕ್ಷಕರು ಇದ್ದರು.
ವಿಜಯಪುರ: ದಿನಂಪ್ರತಿ ಮಾಡುವ ಯೋಗದ ಅನುಷ್ಠಾನ ನಮ್ಮ ದೇಹ, ಮನಸ್ಸು ಹಾಗೂ ಭಾವನೆಗಳನ್ನು ಆರೋಗ್ಯವಾಗಿರಿಸಿ ವಿಶ್ರಾಂತಿ, ರೋಗ ನಿರೋಧಕ ಶಕ್ತಿ, ಏಕಾಗ್ರತೆ, ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಬಂಜಾರಾ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸೋಮಶೇಖರ ರಾಠೋಡ ಹೇಳಿದರು.ಶುಕ್ರವಾರದಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ “ಅಂತರಾಷ್ಟ್ರೀಯ ಯೋಗ ದಿನಾಚರಣೆ” ಕಾರ್ಯಕ್ರಮದ ಅಂಗವಾಗಿ ‘ಯೋಗಾಸನ ಪ್ರಾಣಾಯಾಮ ಮತ್ತು ಧ್ಯಾನ ತರಬೇತಿ’ ಶಿಬಿರ ಕಾರ್ಯಾಕ್ರಮದಲ್ಲಿ ವಿದ್ಯಾರ್ಥಿಗಳಿಗೆ “ಧ್ಯಾನ ಮತ್ತು ಯೋಗ” ತರಬೇತಿಯನ್ನು ನೀಡಿ ಮಾತನಾಡಿದ ಅವರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಹಾರ ಮತ್ತು ವ್ಯಾಯಾಮ ಹೆಚ್ಚು ಉಪಕಾರಿ. ಇನ್ನು ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಹೆಚ್ಚು ಸೂಕ್ತ. ಹಾಗಾಗಿ ನಾವಿಲ್ಲಿ ಯಾವೆಲ್ಲಾ ಆಸನಗಳನ್ನು ಮಾಡಿದರೆ ಮಕ್ಕಳ ಮತ್ತು ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.ಈ ವೇಳೆಯಲ್ಲಿ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿಯವರು ಮಾತನಾಡುತ್ತ, ಯೋಗ ಮಾಡುವುದು…
ಆಲಮೇಲ: ಪ್ರತಿನಿತ್ಯ ಯೋಗ ಹಾಗೂ ಪ್ರಾಣಾಯಾಮ ಮಾಡುವುದರಿಂದ ಮನುಷ್ಯನ ಆಯುಷ್ಯ ವೃಧ್ದಿ ಆಗುತ್ತದೆ ಎಂದು ನಿರಂಜನ ಶ್ರೀಗಳು ನುಡಿದರು.ಶುಕ್ರವಾರ ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಮಕ್ಕಳು ಪ್ರತಿನಿತ್ಯ ಬೆಳಿಗ್ಗೆ ೫ ಗಂಟೆಗೆ ಎದ್ದು ನಿತ್ಯ ಕ್ರಮಗಳನ್ನು ಮುಗಿಸಿ ೧ಕಿ.ಮೀ ಕ್ಕಿಂತ ಹೆಚ್ಚು ದೂರ ಓಟಮಾಡುವುದರ ಜೊತೆಗೆ ದೈಹಿಕ ಕಸರತ್ತುಗಳು, ಪ್ರಾಣಾಯಾಮ, ಸೂರ್ಯನಮಸ್ಕಾರಗಳನ್ನು ಮಾಡಬೇಕು. ಇವುಗಳ ಜೊತೆಗೆ ಆಹಾರದಲ್ಲಿ ಮೊಳಕೆ ಕಾಳುಗಳು, ಮೊಟ್ಟೆ, ಹಾಲು,ಜೋಳದ ರೊಟ್ಟಿ, ಪೌಷ್ಟಿಕ ಆಹಾರವನ್ನು ಬಳಸುವುದರಿಂದ ನೀವು ಜೀವನದಲ್ಲಿ ಶ್ರೇಷ್ಠ ವ್ಯಕ್ತಿಗಳು ಆಗುತ್ತಿರಿ ಎಂದು ಮಕ್ಕಳಿಗೆ ತಿಳಿಸಿದರು.ಸದಾಕಾಲವೂ ಮಕ್ಕಳು ನಗು ನಗುತಾ ಉತ್ಸಾಹದಿಂದ ಇರಲು ಯೋಗ ಹಾಗೂ ಪ್ರಾಣಾಯಾಮ ಬಹಳ ಮುಖ್ಯ ಎಂದರು.ಸಮಾರಂಭದಲ್ಲಿ ಬೆಳಿಗ್ಗೆ ೮ ಗಂಟೆಗೆ ಖ್ಯಾತ ಯೋಗಪಟುಗಳು, ವೈದ್ಯಾಧಿಕಾರಿಗಳಾದ ಡಾ.ಚನಬಸಪ್ಪ ನಿಂಬಾಳ ರವರು ಮಕ್ಕಳಿಗೂ ಹಾಗೂ ಶಿಕ್ಷಕರಿಗೂ ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕವಾಗಿ ಮಾಡಿಸಿ, ಈ ಆಸನಗಳನ್ನು ಪ್ರತಿನಿತ್ಯ ಮಾಡುವುದರಿಂದ…
ಸಮರ್ಪಕ ಮಳೆ | ಬಿತ್ತನೆ ಪೂರ್ಣ | ಗುರಿ ಮೀರಿದ ಬಿತ್ತನೆ | ಬಂಪರ್ ಬೆಳೆ ನಿರೀಕ್ಷೆ | – ಇಲಾಹಿ ಇ. ಜಮಖಂಡಿಚಿಮ್ಮಡ: ಬೇಸಿಗೆಯ ಬೀರು ಬಿಸಿಲಿನ ತಾಪದಿಂದ ಬಸವಳಿದ ಜನತೆಗೆ ಸಮರ್ಪಕವಾಗಿ ಸುರಿದ ಮುಂಗಾರು ಪೂರ್ವ, ಮುಂಗಾರು ಮಳೆಯಿಂದ ಈ ಭಾಗದ ಇಡೀ ವಾತಾವರಣವೇ ತಂಪೆರೆದಂತಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದಿದೆ.ಕಳೆದ ಒಂದು ತಿಂಗಳ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಅಶ್ವಿನಿ, ಭರಣಿ, ರೋಹಿಣಿ ಮಳೆಗಳು ರೈತರಲ್ಲಿ ಆಶಾಭಾವಣೆ ಮೂಡಿಸಿದ್ದವು, ಮಳೆಯನ್ನೆ ನಂಬಿ ಹಲವು ರೈತರು ಬಿತ್ತನೆ ಕಾರ್ಯ ಶುರು ಮಾಡಿದ್ದರು. ಜೂನ್ ಏಳರಿಂದ ಪ್ರಾರಂಭಗೊಳ್ಳಬೇಕಿದ್ದ ಮೃಗಶಿರಾ ಮಳೆ ಒಂದು ವಾರ ಕಳೆದರೂ ಬಾರದಿದ್ದಾಗ ಆತಂಕ ಎದುರಾಗಿತ್ತು. ತಡವಾಗಿಯಾದರೂ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯನ್ನೆ ನಂಬಿ ಬಿತ್ತನೆ ಮಾಡಿದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಬೆಳಗಾವಿ ಮಹಾರಾಷ್ಟ್ರ ಭಾಗಗಳಲ್ಲಿ ಮಳೆ ಕೊರತೆಯ ಪರಿಣಾಮ ಹಿಡಕಲ್ ಜಲಾಶಯದಲ್ಲಿ ನೀರು ಸಂಗ್ರಹಣಾ ಪ್ರಮಾಣವೂ ಕ್ಷೀಣಿಸಿದ್ದು ಇದರಿಂದಾಗಿ ಗ್ರಾಮದ ಮೂಲಕ ಹರಿಯುವ…
ವಿಜಯಪುರ: ಇನ್ನುಮುಂದೆ ನೀನು ನಡೆದಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಸಿಗೆಯಲ್ಲಿಯೇ ಕಾಲ ಕಳೆಯಬೇಕು ಎಂದು ವೈದ್ಯರು ಹೇಳಿದ್ದನ್ನು ಸವಾಲಾಗಿ ಸ್ವೀಕರಿಸಿದ ನಮ್ಮ ಎಲುಬು ಮತ್ತು ಕೀಲುಗಳ ವಿಭಾಗದ ತಜ್ಞ ವೈದ್ಯರ ಬಳಗ ಸ್ವಾಧೀನ ಕಳೆದುಕೊಂಡಿದ್ದ ಕಾಲುಗಳಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದ್ದು ನಮ್ಮ ಆಸ್ಪತ್ರೆಯ ವೈದ್ಯರ ಪರಿಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಹೇಳಿದರು.ಶನಿವಾರ ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಬಸವರಾಜ್ ರಾಂಪೂರ ಎನ್ನುವ ವ್ಯಕ್ತಿಯು ಯಾವುದೋ ಕಾರಣದಿಂದ ಬಿದ್ದು ಕಾಲಿನ ಸ್ವಾಧಿನತೆಯನ್ನು ಕಳೆದುಕೊಂಡಿದ್ದರು. ನಗರದ ವಿವಿಧ ವೈದ್ಯರುಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡರೂ ಸಹ ಯಾವುದೇ ರೀತಿಯ ಪ್ರಯೋಜನ ಕಾಣದೇ ಕಳೆದ ಒಂದು ತಿಂಗಳಿನಿಂದ ಹಾಸಿಗೆ ಹಿಡಿದು ಮಲಗಿದ್ದರು. ಹಾಸಿಗೆಯನ್ನು ಬಿಟ್ಟು ಏಳಲಾಗದ ಸ್ಥಿತಿಯಲ್ಲಿ ಜೀವನ ಕಳೆಯಬೇಕಾಯಿತಲ್ಲ ಎಂದು ಕಂಗಾಲಾದ ಕುಟುಂಬ ನಮ್ಮ…
ಜನರ ಮೇಲೆ ಹೊರೆ ಆಗುವ ಮೊದಲು ವಿಧಾನಸಭೆ ವಿಸರ್ಜಿಸಲು ಸಿಎಂಗೆ ಶಾಸಕ ಯತ್ನಾಳ ಸಲಹೆ ವಿಜಯಪುರ: ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ, ಭ್ರಷ್ಟಾಚಾರ ಹಾಗೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಶನಿವಾರ ಬಿಜೆಪಿ ನಗರ ಮಂಡಲ ವತಿಯಿಂದ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಮನಗೂಳಿ ರಿಂಗ್ ರೋಡ್ ದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಹೆದ್ದಾರಿ ತಡೆದು ಜನರಿಗೆ ಬೆಲೆ ಏರಿಕೆ ಬರೆ ಹಾಕಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ತೈಲ್ ಬೆಲೆ ಏರಿಸಿ ಲೂಟಿಗೆ ಇಳಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬಿತ್ಯಾದಿ ಘೋಷಣೆ ಕೂಗಿದರು. ನಂತರ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಹುಟ್ಟಿದವರ & ಸತ್ತವರ ಪ್ರಮಾಣ ಪತ್ರ ಉಚಿತವಾಗಿ ನೀಡಬೇಕು. ಆದರೆ, ಈ ಸರ್ಕಾರ ಜನನ-ಮರಣ ಪ್ರಮಾಣ ಪತ್ರದ ಮೊತ್ತ…
