ದೇವರಹಿಪ್ಪರಗಿ: ಶಾಲಾ ಆವರಣ ಹಾಗೂ ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಹೇಳಿದರು.
ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್, ನಿವಾಳಖೇಡ ಗ್ರಾಮಗಳ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.
ಮಕ್ಕಳ ಬಿಸಿಯೂಟದಲ್ಲಿ ತರಕಾರಿ, ಬೇಳೆ ಕಾಳುಗಳನ್ನು ಹೆಚ್ಚು ಬಳಸಬೇಕು. ಶುದ್ಧ ನೀರು ಹಾಗೂ ಹಾಲು ಬಳಸಿಕೊಳ್ಳಬೇಕು ಎಂದು ಮುಖ್ಯಗುರು ಆರ್.ಎಸ್.ಬಿರಾದಾರ ಅವರಿಗೆ ಸೂಚಿಸಿದರು.
ನಂತರ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಉತ್ತಮ ಗುಣಮಟ್ಟದ ಕಿಟಕಿ, ಫ್ಯಾನ್, ಟ್ಯೂಬ್‌ಲೈಟ್ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಿದರು.
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ವ್ಯವಸ್ಥಿತ ಕಸ ವಿಲೇವಾರಿ, ಕಸ ವಿಲೇವಾರಿ ವಾಹನಕ್ಕೆ ಸ್ವಸಹಾಯ ಸಂಘದ ಮಹಿಳಾ ಚಾಲಕಿಗೆ ಕೆಲಸ ನೀಡುವಂತೆ ಪಿಡಿಓ ಜಿ.ಸಿ.ಕನ್ನೋಳ್ಳಿ ಅವರಿಗೆ ಸೂಚಿಸಿದರು.
ಅಪಾಯದ ಅಂಚಿನಲ್ಲಿರುವ ಕೋಠಡಿಗಳನ್ನು ತೆರವು ಮಾಡಿ, ಆ ಕೋಠಡಿಗಳಲ್ಲಿ ಭೋದನೆ ಮಾಡದಂತೆ ಹಾಗೂ ಶಾಲೆಗೆ ಕಂಪೌಂಡ ನಿರ್ಮಿಸಲು ಪಂಚಾಯತ್ ರಾಜ್ ಎಡಿ ಶಿವಾನಂದ ಮೂಲಿಮನಿ ಅವರಿಗೆ ಸೂಚಿಸಿದರು.
ಶಾಲಾ ಶೌಚಾಲಯ ವೀಕ್ಷಿಸಿ, ಶೌಚಾಲಯ ಹಾಗೂ ಬಿಸಿಊಟ ಕೋಣೆಯನ್ನು ಪ್ರತಿದಿನ ಫಿನಾಯಿಲ್‌ನಿಂದ ಸ್ವಚ್ಛ ಗೊಳಿಸಿ ಯಾವುದೇ ರೋಗಗಳು ಬಾರದಂತೆ ನೋಡಿಕೊಳ್ಳಬೇಕು. ಈ ಎಲ್ಲವುಗಳನ್ನು ಸರಿಪಡಿಸಿ ಏಳು ದಿನದ ಒಳಗಾಗಿ ಜಿಲ್ಲಾ ಪಂಚಾಯಿತಿಗೆ ವರದಿ ನೀಡಲು ಮುಖ್ಯಗುರು ಎ.ವಿ.ತಳಕೇರಿ ಅವರಿಗೆ ಹೇಳಿದರು. ಈಗಾಗಲೇ ನರೇಗಾ ಯೋಜನೆಯಡಿ ಶಾಲಾ ಕಂಪೌಂಡ, ಕಿಚನ್ ಗಾರ್ಡನ್, ಶುದ್ಧ ಕುಡಿಯುವ ನೀರು ವ್ಯವಸ್ಥೆಗಳ ಬಗ್ಗೆ ಪಿಡಿಓ ಅವರಿಗೆ ಸೂಚಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ ಸಿಇಓ ಅವರಿಗೆ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ಎಇಇ ಜಿ.ವೈ.ಮುರಾಳ, ತಾಂತ್ರಿಕ ಸಂಯೋಜಕ ಶರಣಗೌಡ ಚಿಕ್ಕರೂಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ಧಗೊಂಡಪ್ಪಗೌಡ ಪಾಟೀಲ, ಶ್ರೀಕಾಂತ, ಬಾಲಚಂದ್ರ, ರುದ್ರಗೌಡ, ಗುರುರಾಜ್ ಆಕಳವಾಡಿ, ಜಿ.ಸಿ ಸಿಡಿಪಿಓ ಶಂಭುಲಿಂಗ, ಗೋಲ್ಲಾಳ, ಐಇಸಿ ಸಂಯೋಜಕ ಸಿದ್ದು ಕಾಂಬಳೆ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
ಶಾಲಾ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ :ಸಿಇಓ ರಿಷಿ ಆನಂದ
Related Posts
Add A Comment

