ವಿಜಯಪುರ: ದಿನಂಪ್ರತಿ ಮಾಡುವ ಯೋಗದ ಅನುಷ್ಠಾನ ನಮ್ಮ ದೇಹ, ಮನಸ್ಸು ಹಾಗೂ ಭಾವನೆಗಳನ್ನು ಆರೋಗ್ಯವಾಗಿರಿಸಿ ವಿಶ್ರಾಂತಿ, ರೋಗ ನಿರೋಧಕ ಶಕ್ತಿ, ಏಕಾಗ್ರತೆ, ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಬಂಜಾರಾ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸೋಮಶೇಖರ ರಾಠೋಡ ಹೇಳಿದರು.
ಶುಕ್ರವಾರದಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ “ಅಂತರಾಷ್ಟ್ರೀಯ ಯೋಗ ದಿನಾಚರಣೆ” ಕಾರ್ಯಕ್ರಮದ ಅಂಗವಾಗಿ ‘ಯೋಗಾಸನ ಪ್ರಾಣಾಯಾಮ ಮತ್ತು ಧ್ಯಾನ ತರಬೇತಿ’ ಶಿಬಿರ ಕಾರ್ಯಾಕ್ರಮದಲ್ಲಿ ವಿದ್ಯಾರ್ಥಿಗಳಿಗೆ “ಧ್ಯಾನ ಮತ್ತು ಯೋಗ” ತರಬೇತಿಯನ್ನು ನೀಡಿ ಮಾತನಾಡಿದ ಅವರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಹಾರ ಮತ್ತು ವ್ಯಾಯಾಮ ಹೆಚ್ಚು ಉಪಕಾರಿ. ಇನ್ನು ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಹೆಚ್ಚು ಸೂಕ್ತ. ಹಾಗಾಗಿ ನಾವಿಲ್ಲಿ ಯಾವೆಲ್ಲಾ ಆಸನಗಳನ್ನು ಮಾಡಿದರೆ ಮಕ್ಕಳ ಮತ್ತು ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.
ಈ ವೇಳೆಯಲ್ಲಿ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿಯವರು ಮಾತನಾಡುತ್ತ, ಯೋಗ ಮಾಡುವುದು ಒತ್ತಡವನ್ನು ನಿವಾರಿಸುವ ಮೂಲಕ ಉತ್ತಮ ಆರೋಗ್ಯವನ್ನು ಬೆಂಬಲಿಸುತ್ತದೆ. ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ, ನಿದ್ರೆ, ದೇಹ, ಸಮತೋಲನವನ್ನು ಸುಧಾರಿಸುತ್ತದೆ. ಬೆನ್ನು ನೋವು, ಕುತ್ತಿಗೆ ನೋವು, ತಲೆನೋವಿನ ಸಮಸ್ಯೆಗಳಿಗೆ ಯೋಗವು ಒಳ್ಳೆಯ ಪರಿಹಾರವಾಗಿದೆ. ಬೊಜ್ಜು ಮತ್ತು ಅಧಿಕ ತೂಕವನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. ವ್ಯಸನಗಳಿಂದ ಮುಕ್ತಿ ಪಡೆಯಲು ಒಳ್ಳೆಯ ಅಭ್ಯಾಸವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

