ಆಲಮೇಲ: ಪ್ರತಿನಿತ್ಯ ಯೋಗ ಹಾಗೂ ಪ್ರಾಣಾಯಾಮ ಮಾಡುವುದರಿಂದ ಮನುಷ್ಯನ ಆಯುಷ್ಯ ವೃಧ್ದಿ ಆಗುತ್ತದೆ ಎಂದು ನಿರಂಜನ ಶ್ರೀಗಳು ನುಡಿದರು.
ಶುಕ್ರವಾರ ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಕ್ಕಳು ಪ್ರತಿನಿತ್ಯ ಬೆಳಿಗ್ಗೆ ೫ ಗಂಟೆಗೆ ಎದ್ದು ನಿತ್ಯ ಕ್ರಮಗಳನ್ನು ಮುಗಿಸಿ ೧ಕಿ.ಮೀ ಕ್ಕಿಂತ ಹೆಚ್ಚು ದೂರ ಓಟಮಾಡುವುದರ ಜೊತೆಗೆ ದೈಹಿಕ ಕಸರತ್ತುಗಳು, ಪ್ರಾಣಾಯಾಮ, ಸೂರ್ಯನಮಸ್ಕಾರಗಳನ್ನು ಮಾಡಬೇಕು. ಇವುಗಳ ಜೊತೆಗೆ ಆಹಾರದಲ್ಲಿ ಮೊಳಕೆ ಕಾಳುಗಳು, ಮೊಟ್ಟೆ, ಹಾಲು,ಜೋಳದ ರೊಟ್ಟಿ, ಪೌಷ್ಟಿಕ ಆಹಾರವನ್ನು ಬಳಸುವುದರಿಂದ ನೀವು ಜೀವನದಲ್ಲಿ ಶ್ರೇಷ್ಠ ವ್ಯಕ್ತಿಗಳು ಆಗುತ್ತಿರಿ ಎಂದು ಮಕ್ಕಳಿಗೆ ತಿಳಿಸಿದರು.
ಸದಾಕಾಲವೂ ಮಕ್ಕಳು ನಗು ನಗುತಾ ಉತ್ಸಾಹದಿಂದ ಇರಲು ಯೋಗ ಹಾಗೂ ಪ್ರಾಣಾಯಾಮ ಬಹಳ ಮುಖ್ಯ ಎಂದರು.
ಸಮಾರಂಭದಲ್ಲಿ ಬೆಳಿಗ್ಗೆ ೮ ಗಂಟೆಗೆ ಖ್ಯಾತ ಯೋಗಪಟುಗಳು, ವೈದ್ಯಾಧಿಕಾರಿಗಳಾದ ಡಾ.ಚನಬಸಪ್ಪ ನಿಂಬಾಳ ರವರು ಮಕ್ಕಳಿಗೂ ಹಾಗೂ ಶಿಕ್ಷಕರಿಗೂ ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕವಾಗಿ ಮಾಡಿಸಿ, ಈ ಆಸನಗಳನ್ನು ಪ್ರತಿನಿತ್ಯ ಮಾಡುವುದರಿಂದ ಆಗುವ ಲಾಭಗಳನ್ನು ಮಕ್ಕಳಿಗೆ ತಿಳಿಸಿ ಹೇಳಿದರು.
ಇದೇ ಸಂದರ್ಭದಲ್ಲಿ ಆಲಮೇಲ ಪಟ್ಟಣದಲ್ಲಿ ನಿರಂತರವಾಗಿ ಕಳೆದ ಹತ್ತು ವರ್ಷಗಳಿಂದ ಯೋಗೋತ್ಸವ ಸಮಿತಿ ರಚನೆ ಮಾಡಿ ಪ್ರತಿನಿತ್ಯ ಜನತೆಗೆ ಯೋಗ ನಡೆಸುತ್ತಿರುವ ಡಾ.ಚನಬಸಪ್ಪರವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು..
ಈ ವೇಳೆ ಬಸವಲಿಂಗ ಶರಣರು, ಸಂಸ್ಥೆಯ ಕೋಶಾಧ್ಯಕ್ಷ ಅರವಿಂದ ಕುಲಕರ್ಣಿ, ಸದಸ್ಯರಾದ ಅಲೋಕ ಬಡದಾಳ, ಮುಖ್ಯ ಗುರು ಲಕ್ಷ್ಮೀಪುತ್ರ ಕಿರನಳ್ಳಿ, ಈರಣ್ಣ ಕಲಶೆಟ್ಟಿ, ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಲಕ್ಷ್ಮೀ ಹಳೇಮನಿ, ಸರುಬಾಯಿ ಬಂಡಗರ, ಸುನಿತಾ ಗುಂಡದ, ವೀಣಾ ಗುಡಿಮಠ, ಜಗದೇವಿ ಇಟಗಿ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
ಪ್ರತಿನಿತ್ಯದ ಯೋಗದಿಂದ ಮನುಷ್ಯನ ಆಯುಷ್ಯ ವೃದ್ಧಿ :ನಿರಂಜನ ಶ್ರೀ
Related Posts
Add A Comment

