Author: editor.udayarashmi@gmail.com

3ವರ್ಷವಾದರೂ ಅನುಸ್ಥಾಪನೆಯಾಗದ ರೈಸ್ ಸ್ಟೀಮರ್‌ | ಒಡೆದ ಕಿಟಕಿಗಳು | ನೀರು ಪೂರೈಕೆ ಕೊರತೆ – ರಶ್ಮಿ ನೂಲಾನವರಸಿಂದಗಿ: ತಾಲೂಕಿನ ಗುಬ್ಬೆವಾಡ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ನೀರು, ಶೌಚಾಲಯ ನೀರು ಪೊರೈಕೆ ಕೊರತೆ, ಒಳಚರಂಡಿ ದುರಸ್ತಿ ಸೇರಿ ವಿವಿಧ ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಹಲವು ವರ್ಷಗಳಿಂದ ಕೆಲವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.ಇಲ್ಲಿನ ವಸತಿ ಶಾಲೆಯಲ್ಲಿ ೬ರಿಂದ೧೦ನೆಯ ತರಗತಿಯವರೆಗೆ ೨೩೦ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳುತಿದ್ದಾರೆ. ಮೂಲ ಸೌಕರ್ಯಗಳ ಸಮಸ್ಯೆ ಇಲ್ಲಿ ಬಲವಾಗಿ ಕಾಡುತ್ತಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ದುರಸ್ತಿ ಭಾಗ್ಯ ಕಾಣದ ಶೌಚಾಲಯ, ಮಲಗುವ ಕೋಣೆ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹಲವು ಸಮಸ್ಯೆಗಳು ಕಾಣ ಸಿಗುತ್ತವೆ. ಇದು ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದ ಮೂರಾರ್ಜಿ ವಸತಿ ಶಾಲೆಯ ದುಸ್ಥಿತಿ. ಕಳೆದ ಐದು ವರ್ಷಗಳಿಂದ ವಸತಿ ಶಾಲೆಯ ಯಾವುದೇ ರೀಪೆರ್ ಕಾರ್ಯವಾಗಿಲ್ಲ. ಇನ್ನಾದರೂ ಸರಕಾರ…

Read More

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುತ್ತಿಗೆದಾರರ ಆಹೋರಾತ್ರಿ ಧರಣಿ ಆರಂಭ ಆಲಮಟ್ಟಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷ್ಣಾ ತೀರ ಗುತ್ತಿಗೆದಾರರ ಸಂಘ ಕಳೆದ ಮೂರು ದಿನಗಳಿಂದ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಆರಂಭಿಸಿದ್ದ ಧರಣಿ ಸತ್ಯಾಗ್ರಹ ಶನಿವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವಾಗಿ ಪರಿವರ್ತನೆಗೊಂಡಿತು.ಕೆಬಿಜೆಎನ್‌ಎಲ್ ನಲ್ಲಿ ಕಳೆದ ವರ್ಷ ಕರೆದಿದ್ದ ಕಾಮಗಾರಿಗಳ ಟೆಂಡರ್ ತೆರೆದು ಕಾಮಗಾರಿ ಆದೇಶ ನೀಡಿಲ್ಲ, ಆಗ ಟೆಂಡರ್ ಜತೆ ನೀಡಿದ್ದ ಇಎಂಡಿ ಹಣವನ್ನು ಪಾವತಿಸಿಲ್ಲ, ಹೀಗಾಗಿ ನೂರಾರು ಗುತ್ತಿಗೆದಾರರ ಕೋಟ್ಯಂತರ ಹಣ ಇಎಂಡಿ ರೂಪದಲ್ಲಿ ನಿಗಮದಲ್ಲಿದೆ, ಇಎಂಡಿ ಹಣ ಮರಳಿಸಬೇಕು, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದರು. ಮೊದಲು ಧರಣಿ ಸತ್ಯಾಗ್ರಹ ನಡೆಸಿದ್ದೇವೆ, ಈಗ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ. ಇದಕ್ಕೂ ಕೆಬಿಜೆಎನ್‌ಎಲ್ ಅಧಿಕಾರಿಗಳು ಸ್ಪಂದಿಸದಿದ್ದರೇ ಜೂನ್ ೨೫ ರಂದು ಮುಖ್ಯ ಎಂಜಿನಿಯರ್ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಸಂಘದ ಅಧ್ಯಕ್ಷ ಎಂ.ಎ. ಮೇಟಿ ಹೇಳಿದರು.ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಮಹಾಂತೇಶ ಬೆಳಗಲ್ಲ, ಎಂ.ಆರ್. ಕಮತಗಿ, ಬಸವರಾಜ…

Read More

ಆಲಮಟ್ಟಿ: ಸಮೀಪದ ಹುಣಶಾಳ-ಪಿಸಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನಿವೃತ್ತ ಶಿಕ್ಷಕ ಎಂ.ಬಿ.ಹೆಳವರ ೨೫ ತೆಂಗಿನ ಸಸಿಗಳನ್ನು ಭಕ್ತಿಯ ಕಾಣಿಕೆಯನ್ನಾಗಿ ನೀಡಿ ತಮಗಿದ್ದ ಪರಿಸರ ಪ್ರೇಮವನ್ನು ಸಾದರಪಡಿಸಿದ್ದಾರೆ. ಸಸಿಗಳನ್ನು ವಿತರಿಸಿದ ಬಳಿಕ ವಂದಾಲ ಗ್ರಾಮಪಂಚಾಯ್ತಿ ಅಧ್ಯಕ್ಷ ವೀರೇಶ ಗಣಾಚಾರಿ ದೇವಸ್ಥಾನ ಆವರಣದಲ್ಲಿ ಅವುಗಳನ್ನು ನೆಟ್ಟು, ತಮ್ಮ ಶಾಲಾ ಆವರಣದಲ್ಲಿಯೇ ಸಸಿ ನೆಡಲು ಹಿಂದೇಟು ಹಾಕುವ ಅದೆಷ್ಟೋ ಜನ ಶಿಕ್ಷಕರಿಗೆ ನಿವೃತ್ತ ಶಿಕ್ಷಕ ಎಂ.ಬಿ.ಹೆಳವರ ಅವರ ಕಾರ್ಯ ಶ್ಲಾಘನೀಯ ಎಂದರು.  ಈ ವೇಳೆ ಪ್ರಮುಖರಾದ ಶಂಕ್ರಯ್ಯ ವಸ್ತ್ರದ, ಗುಂಡುರಾವ್ ದೇಶಪಾಂಡೆ, ಪದ್ಮಾವತಿ ಗುಡಿ, ಚನಸಂಗಪ್ಪಗೌಡ ಪಾಟೀಲ, ಶರಣಯ್ಯ ವಸ್ತ್ರದ, ಶಿವಕುಮಾರ ವಸ್ತ್ರದ, ಸಂಗಪ್ಪ ಹೂಗಾರ ಮತ್ತಿತರರು ಇದ್ದರು.

Read More

ವಿಜಯಪುರ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶುಕ್ರವಾರ ತಿಕೋಟಾ ಪಟ್ಟಣದಲ್ಲಿರುವ ಬಿಎಲ್‌ಡಿಇ ಸಂಸ್ಥೆಯ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ 10 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.ಯೋಗ ಶಿಕ್ಷಕ ಬಸವರಾಜ ದೇವನಾಯ್ಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯೋಗವು ಮೆದುಳಿನ ರಚನೆ ಮತ್ತು ಕಾರ್ಯ ಚಟುವಟಿಕೆಗಳ ಮೇಲೆ ಗಮನಾರ್ಹ ಪ್ರಭಾವ ಭೀರುತ್ತದೆ. ಅಲ್ಲದೇ, ಜನರಲ್ಲಿ ಸ್ಮರಣ ಶಕ್ತಿ ಹೆಚ್ಚಲು ಮತ್ತು ಏಕಾಗ್ರತೆ ಸಾಧಿಸಲು ಅನುಕೂಲ ಮಾಡಿಕೊಡುತ್ತದೆ ಎಂದು ಯೋಗದ ಪ್ರಾಮುಖ್ಯತೆ ಮತ್ತು ಪ್ರಯೋಜನಗಳ ಬಗ್ಗೆ ವಿವರಿಸಿದರು.ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ದಾಪುರ ಮಾತನಾಡಿ, ದೈನಂದಿನ ಜೀವನದಲ್ಲಿ ಯೋಗ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಾಗಿದೆ. ಯೋಗದಿಂದ ನಾವು ಏಕಾಗ್ರತೆ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬೆಳೆಸಿಕೊಳ್ಳಬಹುದು. ಯೋಗವು ವಿಶ್ವಾದ್ಯಂತ ಅಂಗೀಕರಿಸಲ್ಪಟ್ಟಿರುವ ಸಾಂಪ್ರದಾಯಿಕ ಔಷಧ ಪದ್ಧತಿಗಳಲ್ಲಿ ಅತ್ಯಂತ ಹಳೆಯದಾಗಿದೆ ಎಂದು ಹೇಳಿದರು.ಇದೇ ವೇಳೆ ಅವರು ಯೋಗದ ನಾನಾ ಭಂಗಿಗಳು ಮತ್ತು ಆಸನಗಳನ್ನು ಪ್ರದರ್ಶಿಸಿದರು.ಈ ವಿಶೇಷ ಸಮಾರಂಭದಲ್ಲಿ ಯೋಗ ಕಾರ್ಯಕ್ರಮದ…

Read More

ವಿಜಯಪುರ: ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಸ್ವಾಸ್ತ್ಯಕ್ಕೆ ಸಂಜೀವಿನಿ ಇದ್ದಂತೆ ಎಂದು ಯೋಗಪಟು ಶೀಫಾಆರಾ ಎನ್. ಅಕ್ಕಲಕೋಟ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ಸಿ.ಬಿ.ಎಸ್.ಇ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಲ್ಲರೂ ಪ್ರತಿದಿನ ಯೋಗವನ್ನು ಮಾಡುವುದರಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಇದರಿಂದ ದಿನವಿಡೀ ಕ್ರಿಯಾಶೀಲರಾಗಿ ಇರಲು ಸಾಧ್ಯ ಎಂದು ಅವರು ಹೇಳಿದರು.ಶಾಲಾ ಮೈದಾನದಲ್ಲಿ ಸೇರಿದ್ದ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗದಲ್ಲಿ ಪಾಲ್ಗೊಂಡರು. ಹಲವಾರು ವಿದ್ಯಾರ್ಥಿಗಳು ಯೋಗದ ನಾನಾ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.ಈ ಸಂದರ್ಭದಲ್ಲಿ ಯೋಗ ತರಬೇತುದಾರ ಪರಶುರಾಮ ರಾಯಬಾಗಿ ಅವರನ್ನು ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶೈಜೂಕ ಕೆ. ಆರ್. ನಾಯರ, ಹಿರಿಯ ಕಾರ್ಯಸಂಯೋಜಕಿ ದೀಪಾ ಜಂಬೂರೆ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More

ಎಂಎಲ್ಸಿ ಸುನೀಲಗೌಡ ಪಾಟೀಲರಿಂದ ಸಂಸದ ಜಿಗಜಿಣಗಿ ಅವರಿಗೆ ಮತ್ತೊಂದು ಪತ್ರ ವಿಜಯಪುರ: ವಿಜಯಪುರ ಮತ್ತು ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಮತ್ತೋಮ್ಮೆ ಪತ್ರ ಬರೆದು ಮನವಿ ಮಾಡಿದ್ದಾರೆ.ಸತತ 7ನೇ ಬಾರಿಗೆ ಸಂಸದರಾಗಿರುವ ರಮೇಶ ಜಿಗಜಿಣಗಿ ಅವರಿಗೆ 24.11.2023ರಂದು ಪತ್ರ ಬರೆದು ಈ ಕುರಿತು ಮನವಿ ಮಾಡಿದ್ದೆ. ಆದರೆ, ಅವರು ಸ್ಪಂದಿಸಲಿಲ್ಲ. ಆದರೂ, ಜಿಲ್ಲೆಯ ಮತದಾರರು ತಮ್ಮನ್ನು ಪುನರಾಯ್ಕೆ ಮಾಡಿದ್ದಾರೆ. ತಮ್ಮ ಪರ ಮತ ಹಾಕಿರುವ ಮತದಾರರ ಋಣ ತೀರಿಸುವ ಸಲುವಾಗಿಯಾದರೂ ಸಂಸದರು ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು ಶ್ರಮಿಸಬೇಕು. ಈಗಾಗಲೇ ನಮ್ಮ ನೆರೆಯ ಜಿಲ್ಲೆಗಳಾದ ಕಲಬುರಗಿ, ಬೆಳಗಾವಿ, ಧಾರವಾಡ ಸೇರಿದಂತೆ ಎಲ್ಲ ಜಿಲ್ಲೆಗಳಿಂದ ಈ ರೈಲು ಸೇವೆ ಲಭ್ಯವಿದೆ. ಆದರೆ, ಅಖಂಡ ವಿಜಯಪುರ ಜಿಲ್ಲೆಯಿಂದ ಇನ್ನೂ ವಂದೇ ಭಾರತ ರೈಲು ಪ್ರಾರಂಭವಾಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಉಭಯ ಜಿಲ್ಲೆಗಳ ಜನರಿಂದ ಸಾಕಷ್ಟು…

Read More

ಕೆಂಭಾವಿ: ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಶನಿವಾರ ಬೆಳಗ್ಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ಖಡಕ್ ಸೂಚನೆ ನೀಡಿದರು.ಸಾರ್ವಜನಿಕರು ಒಬ್ಬೊಬ್ಬರಾಗಿ ಭೇಟಿಯಾಗಿ ಹೇಳುತ್ತಿದ್ದ, ಅಹವಾಲುಗಳನ್ನು ಸಚಿವರು ಸಮಚಿತ್ತದಿಂದ ಆಲಿಸಿ, ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಮತ್ತು ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಸಿ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳಿಗೆ ತಾಕೀತು ಮಾಡಿದರು.ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಅಳಲನ್ನು ತೋಡಿಕೊಂಡ ದೃಶ್ಯ ಕಂಡು ಬಂದಿತು. ಇದೇ ವೇಳೆ ಗೃಹರಕ್ಷಕ ದಳದ ಸಿಬ್ಬಂದಿಗಳು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿದರು.ಪ್ರಮುಖರಾದ ಮಾಜಿ ಜಿಪಂ ಉಪಾಧ್ಯಕ್ಷೆ ಶಂಕ್ರಣ್ಣ ವಣಿಕ್ಯಾಳ, ಮಾಜಿ ಜಿಪಂ ಅಧ್ಯಕ್ಷೆ ಸಿದ್ದನಗೌಡ ಪೋಲೀಸ್ ಪಾಟೀಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್, ಬಸನಗೌಡ ಹೊಸಮನಿ ಯಾಳಗಿ, ಶಾಂತಗೌಡ ಪಾಟೀಲ ಮಾಲಹಳ್ಳಿ, ಸಂಜೀವರಾವ್ ಕುಲ್ಕರ್ಣಿ,…

Read More

ಮುದ್ದೇಬಿಹಾಳ: ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಬೇಕು, ಸಹ ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೈಹಿಕ ಶಿಕ್ಷಣ ಶಿಕ್ಷಕರುಗಳಿಗೆ ಒದಗಿಸುವುದು, ಮುಖ್ಯ ಶಿಕ್ಷಕರ ಮುಂಬಡ್ತಿ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ, ಅಲ್ಲಿಯವರೆಗೆ ಖಾಲಿ ಇರುವ ಸ್ಥಳದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳುವುದು, ದೈಹಿಕ ಶಿಕ್ಷಣ ಪಠ್ಯಕ್ರಮ ಇರುವುದರಿಂದ ಎಸ್‌ಎಟಿಎಸ್ ನಲ್ಲಿ ಎ ಭಾಗದಲ್ಲಿ ಸೇರ್ಪಡೆ ಮಾಡುವುದು, ದೈಹಿಕ ಶಿಕ್ಷಣ ಶಿಕ್ಷಕರ ಹೆಸರುಗಳನ್ನು ಸೇವಾ ಜೇಷ್ಠತಾ ಆಧಾರದ ಮೇಲೆ ಬರೆಯುವುದು, ದೈಹಿಕ ಶಿಕ್ಷಣ ಶಿಕ್ಷಕರ ಉನ್ನತ ವ್ಯಾಸಂಗಕ್ಕೆ ವೇತನ ಸಹಿತ ಅನುಮತಿ ನೀಡುವುದು, ಕ್ಷೇತ್ರ ಶಿಕ್ಷಣಾಧಿಕಾರಗಳ ಕಚೇರಿಯಲ್ಲಿ ದೈಹಿಕ ಶಿಕ್ಷಣ ಸಂಯೋಜಕರು ಅಥವಾ ಸಹಾಯಕ ದೈಹಿಕ ಶಿಕ್ಷಣ ಪರೀಕ್ಷಕರ ಹುದ್ದೆ ಸೃಷ್ಟಿಸಿ ಮುಂಬಡ್ತಿ ನೀಡುವುದು, ಪ್ರತಿಯೊಂದು ಪ್ರಾಥಮಿಕ ಶಾಲೆಯಲ್ಲಿ ಕಡ್ಡಾಯವಾಗಿ ದೈಹಿಕ ಶಿಕ್ಷಕರ ನೇಮಕಾತಿಯನ್ನು ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದವರು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಮೂಲಕ ಬೆಂಗಳೂರಿನ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ…

Read More

ಇಂಡಿ: ಯೋಗ ನಮ್ಮ ಆರೋಗ್ಯದ ಬದುಕಿನ ಒಂದು ಭಾಗವಾಗಿದ್ದು, ನಮ್ಮ ಮನಸ್ಸು ಮತ್ತು ದೇಹವನ್ನು ಚೈತನ್ಯಗೊಳಿಸುವಲ್ಲಿ ಯೋಗ ಸಹಕಾರಿಗಾಗುತ್ತದೆ ಎಂದು ಎಸ್.ಜಿ.ಬಾಗವಾನ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ಅಲ್ಪ ಸಂಖ್ಯಾತರ ಬ್ಯಾಂಕಿನ ಅಧ್ಯಕ್ಷ ಸತ್ತಾರ ಬಾಗವಾನ ಹೇಳಿದರು.ಪಟ್ಟಣದ ಎಸ್.ಜಿ.ಬಾಗವಾನ ಪ್ರೌಢಶಾಲೆಯಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಯೋಗ ಮಾಡುವದರಿಂದ ಸಕಾರಾತ್ಮಕ ಶಕ್ತಿ ವೃದ್ಧಿ ಸಾದ್ಯ. ಯೋಗಾಭ್ಯಾಸದಿಂದ ದಿನಪೂರ್ತಿ ಚಟುವಟಿಕೆಯಿಂದ ಇರಬಹುದು ಎಂದರು.ಕಾರ್ಯದರ್ಶಿ ಅಬ್ದುಲ್ ಬಾಗವಾನ ಮಾತನಾಡಿ ನಮಗೂ ಮತ್ತು ಸಮಾಜದ ಒಳತಿಗೂ ಯೋಗ ಬಹು ಮುಖ್ಯವಾದುದು, ಆದ್ದರಿಂದ ನೀವುಗಳು ನಿಮ್ಮ ಬದುಕಿನಲ್ಲಿ ಯೋಗವನ್ನು ರೂಢಿಸಿಕೊಂಡು ಆರೋಗ್ಯಕರ ಜೀವನ ಪಡೆಯಿರಿ ಎಂದರು.ಮುಖ್ಯ ಗುರು ವಸೀಮ್ ಬೋಸ್ಕೆ, ರೂಬಿನಾ ಬಾಗವಾನ, ರಾಜೇಂದ್ರ ಪವಾರ, ದೈಹಿಕ ಶಿಕ್ಷಕ ಶಿವಲಿಂಗ ಓಂಕಾರಿ, ಶ್ರೀಮತಿ ಶಾಕಿರಾ, ಆರತಿ, ತೈಯಬಾನು, ಎನ್.ಎಂ.ಕೋಟ್ನಾಳ,ಮತ್ತಿತರಿದ್ದರು.

Read More

ದೇವರಹಿಪ್ಪರಗಿ: ಯೋಗದಿಂದ ಸದೃಡ ದೇಹ ಹಾಗೂ ಮನಸ್ಸು ಹೊಂದಲು ಸಾಧ್ಯ. ಆದ್ದರಿಂದ ಪ್ರತಿದಿನ ಯೋಗ ಮಾಡಿ ರೋಗದಿಂದ ಮುಕ್ತರಾಗೋಣ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ ಹೇಳಿದರು.ತಾಲ್ಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರವಾಡಗಿ ಗ್ರಾಮದ ಅಮೃತ ಸರೋವರ (ಕೆರೆ) ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಗ್ರಾಮಸ್ಥರಲ್ಲಿ ಯೋಗದ ಮಹತ್ವ ತಿಳಿಸಿ ಮಾತನಾಡಿದರು.ಯೋಗಕ್ಕೆ ಅಧಮ್ಯ ಶಕ್ತಿಯಿದೆ. ಇಂದಿನ ಆಧುನಿಕ ಯುಗದ ಒತ್ತಡಗಳಿಂದ ಮುಕ್ತರಾಗಲು ಯೋಗವೊಂದೇ ಸಹಕಾರಿಯಾಗಬಲ್ಲದು ಎಂದರು.ಪಿಡಿಓ ಎಮ್.ಎನ್.ಕತ್ತಿ ಮಾತನಾಡಿ, ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಸರೋವರದ ದಡದಲ್ಲಿ ಯೋಗಾಭ್ಯಾಸ ಮಾಡಿ ಜನರಲ್ಲಿ ಯೋಗದ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸುವುದಾಗಿದೆ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಬಿರಾದಾರ, ಗ್ರಾಮ ಪಂಚಾಯಿತಿ ಸದಸ್ಯರಾದ ಅಪ್ಪು ಪೇಟೆದ, ಮಹಾಂತೇಶ ನಾಗರಬೆಟ್ಟ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಹಣಮಂತ್ರಾಯ ಬಿರಾದಾರ, ಪಂಚಾಯಿತಿ ಕಾರ್ಯದರ್ಶಿ ಎ.ಎಂ.ಅಡಳಿ, ಶಿಕ್ಷಕ ಶ್ರೀಕಾಂತ ಕೊಡೇಕಲ್, ವೈ.ಎಸ್.ಬಜಂತ್ರಿ, ಶಿವಾನಂದ ಬಿರಾದಾರ, ಮಹಾದೇವಪ್ಪ ಡೋಮನಾಳ, ಯಮನೂರಿ ತಳವಾರ,…

Read More