ದೇವರಹಿಪ್ಪರಗಿ: ಯೋಗದಿಂದ ಸದೃಡ ದೇಹ ಹಾಗೂ ಮನಸ್ಸು ಹೊಂದಲು ಸಾಧ್ಯ. ಆದ್ದರಿಂದ ಪ್ರತಿದಿನ ಯೋಗ ಮಾಡಿ ರೋಗದಿಂದ ಮುಕ್ತರಾಗೋಣ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ ಹೇಳಿದರು.
ತಾಲ್ಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರವಾಡಗಿ ಗ್ರಾಮದ ಅಮೃತ ಸರೋವರ (ಕೆರೆ) ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಗ್ರಾಮಸ್ಥರಲ್ಲಿ ಯೋಗದ ಮಹತ್ವ ತಿಳಿಸಿ ಮಾತನಾಡಿದರು.
ಯೋಗಕ್ಕೆ ಅಧಮ್ಯ ಶಕ್ತಿಯಿದೆ. ಇಂದಿನ ಆಧುನಿಕ ಯುಗದ ಒತ್ತಡಗಳಿಂದ ಮುಕ್ತರಾಗಲು ಯೋಗವೊಂದೇ ಸಹಕಾರಿಯಾಗಬಲ್ಲದು ಎಂದರು.
ಪಿಡಿಓ ಎಮ್.ಎನ್.ಕತ್ತಿ ಮಾತನಾಡಿ, ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಸರೋವರದ ದಡದಲ್ಲಿ ಯೋಗಾಭ್ಯಾಸ ಮಾಡಿ ಜನರಲ್ಲಿ ಯೋಗದ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸುವುದಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಬಿರಾದಾರ, ಗ್ರಾಮ ಪಂಚಾಯಿತಿ ಸದಸ್ಯರಾದ ಅಪ್ಪು ಪೇಟೆದ, ಮಹಾಂತೇಶ ನಾಗರಬೆಟ್ಟ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಹಣಮಂತ್ರಾಯ ಬಿರಾದಾರ, ಪಂಚಾಯಿತಿ ಕಾರ್ಯದರ್ಶಿ ಎ.ಎಂ.ಅಡಳಿ, ಶಿಕ್ಷಕ ಶ್ರೀಕಾಂತ ಕೊಡೇಕಲ್, ವೈ.ಎಸ್.ಬಜಂತ್ರಿ, ಶಿವಾನಂದ ಬಿರಾದಾರ, ಮಹಾದೇವಪ್ಪ ಡೋಮನಾಳ, ಯಮನೂರಿ ತಳವಾರ, ಮೋದಿನಸಾಬ್ ವಾಲಿಕಾರ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಕ್ಕಳು, ಗ್ರಾ.ಪಂ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

