ಮುದ್ದೇಬಿಹಾಳ: ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಬೇಕು, ಸಹ ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೈಹಿಕ ಶಿಕ್ಷಣ ಶಿಕ್ಷಕರುಗಳಿಗೆ ಒದಗಿಸುವುದು, ಮುಖ್ಯ ಶಿಕ್ಷಕರ ಮುಂಬಡ್ತಿ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ, ಅಲ್ಲಿಯವರೆಗೆ ಖಾಲಿ ಇರುವ ಸ್ಥಳದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳುವುದು, ದೈಹಿಕ ಶಿಕ್ಷಣ ಪಠ್ಯಕ್ರಮ ಇರುವುದರಿಂದ ಎಸ್‌ಎಟಿಎಸ್ ನಲ್ಲಿ ಎ ಭಾಗದಲ್ಲಿ ಸೇರ್ಪಡೆ ಮಾಡುವುದು, ದೈಹಿಕ ಶಿಕ್ಷಣ ಶಿಕ್ಷಕರ ಹೆಸರುಗಳನ್ನು ಸೇವಾ ಜೇಷ್ಠತಾ ಆಧಾರದ ಮೇಲೆ ಬರೆಯುವುದು, ದೈಹಿಕ ಶಿಕ್ಷಣ ಶಿಕ್ಷಕರ ಉನ್ನತ ವ್ಯಾಸಂಗಕ್ಕೆ ವೇತನ ಸಹಿತ ಅನುಮತಿ ನೀಡುವುದು, ಕ್ಷೇತ್ರ ಶಿಕ್ಷಣಾಧಿಕಾರಗಳ ಕಚೇರಿಯಲ್ಲಿ ದೈಹಿಕ ಶಿಕ್ಷಣ ಸಂಯೋಜಕರು ಅಥವಾ ಸಹಾಯಕ ದೈಹಿಕ ಶಿಕ್ಷಣ ಪರೀಕ್ಷಕರ ಹುದ್ದೆ ಸೃಷ್ಟಿಸಿ ಮುಂಬಡ್ತಿ ನೀಡುವುದು, ಪ್ರತಿಯೊಂದು ಪ್ರಾಥಮಿಕ ಶಾಲೆಯಲ್ಲಿ ಕಡ್ಡಾಯವಾಗಿ ದೈಹಿಕ ಶಿಕ್ಷಕರ ನೇಮಕಾತಿಯನ್ನು ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದವರು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಮೂಲಕ ಬೆಂಗಳೂರಿನ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಬಿ.ವೈ.ಕವಡಿ, ಎಸ್. .ಎಸ್‌ಎಲ್‌ಸಿನೋಡಲ್ ಅಧಿಕಾರಿ ಎಚ್.ಎ.ಮೇಟಿ, ಸಂಘದ ಅಧ್ಯಕ್ಷ ಎಸ್.ಎಸ್.ಲಮಾಣಿ, ಗೌರವ ಅಧ್ಯಕ್ಷ ಸಿ.ಎಸ್.ಮನಗೂಳಿ, ಕಾರ್ಯದರ್ಶಿ ಎಂ.ಎಸ್.ನಾಟಿಕರ, ಉಪಾಧ್ಯಕ್ಷ ಬಿ.ಎಸ್.ವಂದಾಲ, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎ.ಸಿ .ಕೆರೂರ, ಎಸ್.ಆರ್.ಸುಲ್ಪಿ, ವಿ.ಎಸ್.ತೆಗ್ಗಿ, ಬಸವರಾಜ್ ರಾಮೋಡಗಿ, ಬಿ.ಎಸ್.ಭಜಂತ್ರಿ, ಎಸ್.ಎಸ್.ಹಿರೇಮಠ, ಎಸ್.ಎಸ್.ಅಂಗಡಿ, ಎಸ್.ಎಂ.ಇದ್ದಲಗಿ, ಎನ್.ಎಂ.ಮುದಗಲ್, ವಿ.ಜಿ.ನಾಗರಾಳ, ಎಂ.ಎಸ್.ಪಾಟೀಲ್, ಮಲ್ಲು ರಾಯಗೊಂಡ, ಸಂಜು ರಾಥೋಡ್, ಸುರೇಶ್ ಆಲೂರ, ಬಿ.ಎಸ್.ಪಣದಕಟ್ಟಿ ಸೇರಿದಂತೆ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು ಇದ್ದರು.
Subscribe to Updates
Get the latest creative news from FooBar about art, design and business.
ಬೇಡಿಕೆ ಈಡೇರಿಕೆಗೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಆಯುಕ್ತರಿಗೆ ಮನವಿ
Related Posts
Add A Comment

