ವಿಜಯಪುರ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶುಕ್ರವಾರ ತಿಕೋಟಾ ಪಟ್ಟಣದಲ್ಲಿರುವ ಬಿಎಲ್‌ಡಿಇ ಸಂಸ್ಥೆಯ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ 10 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಯೋಗ ಶಿಕ್ಷಕ ಬಸವರಾಜ ದೇವನಾಯ್ಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯೋಗವು ಮೆದುಳಿನ ರಚನೆ ಮತ್ತು ಕಾರ್ಯ ಚಟುವಟಿಕೆಗಳ ಮೇಲೆ ಗಮನಾರ್ಹ ಪ್ರಭಾವ ಭೀರುತ್ತದೆ. ಅಲ್ಲದೇ, ಜನರಲ್ಲಿ ಸ್ಮರಣ ಶಕ್ತಿ ಹೆಚ್ಚಲು ಮತ್ತು ಏಕಾಗ್ರತೆ ಸಾಧಿಸಲು ಅನುಕೂಲ ಮಾಡಿಕೊಡುತ್ತದೆ ಎಂದು ಯೋಗದ ಪ್ರಾಮುಖ್ಯತೆ ಮತ್ತು ಪ್ರಯೋಜನಗಳ ಬಗ್ಗೆ ವಿವರಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ದಾಪುರ ಮಾತನಾಡಿ, ದೈನಂದಿನ ಜೀವನದಲ್ಲಿ ಯೋಗ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಾಗಿದೆ. ಯೋಗದಿಂದ ನಾವು ಏಕಾಗ್ರತೆ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬೆಳೆಸಿಕೊಳ್ಳಬಹುದು. ಯೋಗವು ವಿಶ್ವಾದ್ಯಂತ ಅಂಗೀಕರಿಸಲ್ಪಟ್ಟಿರುವ ಸಾಂಪ್ರದಾಯಿಕ ಔಷಧ ಪದ್ಧತಿಗಳಲ್ಲಿ ಅತ್ಯಂತ ಹಳೆಯದಾಗಿದೆ ಎಂದು ಹೇಳಿದರು.
ಇದೇ ವೇಳೆ ಅವರು ಯೋಗದ ನಾನಾ ಭಂಗಿಗಳು ಮತ್ತು ಆಸನಗಳನ್ನು ಪ್ರದರ್ಶಿಸಿದರು.
ಈ ವಿಶೇಷ ಸಮಾರಂಭದಲ್ಲಿ ಯೋಗ ಕಾರ್ಯಕ್ರಮದ ಆರಂಭದಲ್ಲಿ 55 ಶುಶ್ರೂಷಾ ವಿದ್ಯಾರ್ಥಿಗಳಲ್ಲಿ ಯೋಗ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಜ್ಞಾನವನ್ನು ನಿರ್ಣಯಿಸಲು ರಚನಾತ್ಮಕ ಜ್ಞಾನ ಪ್ರಶ್ನಾವಳಿ ಮತ್ತು ವಾರ್ವಿಕ್-ಎಡಿನ್ಬರ್ಗ್ ಮಾನಸಿಕ ಯೋಗಕ್ಷೇಮ ಮಾಪಕವನ್ನು ಬಳಸಿಕೊಂಡು ಸಂಶೋಧನಾ ಪರೀಕ್ಷೆಯನ್ನು ನಡೆಸಲಾಯಿತು.
ಈ ಸಂಧರ್ಭದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜಕ ಆಕಾಶ ಜಾಧವ, ದೈಹಿಕ ಶಿಕ್ಷಕ ಬಿ. ಆರ್. ದೇಸಾಯಿ, ಕಾಲೇಜಿನ ಭೋದಕ, ಭೋದಕರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಸ್ವಾಗತ ಗೀತೆ ಹಾಡಿದರು. ಅಶ್ವಿನಿ ಮೇಡೇದಾರ, ಪ್ರೇಮಾ ಕಾಂಬಳೆ ಸ್ವಾಗತಿಸಿದರು. ಪ್ರೇಮಾ ಗೊಳಸಂಗಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಸ್ಮರಣ ಶಕ್ತಿ ಹೆಚ್ಚಲು, ಏಕಾಗ್ರತೆ ಸಾಧಿಸಲು ಯೋಗ ಅನುಕೂಲ :ದೇವನಾಯ್ಕ
Related Posts
Add A Comment

