ಇಂಡಿ: ಯೋಗ ನಮ್ಮ ಆರೋಗ್ಯದ ಬದುಕಿನ ಒಂದು ಭಾಗವಾಗಿದ್ದು, ನಮ್ಮ ಮನಸ್ಸು ಮತ್ತು ದೇಹವನ್ನು ಚೈತನ್ಯಗೊಳಿಸುವಲ್ಲಿ ಯೋಗ ಸಹಕಾರಿಗಾಗುತ್ತದೆ ಎಂದು ಎಸ್.ಜಿ.ಬಾಗವಾನ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ಅಲ್ಪ ಸಂಖ್ಯಾತರ ಬ್ಯಾಂಕಿನ ಅಧ್ಯಕ್ಷ ಸತ್ತಾರ ಬಾಗವಾನ ಹೇಳಿದರು.
ಪಟ್ಟಣದ ಎಸ್.ಜಿ.ಬಾಗವಾನ ಪ್ರೌಢಶಾಲೆಯಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಯೋಗ ಮಾಡುವದರಿಂದ ಸಕಾರಾತ್ಮಕ ಶಕ್ತಿ ವೃದ್ಧಿ ಸಾದ್ಯ. ಯೋಗಾಭ್ಯಾಸದಿಂದ ದಿನಪೂರ್ತಿ ಚಟುವಟಿಕೆಯಿಂದ ಇರಬಹುದು ಎಂದರು.
ಕಾರ್ಯದರ್ಶಿ ಅಬ್ದುಲ್ ಬಾಗವಾನ ಮಾತನಾಡಿ ನಮಗೂ ಮತ್ತು ಸಮಾಜದ ಒಳತಿಗೂ ಯೋಗ ಬಹು ಮುಖ್ಯವಾದುದು, ಆದ್ದರಿಂದ ನೀವುಗಳು ನಿಮ್ಮ ಬದುಕಿನಲ್ಲಿ ಯೋಗವನ್ನು ರೂಢಿಸಿಕೊಂಡು ಆರೋಗ್ಯಕರ ಜೀವನ ಪಡೆಯಿರಿ ಎಂದರು.
ಮುಖ್ಯ ಗುರು ವಸೀಮ್ ಬೋಸ್ಕೆ, ರೂಬಿನಾ ಬಾಗವಾನ, ರಾಜೇಂದ್ರ ಪವಾರ, ದೈಹಿಕ ಶಿಕ್ಷಕ ಶಿವಲಿಂಗ ಓಂಕಾರಿ, ಶ್ರೀಮತಿ ಶಾಕಿರಾ, ಆರತಿ, ತೈಯಬಾನು, ಎನ್.ಎಂ.ಕೋಟ್ನಾಳ,ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

