Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿಜ್ಜರಗಿ ಗ್ರಾಪಂಗೆ ಭೇಟಿ ನೀಡಿದ ತಿಕೋಟಾ ತಾಪಂ ಇಒ ಬಸವರಾಜ ಐನಾಪುರ ಪ್ರಶಂಸೆ ತಿಕೋಟಾ: ತಾಲೂಕಿನ ಬಿಜ್ಜರಗಿ ಗ್ರಾಮ ಪಂಚಾಯತಿಗೆ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಸ್ವಚ್ಛ ಭಾರತ ಅಭಿಯಾನ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಆರಂಭದಲ್ಲಿ ಮನರೇಗಾ ಯೋಜನೆಯ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿಯಲ್ಲಿ ಸಂಪೂರ್ಣವಾಗಿ ವಿಕಲಚೇತನರು ಕೆಲಸ ನಿರ್ವಹಣೆ ಮಾಡುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿಯೇ ಮನರೇಗಾ ಯೋಜನೆಯಡಿ ನೊಂದಣಿಯಾದ ವಿಶೇಷಚೇತನರಿಗೆ ಕೆಲಸ ನೀಡುವಲ್ಲಿ ಹಾಗೂ ವಿಶೇಷಚೇತನರ ಮಾನವ ದಿನಗಳ ಸೃಜನೆ ಮಾಡುವಲ್ಲಿ ನಮ್ಮ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಇದು ನಮಗೆ ಮತ್ತು ನಿಮಗೆಲ್ಲಾ ಹೆಮ್ಮೆಯ ವಿಷಯ ಎಂದರು. ಕೆಲಸ ನಿರ್ವಹಣೆ ಮಾಡುತ್ತಿರುವ ಎಲ್ಲ ವಿಶೇಷಚೇತನರು ಸಂಪೂರ್ಣ ೧೦೦ ದಿನಗಳ ಕೆಲಸ ನಿರ್ವಹಿಸಲು ತಿಳಿಸಿದರು. ಯೋಜನೆಯಡಿ ತಾಲೂಕು ವ್ಯಾಪ್ತಿಯಲ್ಲಿ ೪೭೬ ವಿಶೇಷಚೇತನರಿಗೆ ಉದ್ಯೋಗ ಖಾತ್ರಿ ಕಾರ್ಡ್ ನೀಡಲಾಗಿದ್ದು, ಈಗಾಗಲೇ…
ಮುದ್ದೇಬಿಹಾಳ: ಮಳೆಗಾಲ ಪ್ರಾರಂಭವಾಗಿದ್ದು ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಕರುಳು ಬೇನೆ, ಕಾಲರ, ಕಾಮಾಲೆ, ವಿಷಮಶೀತ ಜ್ವರ ಇತ್ಯಾದಿ ಹಾಗೂ ಬಹು ದಿನಗಳವರೆಗೆ ನೀರಿನಲ್ಲಿ ಈಡೀಸ್ ಸೊಳ್ಳೆ ಸಂತಾನೋತ್ಪತ್ತಿ ಮಾಡುವುದರಿಂದ ಹಾಗೂ ಸೊಳ್ಳೆಗಳಿಂದ ಹರಡುಬಹುದಾದ ಡೆಂಗ್ಯೂ, ಚಿಕುನಗುನ್ಯ ಇನ್ನಿತರ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಕೂಡಲೇ ಎಲ್ಲ ಪಂಚಾಯತನ ಅಭಿವೃದ್ಧಿ ಅಧಿಕಾರಿಗಳು ಜಾಗೃತರಾಗಬೇಕು ಎಂದು ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಡಿದರು.ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಂದ ನಿಯಮಿತವಾಗಿ ಈಡಿಸ್ ಲಾರ್ವ ಸಮೀಕ್ಷೆ ಹಾಗೂ ಕುಡಿಯುವ ನೀರಿನ ಮೂಲಗಳಿಂದ ನೀರಿನ ಮಾದರಿಗಳು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ರೋಗಗಳು ಹರಡದಂತೆ ಗ್ರಾಮ ಪಂಚಾಯತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಿದೆ. ಎಲ್ಲ ಕುಡಿಯುವ ನೀರಿನ ಟ್ಯಾಂಕರ್ ಗಳನ್ನು ಕೋರಿನೆಷನ್ ಮಾಡಿಸಿ (ಬೀಚಿಂಗ್ ಪೌಡರ್ ಹಾಕಿಸಿ) ಶುದ್ಧ ಕುಡಿಯುವ ನೀರನ್ನು ಒದಗಿಸುವುದು, ಕೈ ಪಂಪುಗಳು…
ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆ ರಸ್ತಾರೋಕ್ ಮಾಡಿದ ವಿದ್ಯಾರ್ಥಿಗಳು | ಸಂಚಾರ ಅಸ್ತವ್ಯಸ್ತ ಇಂಡಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಬುಧವಾರ ವಿಜಯಪುರ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತಾರೋಕ್ ಮಾಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಎಸ್.ಜಿ. ಬಿರಾದಾರ ಅವರಿಗೆ ಮನವಿ ನೀಡಿದರು.ಸುಮಾರು ಒಂದು ಗಂಟೆಗಳ ಕಾಲ ರಸ್ತೆಗಳ ಮೇಲೆ ಬಸ್ಸುಗಳು ಹಾಗೂ ಸಾರ್ವಜನಿಕರ ವಾಹನಗಳು ಅಲ್ಲೇ ನಿಂತಿದ್ದರಿಂದ. ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಗರ ಘಟಕದ ಕಾರ್ಯದರ್ಶಿ ಸಚಿನ್ ಧಾನಗೊಂಡ ಮಾತನಾಡಿ, ಇಂಡಿ ತಾಲೂಕಿನಾದ್ಯಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪಡೆಯಲು ಪಟ್ಟಣಕೆ ನಿತ್ಯ ಬರುತ್ತಾರೆ. ವಿದ್ಯಾರ್ಥಿಗಳ ತರಗತಿಗಳು ಪ್ರಾರಂಭವಾದ ನಂತರ ವಿದ್ಯಾರ್ಥಿಗಳ ಬರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು, ಸರಿಯಾದ ಸಮಯಕ್ಕೆ ಬಸ್ ಪಾಸ್ ಹಾಗೂ ಇಂಡಿಯಿಂದ ವಿಜಯಪೂರ, ವಿಜಯಪುರದಿಂದ ಇಂಡಿಗೆ ಬರುವ ಬಸ್ಸುಗಳು ಆದರ್ಶ ವಿದ್ಯಾಲಯದಲ್ಲಿ ನಿಲ್ಲುವುದಿಲ್ಲ. ಆದರಿಂದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗು ಬರಲು ನಿತ್ಯ ತೊಂದರೆ ಉಂಟಾಗುತ್ತಿದ್ದು. ಆದ್ದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ…
ವಿಜಯಪುರ: ಮಾದಕ ದ್ರವ್ಯ ಸೇವನೆ ನಮ್ಮ ದೇಶದ ಅತೀ ದೊಡ್ಡ ಪಿಡುಗು. ಈ ಪಿಡುಗನ್ನು ತಳ ಮಟ್ಟದಿಂದ ತೊಡೆದು ಹಾಕುವ ಪ್ರಯತ್ನ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇವನೆಗೆ ಯುವ ಜನತೆ ಬಲಿಯಾಗುತ್ತಿದ್ದು, ಯುವಕರ ಜೀವನವೇ ಶೂನ್ಯವಾಗುತ್ತಿದೆ. ಶಾಲಾ-ಕಾಲೇಜುಗಳ ಸುತ್ತಲೂ ಗಾಂಜಾ ಸೇರಿದಂತೆ ಮಾದಕ ವ್ಯಸನ ಸೇವನೆ ಹೆಚ್ಚಾಗುತ್ತಿದ್ದು, ಯುವ ಜನರು ಇದನ್ನು ಸೇವನೆಯನ್ನು ಬಹಿಸ್ಕರಿಸಬೇಕು ಎಂದು ವಿಜಯಪುರ ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಐ.ಎಂ.ದುಂಡಸಿಯ ಹೇಳಿದರು.ಬುಧವಾರದಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಆದರ್ಶ ನಗರ ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟದ ಕುರಿತು ಜಾಗೃತಿ’ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು. ಮದ್ಯಪಾನ ವ್ಯವಸ್ಥೆ ಇಡೀ ಸಮಾಜವನ್ನೇ ಹಾಳು ಮಾಡುತ್ತಿದೆ. ಮದ್ಯಪಾನ, ಮಾದಕ ದ್ರವ್ಯ ಸೇವನೆ ಮುಂತಾದವುಗಳು ನಮ್ಮ ಸಮಾಜದ ಕೆಟ್ಟ ವ್ಯವಸ್ಥೆಯಾಗಿದೆ. ಯುವಜನರು ಇಂತಹ ದುಃಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ. ಮಕ್ಕಳು…
ಮುದ್ದೇಬಿಹಾಳ: ಅರಣ್ಯ ಇಲಾಖೆಯ ಗಿಡಗಳನ್ನು ನೆಡುವ ಕೆಲಸಕ್ಕೆ ಅಡ್ಡಿ ಪಡಿಸುವವರೇ ಹೆಚ್ಚು. ನಮ್ಮ ಹೊಲದ ಬಾಜೂ ಗಿಡ ಹಚ್ಚಬ್ಯಾಡ್ರಿ, ಕಿತ್ತಿ ಒಗಿತಿವಿ ನೋಡ್ರಿ ಅನ್ನೋರು ಜಾಸ್ತಿ ಇರುವಾಗ, ಬನ್ನಿ, ನಮ್ಮ ಕಡೆ ಗಿಡಗಳನ್ನು ಹಚ್ರಿ ಎನ್ನುವವರನ್ನು ಕಂಡರೆ ನಮಗೆ ಬಹಳ ಸಂತೋಷವಾಗುತ್ತದೆ ಎಂದು ತಾಲ್ಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ ಹೇಳಿದರು.ತಾಲೂಕಿನ ಸರೂರ ಗ್ರಾಮದ ರೇವಣಸಿದ್ದೇಶ್ವರ ಹಿರೇಗುಡ್ಡದಲ್ಲಿ ಅರಣ್ಯ ಇಲಾಖೆ, ಹಸಿರು ತೋರಣ ಗೆಳೆಯರ ಬಳಗ ಹಾಗೂ ಸರೂರ ಗ್ರಾಮಸ್ಥರು ಹಮ್ಮಿಕೊಂಡ ಸರೂರ ಗುಡ್ಡ ಉಳಿಸಿ ಅಭಿಯಾನದಂಗವಾಗಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಅರಣ್ಯ ಇಲಾಖೆ ಈ ವರ್ಷ ಮಾಡಬೇಕಾದ ಯೋಜನೆಗಳನ್ನು ಹಿಂದಿನ ವರ್ಷವೇ ಮಾಡಿರುತ್ತದೆ. ಆದಾಗ್ಯೂ ಸ್ಥಳ ಬದಲಾವಣೆ ಮಾಡಿ ಯೋಜನೆ ಅನುಷ್ಠಾನ ಮಾಡಲು ಯತ್ನಿಸುತ್ತೇವೆ. ನಮ್ಮೆಲ್ಲರ ಉದ್ದೇಶ ಗಿಡಗಳನ್ನು ನೆಡುವುದಾಗಿದೆ. ಜನರ ಸಹಕಾರ, ಬೆಂಬಲ ದೊರೆತರೆ ಅದು ಯಶಸ್ಸು ಕಾಣುತ್ತದೆ ಎಂದರು.ಸಾಹಿತಿ ಸಿದ್ದನಗೌಡ ಬಿಜ್ಜೂರ ಮಾತನಾಡಿ, ಸರೂರ ಗ್ರಾಮವು ರೇವಣಸಿದ್ದೇಶ್ವರರ ಮೂಲಪೀಠವಾಗಿ ನಾಡಿಗೇ ಚಿರಪರಿಚಿತ. ಒಂದು ಕಾಲದಲ್ಲಿ ಸಾವಿರಾರು ಗಿಡಗಳಿಂದ…
ಬಸವನಬಾಗೇವಾಡಿ: ಯುವಜನಾಂಗ ಮಾದಕ ವಸ್ತುಗಳಿಂದ ದೂರವಿರಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳನ್ನು ಸಾಗಾಣಿಕೆ ಹಾಗೂ ಮಾರಾಟ ಮಾಡಬಾರದು. ಈ ವಸ್ತುಗಳನ್ನು ಸಾಗಾಣಿಕೆ, ಮಾರಾಟ ಮಾಡುವವರು ಕಂಡುಬಂದರೆ ಅಂತಹವರ ಮೇಲೆ ಪೊಲೀಸ್ ಇಲಾಖೆಯು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಸ್ಥಳೀಯ ಪಿಐ ವಿಜಯ ಮುರಗುಂಡಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆ, ಕಾಲೇಜಿನ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟ ನಿಷೇಧ ಕುರಿತು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನರು ಕ್ಷಣಿಕ ಸುಖಕ್ಕಾಗಿ ಸೇವಿಸುವ ಮಾದಕ ವಸ್ತುಗಳು ಆರೋಗ್ಯ ಹಾಳು ಮಾಡುವ ಜೊತೆಗೆ ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಯಾರೂ ಕೂಡ ಮಾದಕ ವಸ್ತುಗಳ ಸೇವನೆಯ ಬಲೆಗೆ ಬೀಳಬಾರದು. ಮಾದಕ ವಸ್ತುಗಳ ಸೇವನೆ ಸಾವಿಗೆ ಆಹ್ವಾನ ನೀಡಿದ್ದಂತೆ. ವ್ಯಸನಕ್ಕೆ ಬಲಿಯಾದರೆ ವ್ಯಕ್ತಿ ಹಣ, ಸಮಯ, ಜೀವನವನ್ನೇ ವ್ಯರ್ಥ ಮಾಡಿಕೊಳ್ಳುತ್ತಾನೆ. ನಮಗೆ ದೊರೆತಿರುವ ಜೀವನ ಅಮೂಲ್ಯವಾಗಿದೆ. ಇದನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ…
ಬಸವನಬಾಗೇವಾಡಿ: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ೫೧೫ನೇ ಜಯಂತಿಯನ್ನು ಜೂ. ೨೭ ರಂದು ಬೆಳಗ್ಗೆ ೧೦ ಗಂಟೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ಆಚರಿಸಿದ ನಂತರ ಬಸವನಬಾಗೇವಾಡಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿರುವ ನಾಡಪ್ರಭು ಕೆಂಪೇಗೌಡ ಅವರ ೫೧೫ ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯಂಗವಾಗಿ ಬುಧವಾರ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ತಹಸೀಲ್ದಾರ ಕಚೇರಿಯಲ್ಲಿಯೂ ಮೊದಲು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುವುದು. ನಂತರ ತಾಲೂಕಾಡಳಿದಿಂದ ಸ್ಥಳೀಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಕಾರ್ಯಕ್ರಮಕ್ಕೆ ತೆರಳುವದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜವಳಿ, ಕಬ್ಬು, ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ, ಬೃಹತ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ…
ಬಸವನಬಾಗೇವಾಡಿ: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ೨೦೨೪-೨೫ ಸಾಲಿಗೆ ಶಾಲಾ ಸುಧಾರಣಾ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಗೊಂಡ ಬಸವರಾಜ ಶೆಂಡೆ, ಮಹಿಳಾ ಸದಸ್ಯೆಯಾಗಿ ನೇಮಕಗೊಂಡ ದೀಪಾ ನಾಯ್ಕೋಡಿ ಅವರನ್ನು ಮಂಗಳವಾರ ಸಂಜೆ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಶ್ರೀಮಠದಲ್ಲಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಶ್ರೀಮಠದ ಶಿಷ್ಯ ಬಳಗದಲ್ಲಿರುವ ಇಬ್ಬರನ್ನು ಕಾಲೇಜಿನ ಸುಧಾರಣಾ ಸಮಿತಿಗೆ ನೇಮಕ ಮಾಡಿರುವದು ಸಂತಸದಾಯಕ ಸಂಗತಿ. ನೂತನ ಸಮಿತಿ ಸದಸ್ಯರು ಕಾಲೇಜಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಕಾಲೇಜಿನಲ್ಲಿ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಳು ನಡೆಯುವಂತೆ ಶ್ರಮಿಸಬೇಕೆಂದರು.ಈ ಸಂದರ್ಭದಲ್ಲಿ ಸಂಗಪ್ಪ ಡಂಬಳ, ಬಸವರಾಜ ಗಚ್ಚಿನವರ, ಬಸವರಾಜ ಕಿಣಗಿ, ಲಕ್ಷ್ಮೀ ನಾಯ್ಕೋಡಿ, ಚಂದ್ರಶೇಖರ ಗೊಳಸಂಗಿ, ಗಿರಿಮಲ್ಲಪ್ಪ ಮೇಟಿ, ವಿರೇಶ ಹಿರೇಮಠ ಇತರರು ಇದ್ದರು.
ಬಸವನಬಾಗೇವಾಡಿ: ಪಟ್ಟಣದಲ್ಲಿರುವ ಉತ್ತರಾದಿ ಮಠಕ್ಕೆ ಮಂಗಳವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಉತ್ತರಾದಿ ಮಠಾಧೀಶರಾದ ಪರಮಪೂಜ್ಯ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಭೇಟಿ ನೀಡಿದರು.ಶ್ರೀಮಠದ ಅಧ್ಯಕ್ಷ ವಸಂತಾಚಾರ್ಯ ಇಂಗಳೇಶ್ವರ ಹಾಗೂ ಅರ್ಚಕ ವಾದಿರಾಜಾಚಾರ್ಯ ಯಜುರ್ವೇದಿ ಅವರು ಜಯಘೋಷಗಳ ಮೂಲಕ ಗೌರವಪೂರ್ವಕವಾಗಿ ಶ್ರೀಗಳನ್ನು ಬರಮಾಡಿಕೊಂಡರು.ಶ್ರೀಮಠದಲ್ಲಿರುವ ಚತುಷ್ಟ ಯತಿಗಳ ವೃಂದಾವನಕ್ಕೆ ಶ್ರೀಗಳು ಮಂಗಳಾರತಿ ಮಾಡಿ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು. ಶ್ರೀಮಠದ ಕಾರ್ಯಚಟುವಟಿಕೆಗಳ ಬಗ್ಗೆ ಕೆಲ ಕಾಲ ಭಕ್ತರೊಂದಿಗೆ ಚರ್ಚಿಸಿದರು. ನಂತರ ಉಪಸ್ಥಿತ ಸದ್ಭಕ್ತರಿಗೆ ಫಲ ಮಂತ್ರಾಕ್ಷತೆಯನ್ನು ನೀಡಿ ಅನುಗ್ರಹಿಸಿದರು.ಈ ಸಂದರ್ಭದಲ್ಲಿ ಪೂಜ್ಯ ನರಹರಿಆಚಾರ್ಯ ಜೋಶಿ, ಕಾರ್ಯದರ್ಶಿ ವಸಂತರಾವ ಕುಲಕರ್ಣಿ, ಹಿರಿಯರಾದ ರಾಮಾಚಾರ್ಯ ಜೋಶಿ, ವಿಠ್ಠಲರಾವ ಕುಲಕರ್ಣಿ, ಪ್ರಲ್ಹಾದರಾವ ಕುಲಕರ್ಣಿ, ಜಯತೀರ್ಥಾಚಾರ್ಯ ಇಂಗಳೇಶ್ವರ ,ರಾಮಾಚಾರ್ಯ ಯಜುರ್ವೇದಿ, ಯಲಗೂರೇಶ ಯಜುರ್ವೇದಿ ,ಪ್ರಲ್ಹಾದ ಕುಲಕರ್ಣಿ, ನಾರಾಯಣ ಕುಲಕರ್ಣಿ, ಜಿ.ವ್ಹಿ. ಕುಲಕರ್ಣಿ, ಅನಂತ ಕುಲಕರ್ಣಿ ಹಾಗೂ ತಾಯಂದಿರು ಇದ್ದರು.
ದೇವರಹಿಪ್ಪರಗಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚಿಗೆ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಎಸ್.ಸಿ,ಎಸ್.ಟಿ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಸತ್ಯಗಳನ್ನು ಮರೆಮಾಚಿ ದ್ರೋಹ ಎಸುಗುವ ಕಾರ್ಯ ಮಾಡಿದೆ. ಇದಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೭ ಕೋಟಿ ಹಣ ಲೂಟಿ ಮಾಡಿದ ಪ್ರಕರಣವೇ ಸಾಕ್ಷಿಯಾಗಿದೆ. ಇವುಗಳನ್ನು ವಿರೋಧಿಸಿ ಜಿಲ್ಲಾ ಎಸ್.ಟಿ.ಮೋರ್ಚಾದಿಂದ ದಿ:೨೮ ರಂದು ಶುಕ್ರವಾರ ವಿಜಯಪುರದ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಎಲ್ಲ ಬಿಜೆಪಿ ಎಸ್.ಟಿ.ಮೋರ್ಚಾ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲು ಕರೆ ನೀಡಿದರು.ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಅನೀಲ ಜಮಾದಾರ, ರವಿ ವಗ್ಗಿ, ಭರತ ಕೋಳಿ, ಮಾಂತೇಶ ಬೇವೂರ, ಪ್ರಕಾಶ ದೊಡಮನಿ, ಮಹಾಂತೇಶ ಬಿರಾದಾರ, ಶರಣು ದಳವಾಯಿ, ಮಲ್ಲು ಕೋಲಕಾರ, ಭೀಮನಗೌಡ ಲಚ್ಯಾಣ, ಉಮೇಶ…
