ಬಸವನಬಾಗೇವಾಡಿ: ಪಟ್ಟಣದಲ್ಲಿರುವ ಉತ್ತರಾದಿ ಮಠಕ್ಕೆ ಮಂಗಳವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಉತ್ತರಾದಿ ಮಠಾಧೀಶರಾದ ಪರಮಪೂಜ್ಯ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಭೇಟಿ ನೀಡಿದರು.
ಶ್ರೀಮಠದ ಅಧ್ಯಕ್ಷ ವಸಂತಾಚಾರ್ಯ ಇಂಗಳೇಶ್ವರ ಹಾಗೂ ಅರ್ಚಕ ವಾದಿರಾಜಾಚಾರ್ಯ ಯಜುರ್ವೇದಿ ಅವರು ಜಯಘೋಷಗಳ ಮೂಲಕ ಗೌರವಪೂರ್ವಕವಾಗಿ ಶ್ರೀಗಳನ್ನು ಬರಮಾಡಿಕೊಂಡರು.
ಶ್ರೀಮಠದಲ್ಲಿರುವ ಚತುಷ್ಟ ಯತಿಗಳ ವೃಂದಾವನಕ್ಕೆ ಶ್ರೀಗಳು ಮಂಗಳಾರತಿ ಮಾಡಿ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು. ಶ್ರೀಮಠದ ಕಾರ್ಯಚಟುವಟಿಕೆಗಳ ಬಗ್ಗೆ ಕೆಲ ಕಾಲ ಭಕ್ತರೊಂದಿಗೆ ಚರ್ಚಿಸಿದರು. ನಂತರ ಉಪಸ್ಥಿತ ಸದ್ಭಕ್ತರಿಗೆ ಫಲ ಮಂತ್ರಾಕ್ಷತೆಯನ್ನು ನೀಡಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ನರಹರಿಆಚಾರ್ಯ ಜೋಶಿ, ಕಾರ್ಯದರ್ಶಿ ವಸಂತರಾವ ಕುಲಕರ್ಣಿ, ಹಿರಿಯರಾದ ರಾಮಾಚಾರ್ಯ ಜೋಶಿ, ವಿಠ್ಠಲರಾವ ಕುಲಕರ್ಣಿ, ಪ್ರಲ್ಹಾದರಾವ ಕುಲಕರ್ಣಿ, ಜಯತೀರ್ಥಾಚಾರ್ಯ ಇಂಗಳೇಶ್ವರ ,ರಾಮಾಚಾರ್ಯ ಯಜುರ್ವೇದಿ, ಯಲಗೂರೇಶ ಯಜುರ್ವೇದಿ ,ಪ್ರಲ್ಹಾದ ಕುಲಕರ್ಣಿ, ನಾರಾಯಣ ಕುಲಕರ್ಣಿ, ಜಿ.ವ್ಹಿ. ಕುಲಕರ್ಣಿ, ಅನಂತ ಕುಲಕರ್ಣಿ ಹಾಗೂ ತಾಯಂದಿರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

