ಬಸವನಬಾಗೇವಾಡಿ: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ೨೦೨೪-೨೫ ಸಾಲಿಗೆ ಶಾಲಾ ಸುಧಾರಣಾ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಗೊಂಡ ಬಸವರಾಜ ಶೆಂಡೆ, ಮಹಿಳಾ ಸದಸ್ಯೆಯಾಗಿ ನೇಮಕಗೊಂಡ ದೀಪಾ ನಾಯ್ಕೋಡಿ ಅವರನ್ನು ಮಂಗಳವಾರ ಸಂಜೆ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಶ್ರೀಮಠದಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಶ್ರೀಮಠದ ಶಿಷ್ಯ ಬಳಗದಲ್ಲಿರುವ ಇಬ್ಬರನ್ನು ಕಾಲೇಜಿನ ಸುಧಾರಣಾ ಸಮಿತಿಗೆ ನೇಮಕ ಮಾಡಿರುವದು ಸಂತಸದಾಯಕ ಸಂಗತಿ. ನೂತನ ಸಮಿತಿ ಸದಸ್ಯರು ಕಾಲೇಜಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಕಾಲೇಜಿನಲ್ಲಿ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಳು ನಡೆಯುವಂತೆ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಸಂಗಪ್ಪ ಡಂಬಳ, ಬಸವರಾಜ ಗಚ್ಚಿನವರ, ಬಸವರಾಜ ಕಿಣಗಿ, ಲಕ್ಷ್ಮೀ ನಾಯ್ಕೋಡಿ, ಚಂದ್ರಶೇಖರ ಗೊಳಸಂಗಿ, ಗಿರಿಮಲ್ಲಪ್ಪ ಮೇಟಿ, ವಿರೇಶ ಹಿರೇಮಠ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

